ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ.

ಶ್ರೀರಾಮ ವಿದ್ಯಾಸಂಸ್ಥೆಯ ಪಟ್ಟೂರಿನ ಪ್ರಾರ್ಥನಾ ಸ್ಥಳ ವೇದವ್ಯಾಸ ಧ್ಯಾನಮಂಟಪದಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿ ಹಾಗೂ ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಅ. 2 ರಂದು ಆಚರಿಸಲಾಯಿತು.

Img 20241005 Wa0009

ಶಾಲಾ ವಿದ್ಯಾರ್ಥಿ ನಾಯಕ ಹತ್ತನೇ ತರಗತಿಯ ತಿಲಕ್ ಕೆ. ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದನು. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಲಾಲ್ ಬಹುದ್ದೂರ್ ಶಾಸ್ತ್ರಿ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಪ್ರಣಾಮಗಳನ್ನು ಸಲ್ಲಿಸಿದರು.

Img 20241005 Wa0010

ವಿಶಾಲವಾದ ಭಾರತ ಭೂಮಿಯಲ್ಲಿ ಅಲ್ಲಲ್ಲಿ ಕೆಲವೊಂದು ಪ್ರದೇಶಗಳಿಗೆ ಸೀಮಿತವಾಗಿದ್ದ ಬ್ರಿಟಿಷರ ವಿರುದ್ಧದ ಸ್ವಾತಂತ್ರ ಹೋರಾಟವನ್ನು ಭಾರತದ ಮೂಲೆಗಳಲ್ಲಿರುವ ಪಸರಿಸುವ ಮೂಲಕ ಜನಸಾಮಾನ್ಯರು ಬ್ರಿಟಿಷರ ವಿರುದ್ಧ ಸಂಘಟಿತ ಹೋರಾಟ ನಡೆಸುವಂತೆ ಮಾಡಿದ ಕೀರ್ತಿ ಮಹಾತ್ಮ ಗಾಂಧೀಜಿಯವರಿಗೆ ಸಲ್ಲುತ್ತದೆ.. ಪ್ರಸ್ತುತ ನಾವು ಸಂತಸದಿಂದ ಅನುಭವಿಸುತ್ತಿರುವ ಸ್ವಾತಂತ್ರ್ಯವನ್ನು ಪರಕೀಯದಿಂದ ಸ್ವಾಧೀನ ಪಡಿಸಿಕೊಳ್ಳಲು ಅನೇಕ ಮಹನೀಯರು ತಮ್ಮ ತನು ಮನ ಧನವನ್ನು ಧಾರೆ ಎರೆದಿದ್ದಾರೆ ಬಲಿದಾನ ನೀಡಿದ್ದಾರೆ.

Img 20241005 Wa0007

ಇತಿಹಾಸದ ಪುಟಗಳಲ್ಲಿ ನಮೂದಾಗಿರುವವರನ್ನು ನಾವು ನೆನಪಿಸಿಕೊಳ್ಳುತ್ತೇವೆ ಆದರೆ ಇತಿಹಾಸದ ಪುಟ ಸೇರದ ಅದೆಷ್ಟು ಮಹಾನ್ ಚೇತನಗಳು ಸ್ವಾತಂತ್ರ್ಯಕ್ಕಾಗಿ ತೆರೆಮರೆಯಲ್ಲಿ ಹೋರಾಡಿ ಮಡಿದಿದ್ದಾರೆ, ಅಮರರಾಗಿದ್ದಾರೆ. ಇಂದು ನಾವು ಮಹಾತ್ಮ ಗಾಂಧಿಜೀಯವರ ಜೀವನದ ಮಹಾನ್ ಆದರ್ಶಗಳಾದ ಸತ್ಯಶೋಧನೆ, ಅಹಿಂಸೆ, ಸಾಮರಸ್ಯ, ಸಹಬಾಳ್ವೆ, ಅಸ್ಪೃಶ್ಯತೆ ನಿರ್ಮೂಲನೆ ಮುಂತಾದ ಧೋರಣೆಗಳನ್ನು ಇಂದಿನ ಸಮಾಜ ಮೈಗೂಡಿಸಿಕೊಳ್ಳಬೇಕಾದದ್ದು ಅತ್ಯಗತ್ಯ..

Img 20241005 Wa0008

ಈ ದಿನ ಇನ್ನೊಬ್ಬ ಮಹಾನ್ ಚೇತನ ಭಾರತದ ಎರಡನೇ ಪ್ರಧಾನ ಮಂತ್ರಿ ಹಾಗೂ ‘ಜೈ ಜವಾನ್ ಜೈ ಕಿಸಾನ್’ ಎನ್ನುವ ಶ್ರೇಷ್ಠ ಘೋಷಣೆಯನ್ನು ನೀಡಿದ ಮಹಾನ್ ಮುತ್ಸದ್ದಿ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜನ್ಮದಿನ ಸಹ ಹೌದು.. ಇವರು 1965ರ ಕಾಲಘಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧವನ್ನು ಸಮರ್ಥವಾಗಿ ಎದುರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.. ದೇಶದ ಕಷ್ಟದ ಸಮಯದಲ್ಲಿ ದುರ್ಬಲ ಆರ್ಥಿಕ ಪರಿಸ್ಥಿತಿ ಇರುವಾಗ ದೇಶವನ್ನು ಸಮರ್ಥವಾಗಿ ನಡೆಸಿದ ಮಹಾನ್ ವ್ಯಕ್ತಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು.. ಇಂದು ನಾವು ಮಹಾತ್ಮ ಗಾಂಧಿಜೀಯವರ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜೀ ಅವರ ಜನ್ಮದಿನದಂದು ಅವರ ಆದರ್ಶ ಹಾಗೂ ಚಿಂತನೆಗಳನ್ನು ಇಂದಿನ ಪೀಳಿಗೆಯು ಮೈಗೂಡಿಸಿಕೊಳ್ಳಬೇಕು ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ್ ಶೇಟ್ ಇವರು ವಿದ್ಯಾರ್ಥಿಗಳಿಗೆ ತಿಳಿಸಿದರು..

ಕಾರ್ಯಕ್ರಮದಲ್ಲಿ ಪಟ್ಟೂರು ಅಂಗನವಾಡಿ ಕೇಂದ್ರದ ಸಿಬ್ಬಂದಿಗಳು ಹಾಗೂ ಪುಟಾಣಿಗಳು ಭಾಗವಹಿಸಿದ್ದರು.. ನಂತರ ಶಾಲಾ ಸ್ವಚ್ಛತೆ ಕಾರ್ಯವು ನಡೆಸಲಾಯಿತು..ಇಂದು ಶೈಕ್ಷಣಿಕ ವರ್ಷ 2024 25 ನೇ ಸಾಲಿನ ಪ್ರಾರಂಭದ ಅರ್ಧ ಭಾಗದ ಕೊನೆಯ ದಿನವಾಗಿದ್ದು.. ನಾಳೆಯಿಂದ ಮಧ್ಯಾವಧಿ ಅಂದರೆ ದಸರಾ ರಜೆಗಳು ಪ್ರಾರಂಭವಾಗಲಿದೆ ಎಂಬ ಸೂಚನೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು..ಎಲ್ಲರಿಗೂ ದಸರಾ ಹಬ್ಬದ ಹಾಗೂ ರಜೆಯ ಶುಭಾಶಯಗಳನ್ನು ತಿಳಿಸಲಾಯಿತು..

0 ಕಾಮೆಂಟ್‌ಗಳು