ಉಪ್ಪಿನಂಗಡಿ ವಿಷ ಸೇವಿಸಿ ಅಪ್ರಾಪ್ತೆ ಆತ್ಮಹತ್ಯೆ...!

ಉಪ್ಪಿನಂಗಡಿ: ಹೈಸ್ಕೂಲ್ ವಿದ್ಯಾರ್ಥಿಯೋರ್ವಳು ಕೀಟ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ವರದಿಯಾಗಿದೆ.ಉಪ್ಪಿನಂಗಡಿ ಪ್ರೌಢ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ.ಇಳಂತಿಲ ಗ್ರಾಮದ ಪಾರಡ್ಕ ಮನೆ ನಿವಾಸಿ ಹ#ರ್ಷಿತಾ(15 ವರ್ಷ) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.

ಮೃತ ಬಾಲಕಿ ದಿನಾಂಕ: 04-11-2025 ರಂದು ತಲೆನೋವು ಎಂದು ಹೇಳಿ ಶಾಲೆಗೆ ಮನೆಯಲ್ಲಿದ್ದು ಮನೆಯಲ್ಲಿ ತಂದಿಟ್ಟಿದ್ದ ಹುಲ್ಲಿಗೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಅಸ್ವಸ್ಥಗೊಂಡ ಬಾಲಕಿಯನ್ನು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸುತ್ತಾರೆ.ಇಂದು ಸುಮಾರು ಮದ್ಯಾಹ್ನ ವೇಳೆ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬಾಲಕಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಳೆ.
ಇನ್ನು ಮೃತ ಬಾಲಕಿಗೆ ಕಡಬದ ಮೂರಾಜೆ ನಿವಾಸಿ ರಾ#ಜೇಶ್ ಎಂಬಾತನು ಫೋನ್ ಮಾಡಿ ಕಿರುಕುಳ ನೀಡಿರುವ ಸಾಧ್ಯತೆ ಇರುವುದರಿಂದ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಂಶಯ ಇರುತ್ತದೆ. ಅವಳ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಅಥವಾ ಕಾರಣ ತಿಳಿದಿರುವುದಿಲ್ಲ ಎಂದು ತಂದೆ ಪೊಲೀಸರಿಗೆ ದೂರು ನೀಡಿದ್ದು ಸತ್ಯಾ ಸತ್ಯತೆ ತನಿಖೆ ಬಳಿಕವಷ್ಟೇ ಹೊರಬೀಳಬೇಕಿದೆ.

0 ಕಾಮೆಂಟ್‌ಗಳು