ಬಿಳಿನೆಲೆ ಗ್ರಾಮದ ಮುಂಗ್ಲಿ ನಿವಾಸಿ ಸಂದೀಪ್ ಎಂಬವರು ನ.27 ರಂದು ನಾಪತ್ತೆಯಾಗಿದ್ದು ನೆಟ್ಟಣದ ಪ್ರತೀಕ್ ಎಂಬಾತನ ಜೊತೆ ಕಾರಲ್ಲಿ ಹೋಗಿರುವ ಬಗ್ಗೆ ಶಾಮಿಯಾನ ಮಾಲಕ ಮನೆಯವರಿಗೆ ತಿಳಿಸಿರುವುದಾಗಿ ನಾಪತ್ತೆಯಾದ ಯುವಕನ ತಾಯಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದರಂತೆ.
ಕೊಲೆ ಮಾಡಿರುವ ಶಂಕೆ ವ್ಯಕ್ತವಾದ ಹಿನ್ನಲೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.ಇನ್ನು ವಿಚಾರ ತಿಳಿದ ಜನ ನೂರಾರು ಸಂಖ್ಯೆಯಲ್ಲಿ ಬಿಳಿನೆಲೆ ಮತ್ತು ನೆಟ್ಟಣದಲ್ಲಿ ಸೇರಿದ್ದು ನೆಟ್ಟಣ ಹಾಗು ಬಿಳಿನೆಲೆ ಕಾಡು ಪ್ರದೇಶದಲ್ಲಿ ಹುಡುಕುವ ಕಾರ್ಯ ನಡೆಸುತ್ತಿದ್ದಾರೆ,
ಇನ್ನು ಈ ಬಗ್ಗೆ ಕಡಬ ಠಾಣಾ ಉಪನಿರೀಕ್ಷರು ಮಾಹಿತಿ ನೀಡಿ ಎಲ್ಲಾ ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದಿದ್ದಾರೆ.
ಇನ್ನು ಸಾರ್ವಜನಿಕರ ಮಾಹಿತಿ ಪ್ರಕಾರ ಪ್ರತೀಕ್ ಎಂಬಾತ ಗಾಂಜಾ ವ್ಯಸನಿ ಅಂತೆ ಈತನ ಮೇಲೆ ಈ ಹಿಂದೆ ಹಲವಾರು ಪ್ರಕರಣಗಳು ಇದ್ದು ಈ ಪ್ರತೀಕ್ ಗೆ ಅಕ್ಷಯ ಕಲ್ಲೇಗ ಹತ್ಯೆ ಮಾಡುವ ವಿಚಾರ ನಾಲ್ಕು ದಿನಗಳ ಹಿಂದೆಯೇ ತಿಳಿದಿತ್ತು ಅಂತೆ,ಇನ್ನು ಅಕ್ಷಯ ನನ್ನು ಕೊಂದ ಟೀಮ್ ನಲ್ಲೆ ಇದೆ ಪ್ರತೀಕ್ ಕೂಡ ಇದ್ದನಂತೆ ಸದ್ಯ ಕಡಬದಲ್ಲಿ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಪ್ರತೀಕ್ ನೇತೃತ್ವದಲ್ಲಿ ಅದೇ ಟೀಮ್ ಕೊಲೆ ಮಾಡಿದ್ದು, ಪ್ರಕರಣ ಮುಚ್ಚಿ ಹಾಕಲು ಬಿಳಿನೆಲೆಯ ಸ್ಥಳೀಯ ಕಾಂಗ್ರೆಸ್ ಮುಖಂಡನೊಬ್ಬ ಶತಾಯ ಗತಾಯ ಪ್ರಯತ್ನ ಮಾಡ್ತಾ ಇದ್ದಾರೆ ಅಂತೆ ಎಂಬ ಗುಸು ಗುಸು ಸುದ್ದಿ ಹರಿದಾಡುತ್ತಿದ್ದು ಪ್ರತೀಕ್ ನನ್ನು ಪೊಲೀಸರು ಸರಿಯಾಗಿ ಬೆಂಡೆತ್ತಿದರೆ ಸತ್ಯ ಸಂಗತಿ ಹೊರ ಬರಬಹುದು ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ ಎಂದು ಎನ್ನಲಾಗಿದೆ.
0 ಕಾಮೆಂಟ್‌ಗಳು