ಕಡಬ ಶ್ರೀ ಅನಂತಪದ್ಮನಾಭ ಶ್ರೀ ಕ್ಷೇತ್ರ ಕೊಂಡಪ್ಪಾಡಿಯಲ್ಲಿ ನೂತನ ಶ್ರೀ ಅನಂತ ಪದ್ಮನಾಭ ಸೇವಾ ಮಂಟಪ ಲೋಕಾರ್ಪಣೆ.

ಕಡಬ; ನ, 6, ರಾಮಕುಂಜ ಗ್ರಾಮ, ಶ್ರೀ ಅನಂತಪದ್ಮನಾಭ ಶ್ರೀಕ್ಷೇತ್ರ ಕೊಂಡಪ್ಪಾಡಿಯಲ್ಲಿ,

 

Img 20241006 Wa0012

ನೂತನವಾಗಿ ನಿರ್ಮಾಣವಾದ ಶ್ರೀ ಅನಂತಪದ್ಮನಾಭ ಸೇವಾ ಮಂಟಪ ನವರಾತ್ರಿ ಆರಾಧನೆಯ ಶುಭ ಸಂದರ್ಭದಲ್ಲಿ , ನ,6 ರಂದು,ಉದಯ ಕಾಲದಲ್ಲಿ ಮಹಾಗಣಪತಿ ದೇವರಿಗೆ ಗಣಪತಿ ಹವನ, ಶ್ರೀ ದುರ್ಗಾಪರಮೇಶ್ವರಿಗೆ ದುರ್ಗಾ ಹೋಮ ನಡೆದು, ಲೋಕಾರ್ಪಣೆಗೊಂಡಿದೆ.

Img 20241006 Wa0011

ವಿದ್ವಾನ್ ಪಂಜ ಭಾಸ್ಕರ ಭಟ್, ಧಾರ್ಮಿಕ ಉಪನ್ಯಾಸ ನೀಡಿದರು.

ಭಗವದ್ಭಕ್ತರು ಎಲ್ಲಾಸೇರಿ ಶ್ರೀ ದೇವರ ಮುಂದೆ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ದೇವರ ಸ್ತುತಿ ನಡೆಸಿದರು.ಮಧ್ಯಾಹ್ನ ಅನಂತಪದ್ಮನಾಭ ಶ್ರೀ ದೇವರಿಗೆ ಮಹಾ ಮಂಗಳಾರತಿ ನಡೆಯಿತು.

Img 20241006 Wa0013

ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಿ, ನೂತನ ಮಂಟಪದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮುಕ್ತೇಸರಾದ ಗೋಕುಲ್, ಸಾಮಾಜಿಕ ಕಾರ್ಯಕರ್ತ ನಾರಾಯಣ ಭಟ್, ಉದ್ಯಮಿ ಕೃಷ್ಣಮೂರ್ತಿ ಕಲ್ಲೇರಿ , ಅರ್ಚಕರಾದ ರಾಮ ಶಂಕರ ಮುಚಿಂತಾಯ, ಅನಂತಕುಮಾರ್,ಪರ್ಲತ್ತಾಯ ಪ್ರತಿಷ್ಠಾನದ ರವಿರಾಜ್ ಹಾಗೂ ಉತ್ಸವ ಸಮಿತಿಯ ಪದಾಧಿಕಾರಿಗಳು, ಭಗವದ್ಭಕ್ತರು ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು