ಅ. 2ರಂದು ಗಾಂಧಿ ಜಯಂತಿ ಅಂಗವಾಗಿ,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಹೆಕ್ಕೂರು ಅಂಗನವಾಡಿ ಕೇಂದ್ರ ಹಾಗೂ ಕಸ್ವಿ ಹಸಿರು ದಿಬ್ಬಣ ಇದರ ಜಂಟಿ ಆಯೋಜನೆಯಲ್ಲಿ *ಗಾಂಧಿ ಜಯಂತಿ* ಆಚರಿಸಲಾಯಿತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಕಸ್ವಿ ಹಸಿರು ದಿಬ್ಬಣ ದಿಂದ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಕೇಶವ ರಾಮಕುಂಜ ಮಾತನಾಡಿ ಸ್ವಾಸ್ಥ್ಯ ಸಮಾಜದ ಒಳಿತಿಗಾಗಿ ಅಂಗನವಾಡಿಯ ಮಹತ್ವ ಹಾಗೂ ಅಂಗನವಾಡಿ ಕೇವಲ ಶೈಕ್ಷಣಿಕವಾಗಿಲ್ಲದೆ ಅದು ಸರಕಾರ ಮತ್ತು ಸಮಾಜದ ಜತೆಗಿನ ಕೊಂಡಿಯಂತೆ ಕೆಲಸ ಮಾಡುತ್ತಿದೆ ಎಂದರು.ಶ್ರೀಮತಿ ಉಷಾ ಅವರು ಮಾತನಾಡಿ ಸರಕಾರದ ಯೋಜನೆಗಳ ಮಾಹಿತಿ ನೀಡಿದರು.

ಇದೆ ಸಂದರ್ಭ ಕೇಶವರವರು ಅಂಗನವಾಡಿಗೆ ಗಾರ್ಡನ್ ಮಾಡಿ ಗಿಡ ನೆಟ್ಟು ಹುಟ್ಟುಹಬ್ಬ ಆಚರಿಸಿದರು.
ಮಕ್ಕಳಿಗೆ ಮತ್ತು ಪೋಷಕರಿಗೆ ಸಿಹಿ ತಿಂಡಿ ಹಂಚಿ ಸಂಭ್ರಮಿಸಲಾಯಿತು.
ಈ ಸಂದರ್ಭ ಪರಿಸರ ಪ್ರೇಮಿ ದಿನೇಶ್ ಕೋಡಿಯಾಲಬೈಲ್ , ಭರತ್ ಕೈಕಂಬ, ಶ್ರೀಮತಿ ಶ್ರದ್ಧಾ ರಾಮಕುಂಜ ಪೋಷಕರು ಮಕ್ಕಳು ಭಾಗವಹಿಸಿದ್ದರು
0 ಕಾಮೆಂಟ್‌ಗಳು