ನೆಲ್ಯಾಡಿ :ಸ,10,ನೆಲ್ಯಾಡಿ ಗಣೇಶೋತ್ಸವದ ವೈಭವದ ಶೋಭಾಯಾತ್ರೆಯಲ್ಲಿ *ಶಾಸ್ತಾರ ಫ್ರೆಂಡ್ಸ್ ನೆಲ್ಯಾಡಿ* ನಿರ್ಮಾಣದ ದೇಶಭಿಮಾನ ಮೂಡಿಸುವ ಸ್ಥಬ್ದ ಚಿತ್ರಕ್ಕೆ ಬಾರಿ ಮನ್ನಣೆ
ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ ಹಾರ್ಪಳ ನೆಲ್ಯಾಡಿ ಸಂಘದ ಸದಸ್ಯರು ತಾವೇ ನಿರ್ಮಾಣಮಾಡಿದ್ದ, “ಕಾರ್ಗಿಲ್ 25 ನೇ ವಿಜಯೋತ್ಸೋವದ ನೆನಪಿಗಾಗಿ ” ಪ್ರಸ್ತುತ ಪಡಿಸಿದ ಸ್ತಬ್ದ ಚಿತ್ರವು ಮಿಲಿಟರಿ ಸಾಧನ ಗಳ ಬಗ್ಗೆ ಸಂಪೂರ್ಣ ಅರಿವು ಇಲ್ಲದವರಿಗೆ ಅದೊಂದು ಮಾದರಿ ಚಿತ್ರ ವಾಗಿ ಬಿಂಬಿತವಾಗಿದ್ದು, ಇನ್ನೂ ಅನೇಕ ದೇಶಭಕ್ತರಿಗೆ ದೇಶಾಭಿಮಾನ ಮೂಡಿಸುವ ಸ್ಫೂರ್ತಿಯ ಸ್ತಬ್ದ ಚಿತ್ರವಾಯಿತು , ಈ ನಿಟ್ಟಿನಲ್ಲಿ ಶಾಸ್ತಾರ ಪ್ರೆಂಡ್ಸ್ ಕುತ್ರಾಡಿ ಹಾರ್ಪಳ ಸಂಘಟನೆಯು ತಾವೇ ತಯಾರಿಸಿದ ಸ್ತಬ್ದ ಚಿತ್ರ ಸಾವಿರಾರು ನೋಡುಗರ ಕನ್ಸೆಳೆಯಿತು ಸೆಳೆಯಿತು…

ಕಾರ್ಗಿಲ್ ಕದನದಲ್ಲಿ ಪಾಕಿಸ್ತಾನವನ್ನು ಹೀನಾಯಾವಾಗಿ ಸೋಲಿಸಲು ಬೋಫೋರ್ಸ್ ಪಿರಂಗಿಗಳು ಪ್ರಮುಖ ಪಾತ್ರ ವಹಿಸಿದ್ದವು, ಅದೇ ಬೋಫೋರ್ಸ್ ಪಿರಂಗಿಗಳು ಇಂದು ಆರ್ಟಿಲರಿ ಗನ್ ಗಳಂತೆ ಬದಲಾಗಿದೆ,ಇಂದು ಆಧುನಿಕವಾಗಿ ಆರ್ಟಿಲರಿ ಗನ್ ಗಳು ದೇಶದ ಸೈನ್ಯಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ.
ಶಾಸ್ತಾರ ಫ್ರೆಂಡ್ಸ್ ಪ್ರಸ್ತುತ ಪಡಿಸಿದ ಈ ಸ್ತಬ್ದ ಚಿತ್ರಕ್ಕೆ ಸಂಘದ ಸದಸ್ಯರು ನಿವೃತ್ತ ಸೇನಾ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಸಂಘದ ಸದಸ್ಯರು ತಾವೇ ಕೆಲಸ ಮಾಡಿ ಈ ಗನ್ ನ ರಚನೆ ಮಾಡಿರುತ್ತಾರೆ
0 ಕಾಮೆಂಟ್‌ಗಳು