ಕುಕ್ಕೆ ಸುಬ್ರಹ್ಮಣ್ಯ: ಸೆ, 19: ಏನೆಕಲ್ಲು ಗ್ರಾಮದ ಬಾನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಯೋಗ ಖಾತರಿ ಯೋಜನೆ ಹಾಗೂ ತಾಲೂಕು ಪಂಚಾಯತ್ ಅನುದಾನದ ರೂ. 5,20,000/= ದಲ್ಲಿ ವಿಕಲಚೇತನ ಸ್ನೇಹಿ ಶೌಚಾಲಯವನ್ನು ಬುಧವಾರ ಸುಳ್ಯ ಶಾಸಕಿ ಭಾಗಿರತಿ ಮುರುಳ್ಯ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸುಬ್ರಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ ನಾಯರ್ ಶಾಲಾ ವಿದ್ಯಾರ್ಥಿಗಳಿಗೆ ಕೊಡ ಮಾಡಿದ ಗುರುತಿನ ಪತ್ರಗಳನ್ನ ಶಾಸಕರು ವಿದ್ಯಾರ್ಥಿಗಳಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ. ಸಿ.ಅಧ್ಯಕ್ಷ ವಿಶ್ವನಾಥ ಬಾಲಾಡಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಸುಜಾತ ಕಲ್ಲಜೆ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶಿವರಾಮ ನಿಕ್ರಾಜೆ, ಭವ್ಯ ಜೇನುಕೊಡಿ, ಪುಷ್ಪಲತಾ, ಜಯಂತಿ ಪರಮಲೆ, ಮೋಹನ ಗೌಡ ಕೋಟಿ ಗೌಡನ ಮನೆ.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ, ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರುಗಳು ವಿದ್ಯಾರ್ಥಿ ವಿರುದ್ಧ ಅಂಗನವಾಡಿ ಪುಟಾಣಿಗಳು ಊರ ಗಣ್ಯರು ಪೋಷಕರು ಅಂಗನವಾಡಿ ಸಿಬ್ಬಂದಿಯವರು ಈ ಸಂದರ್ಭದಲ್ಲಿ ಹಾಜರಿದ್ದರು.
0 ಕಾಮೆಂಟ್‌ಗಳು