ಮರಗಳ ಮಾರಣಹೋಮ! ಅರಣ್ಯ ಅಧಿಕಾರಿಗಳ ಮೌನ -ಪ್ರಕೃತಿ ವಿಕೋಪಕ್ಕೆ ದಾರಿ!

ಪ್ರಕೃತಿ ನಾಶ ಪಡಿಸಿದರೆ ಮನುಷ್ಯನಿಗೆ ಉಳಿಗಾಲವೇ? ಕೊರೋನ ಸಂದರ್ಭದಲ್ಲಿ ಆಮ್ಲಜನಕಕ್ಕೆ  ಗಂಟೆಗೆ 10 ಸಾವಿರ ಕೊಡುವ ಈ ಕಾಲದಲ್ಲಿ ಇದ್ದ ಮರವನ್ನ ನಾಶಪಡಿಸುವುದು ಎಷ್ಟು ಸರಿ?

ಕಡಬ :ಸ,7, ಪ್ರಕೃತಿಪ್ರಿಯರು, ಮುಂದಾಲೋಚನೆ ಇರುವಂತವರು, ಪ್ರಜ್ಞಾವಂತ ನಾಗರಿಕರು  ಕಾಡು ನಾಶ ಆಗಬಾರದು, ಮರ, ಗಿಡಗಳನ್ನು ಕಡಿಯಬಾರದು,ತಾನು ಗಿಡ ಮರಗಳನ್ನು ನೆಟ್ಟು ಮುಂದಿನ ಜನಾಂಗಕ್ಕೆ ಈ ಕಾಡು ಪ್ರಕೃತಿ, ನೆಲ, ಜಲ ಎಲ್ಲಾ ಉಳಿಯಬೇಕು ಎಂದು ಅದೆಷ್ಟೋ ಮಂದಿ ಪರಿಶ್ರಮ ಪಡುತ್ತಿದ್ದಾರೆ, ತಮ್ಮದೇ ಆದಂತ ಕೊಡುಗೆಯನ್ನು ಈ ಪ್ರಕೃತಿಗೆ ನೀಡುತ್ತಿದ್ದಾರೆ, ಈ ಮಧ್ಯೆ ಇಲ್ಲೊಂದು ಕಡೆ ಕಡಬ ತಾಲೂಕು, ಕಡಬ ಹೋಬಳಿ, ರಾಮಕುಂಜ ಗ್ರಾಮದ, ಸರ್ವೇ ನಂಬರ್ 42 ರಲ್ಲಿ ಗಿಡ ಮರಗಳ ಮರಣ ಹೋಮವೇ ನಡೆದಿದೆ.

Img 20240907 Wa0035

ರಾಮಕುಂಜ ದಿಂದ ಕಾಂಚನ ಭಾಗಕ್ಕೆ ತೆರಳುವ ರಸ್ತೆ ಬದಿಯಲ್ಲೇ ಗುಡ್ಡದ ಭಾಗದಲ್ಲಿ ಮರಗಳನ್ನು ಕಡಿದು ಗುಪ್ಪೆ ಹಾಕಲಾಗಿದೆ.

Img 20240907 Wa0029

ಆ ಮರ, ಗಿಡಗಳ ಮದ್ಯೆ ಅದೆಷ್ಟು ಜೀವಿಗಳು ಆಶ್ರಯ ಪಡೆಯುತ್ತಿದ್ದಾವೋ?ಅದೆಷ್ಟು ಪಕ್ಷಿಗಳಿಗೆ ಗೂಡು ಕಟ್ಟಿಕೊಂಡು ಜೀವನ ಮಾಡುತ್ತಿದ್ದಾವೋ?ಇದೀಗ ಮರಗಳನ್ನು ನಾಶ ಪಡಿಸಿದ್ದಾರೆ.

Img 20240907 Wa0030

ನಿಯಮದ ಪ್ರಕಾರ, ಸಾರ್ವಜನಿಕರು ತಮ್ಮ ಜಾಗ ಅಥವಾ ಜಮೀನಿನಲ್ಲಿ ಬೆಳೆದಿರುವ ಮರ ಕಡಿಯುವ ಮುನ್ನ ಡಿಸಿಎಫ್‌ ಬಳಿ ಅನುಮತಿ ಪಡೆಯಬೇಕಾಗುತ್ತದೆ. ಕರ್ನಾಟಕ ಅರಣ್ಯ ನಿಯಮದ ಪ್ರಕಾರ, ಗುತ್ತಿಗೆ ಪಡೆದ ಭೂಮಿಯಲ್ಲಿ ಬೆಳೆದ ಎಲ್ಲಾ ಮರಗಳನ್ನು ಮತ್ತು ಸಾಗುವಳಿಗೆ ನೀಡಿದ ಭೂಮಿಯಲ್ಲಿರುವ ಎಲ್ಲಾ ಮರಗಳನ್ನೂ ಸರ್ಕಾರಿ ಆಸ್ತಿ ಎಂದು ಘೋಷಿಸುತ್ತದೆ.

Img 20240907 Wa0031

 

ಅರಣ್ಯಾಧಿಕಾರಿಗಳಿಗೆ, ಇದ್ಯಾವುದೂ ಕಾಣಿಸುವುದಿಲ್ಲವೇ? ಅಧಿಕಾರಿಗಳೇ ಮೌನ ವಹಿಸಿದ್ದಾರೆ ಯಾಕೆ?ದೊಡ್ಡಮಟ್ಟದಲ್ಲಿ ಮರ, ಗಿಡಗಳನ್ನು ಕಡಿಯಲಾಗಿದೆ ಅರಣ್ಯಅಧಿಕಾರಿಗಳು ಅಲ್ಲದೆ ಸಂಬಂಧ ಪಟ್ಟ ಅಧಿಕಾರಿಗಳು ಯಾಕೆ ಗಮನಿಸುತ್ತಿಲ್ಲ?ಕಾಡಿನ ರಕ್ಷಣೆ ಮಾಡುವವರು ಯಾರು?

Img 20240907 Wa0031

ಮರ ಕಡಿದರೆ ಭೂಮಿಯ ಉಷ್ಣಾಂಶ ಹೆಚ್ಚಾಗಿ ವೈನಾಡಿನಲ್ಲಿ ನಡೆದಂತ ಘೋರ ದುರಂತಗಳು ನಡೆದು ಊರಿಗೆ ಊರೇ ಕೊಚ್ಚಿಕೊಂಡು ಹೋಗಿ ಪ್ರಾಣಹಾನಿಯ ಜೊತೆಗೆ ಮನೆ, ಮಠಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗುವುದಿಲ್ಲವೇ?ಮರ ಕಡಿದವರು ಬದಲಾಗಿ ಎಲ್ಲಾದರೂ ಒಂದು ಗಿಡ ನೆಟ್ಟಿದ್ದಾರ?

ಮರ ಕಡಿಯುವುದನ್ನು ತಡೆರಿ -ಮರ ಬೆಳೆಸಿ ಜೀವ ಉಳಿಸಿ:

ಈ ರೀತಿಯ ಘಟನೆಗಳು ನಡೆಯದಂತೆ ಸಂಬಂಧ ಪಟ್ಟ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಿ, ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಿ,ಕೊರೋನ ಸಂದರ್ಭದಲ್ಲಿ 1 ಗಂಟೆಗೆ 10 ಸಾವಿರ ಕೊಟ್ಟು ಆಸ್ಪತ್ರೆಗಳಲ್ಲಿ ಆಮ್ಲಜನಕ ಪಡೆದುಕೊಂಡಿದ್ದೇವೆ. ಸಾವಿರಾರು ರೂಪಾಯಿ ಆಮ್ಲಜನಕ ಉತ್ಪತ್ತಿ ಮಾಡುವ  ಮರವನ್ನ ನಾಶಪಡಿಸುವುದು ತಪ್ಪಲ್ಲವೆ?

ಪ್ರಕೃತಿ ವಿಕೋಪ ಗಳು :

ಪ್ರಕೃತಿ ವಿಕೋಪಗಳು ಸಂಭಾವಿಸದೆ ಇರಲಿ,ಅದೆಲ್ಲೋ ಮರಕಡಿದರೆ ನಮಗೇ ಏನೂ ತೊಂದರೆ ಹೇಳೋದು ಮೂರ್ಖತನ, ನಾವೆಲ್ಲ ಎಚ್ಚೆತ್ತುಕೊಳ್ಳಬೇಕು ನಮ್ಮ ಮುಂದಿನ ಜನಾಂಗಕ್ಕೆ ಪ್ರಕೃತಿಯನ್ನು ಉಳಿಸಬೇಕು,ಬೆಳೆಸಬೇಕು.ವಯನಾಡಿನಂತಹ ಘೋರ ದುರಂತ ಸಂಭವಿಸಿದರೆ,ಅಲ್ಲಿ ನಾನು,ಅವನು ಎಂಬುದನ್ನು ಹೇಳಲು ಅವಕಾಶವೇ ಸಿಗುವುದಿಲ್ಲ ಎಲ್ಲಾ ಕೊಚ್ಚಿಕೊಂಡು ಹೋಗಿರುತ್ತದೆ.

ಎಲ್ಲೂ ಆ ರೀತಿಯ ದುರ್ಘಟನೆಗಳು ಸಂಭವಿಸದೆ ಇರಲಿ ಜನಸಾಮಾನ್ಯರಿಗೆ ಒಳ್ಳೆದಾಗಲಿ ಎಂಬುದೇ ನಮ್ಮ ಆಶಯ.

0 ಕಾಮೆಂಟ್‌ಗಳು