ನೆಲ್ಯಾಡಿ- ಬೀಸಿದ ಸುಂಟರಗಾಳಿ-ಮನೆಗಳಿಗೆ ಹಾನಿ-ಎಲ್ಲೂ ಬಿಸದಗಾಳಿ ಇಲ್ಲಿ ಮಾತ್ರ ಯಾಕೆ ಜನರಲ್ಲಿ ಕುತೂಹಲ!

ನೆಲ್ಯಾಡಿ :ಸ,10 ರಂದು ರಾತ್ರಿ 11 ಸುಮಾರಿಗೆ ಮದ್ಯ ರಾತ್ರಿ ಹೊತ್ತಿಗೆ ನೆಲ್ಯಾಡಿಯ ಜನತಾ ಕಾಲೋನಿ ಎಂಬಲ್ಲಿ ಕೇವಲ 100 ಮೀಟರ್ ವ್ಯಾಪ್ತಿಯಲ್ಲಿ ಸುಳಿದ ದಿಡೀರ್ ಆರಂಭವಾದ ಸುಂಟರಗಾಳಿ ಹಲವು ಮನೆಗಳಿಗೆ ಹಾನಿಯೆಸಗಿದೆ ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್ ಬಾಣಜಾಲು, ಸಂಕಪ್ಪ ಶೆಟ್ಟಿ, ಇಸುಬು,ಅಣ್ಣು, ಪ್ರಕಾಶ್,ಇವರ ಮನೆಗಳ ಮಾಡಿನ ಶೀಟುಗಳು ಹಾನಿಯಾಗಿದೆ.

Img 20240911 Wa0030

ಗಾಳಿಯ ರಭಸಕ್ಕೆ ಲೋಕೇಶ್ ಬಾಣಜಾಲ್ ರವರ ಮನೆಯ ಕಿಟಕಿಬಾಗಿಲಿನ ಬಳಿ ಗೋಡೆ ಬಿರುಕು ಬಿಟ್ಟಿದೆ, ಉಳಿದ ಮನೆಗಳ ಮಾಡಿನ ಶೀಟುಗಳು ಹಾರಿ ಹೋಗಿವೆ, ಅಲ್ಲದೆ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಕಂಬ ಮಗುಚಿ ಬಿದ್ದಿದೆ ಒಟ್ಟಿನಲ್ಲಿ ಕೆಲವೇ ನಿಮಿಷಗಳಲ್ಲಿ ಹಲುವು ಸಾವಿರ ರೂಪಾಯಿ ನಷ್ಟಸಂಭವಿಸಿದೆ.Img 20240911 Wa0026

ಲೋಕೇಶ್ ಬಾಣಾಜಾಲ್. ಗ್ರಾಮ ಪಂಚಾಯತ್ ಅಧ್ಯಕ್ಷರು ಕೌಕ್ರಾಡಿ…

ಸುಮಾರು ರಾತ್ರಿ 11.30 ರ ಹೊತ್ತಿಗೆ ಜೋರಾಗಿ ಬಂದ ಗಾಳಿಗೆ ಕಿಟಕಿ ಬಾಗಿಲು ಹಾಕಿದ್ದ ಕಾರಣ ಗಾಳಿಯ ರಭಸಕ್ಕೆ ನಮ್ಮ ಮನೆಯ ಗೋಡೆ ಬಿರುಕು ಬಿಟ್ಟಿದೆ, ಅಕ್ಕ ಪಕ್ಕದ ಮನೆಯ ವರೆಲ್ಲ ಶಬ್ದ ಕೇಳಿ ರಸ್ತೆಯಲ್ಲಿ ಬಂದು ನಿಂತಿದ್ದೆವು, ನೋಡಿದರೆ ನಮ್ಮ ಹತ್ತಿರದ ನಾಲ್ಕು ಮನೆಗಳ ಮಾಡಿನ ಶೀಟು ಹಾರಿ ಹೋಗಿತ್ತು.ಬೇರೆಲ್ಲೂ ಗಾಳಿ ಬಿಸದೆ ಒಂದೇ ಜಾಗದಲ್ಲಿ ಈ ರೀತಿ ಗಾಳಿ ಬಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

0 ಕಾಮೆಂಟ್‌ಗಳು