ಮಂಗಳೂರು:ಸ,03, ಸೆಪ್ಟೆಂಬರ್ 06 ರಂದು ಗೌರಿ ಗಣೇಶ ಹಬ್ಬವು ಆರಂಭಗೊಂಡು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಬೃಹತ ಮೆರವಣಿಗೆ ಮೂಲಕ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿ, ನಂತರ ಪ್ರತಿಷ್ಟಾಪಿಸಿದ ಸ್ಥಳದಿಂದ ನದಿ/ಕೆರೆ/ಹೊಳೆ/ಬಾವಿಗಳಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ಮೂಲಕ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ.
ದ.ಕ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ 221 ಕಡೆಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಿ ವಿಸರ್ಜನೆ ಮಾಡಲಾಗುತ್ತದೆ. ಅದೇ ರೀತಿ ಸ,15-16/09/2024 ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬವನ್ನು ಆಚರಿಸಲಿರುತ್ತಾರೆ. ದ.ಕ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಸ,06,ರಿಂದ ಸ,13,ರ ವರೆಗೆ ಒಟ್ಟು 221 ಕಡೆಗಳಲ್ಲಿ ಸಾರ್ವಜನಿಕ ಗಣೇಶ ಮಹೋತ್ಸವವನ್ನು ಆಚರಣೆ ಮಾಡಲಿರುವರು, ಇವುಗಳಲ್ಲಿ ಅತೀ ಸೂಕ್ಷ್ಮ-8. ಸೂಕ್ಷ್ಮ-53 ಸಾಮಾನ- 160 ಪ್ರತಿಷ್ಟಾಪನಾ ಮೆರವಣಿಗೆಗಳೆಂದು ಪರಿಗಣಿಸಲಾಗಿರುತ್ತದೆ. ಈ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ಧ ರೀತಿಯಲ್ಲಿ ಆಚರಣೆಯನ್ನು ನಡೆಸಬೇಕಾದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಗೆ ಸಂಬಂಸಿದಂತೆ ಎಲ್ಲಾ ಧರ್ಮದ ಹಿರಿಯ ಮುಖಂಡರುಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕರೆಸಿ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆಯನ್ನು ನಡೆಸಿ ಸಲಹೆ ಸೂಚನೆ ಗಳನ್ನು ನೀಡಿದ್ದಾರೆ.
ಈ ಸಭೆಯಲ್ಲಿ ಎಲ್ಲಾ ಧಾರ್ಮಿಕ ಮುಖಂಡರು, ಆಯೋಜಕರು, ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಆಚರಣೆಯ ಪ್ರಯುಕ್ತ ಅನುಸರಿಬೇಕಾದ ನಿಯಮಗಳ ಬಗ್ಗೆ ಸೂಚನೆಗಳನ್ನು ನೀಡಿದ್ದಾರೆ.
ಗಣಪತಿ ಉತ್ಸವ ಕಾರ್ಯಕ್ರಮಗಳ ಆಯೋಜಕರಿಗೆ ಸೂಚನೆಗಳು:
> ಪ್ರತಿಷ್ಠಾಪನೆಯ ಮೊದಲು ಮೆಸ್ಕಾಂ, ಅಗ್ನಿ ಶಾಮಕ ನಿಗಮ/ಸ್ಥಳೀಯ ಸಂಸ್ಥೆಗಳಿಂದ ಅನುಮತಿಗಳನ್ನು ಪಡೆದುಕೊಳ್ಳಬೇಕು.
> ಗಣಪತಿ ವಿಗ್ರಹ ಪ್ರತಿಷ್ಠಾನೆಯ ಸ್ಥಳದ ಮಾಲಿಕರ ಅನುಮತಿಯನ್ನು ಪಡೆದುಕೊಳ್ಳಬೇಕು.
> ಗಣೇಶ ಪೆಂಡಾಲುಗಳನ್ನು ಹಾಕುವಾಗ ಭದ್ರವಾಗಿ ಸುರಕ್ಷಿತವಾಗಿ ಹಾಕಲು ವ್ಯವಸ್ಥೆ ಮಾಡುವುದು ಮತ್ತು ಸದರಿ ಪೆಂಡಾಲ್ ಮಳೆ, ಗಾಳಿ, ಬೆಂಕಿಗಳಿಂದ ಸುರಕ್ಷಿತವಾಗಿರುವಂತೆ ನಿಗಾವಹಿಸಲು ಸೂಚಿಸಲಾಗಿದೆ.
> ಗಣೇಶ ಮಂಟಪದೊಳಗೆ ದೀಪ ಇಡುವ ಸ್ಥಳದ ಬಳಿ ಬೆಂಕಿಯನ್ನು ಸ್ಪರ್ಷಿಸುವಂತಹ ವಸ್ತುಗಳನ್ನು ಇಡಬಾರದು. ಬೆಂಕಿ ಆಕಸ್ಮಿಕದಿಂದ ಅವಘಡ ತಡೆಗಟ್ಟುವ ಸಲುವಾಗಿ ಅಗ್ನಿಯನ್ನು ತಕ್ಷಣಕ್ಕೆ ಅರಿಸಲು ಸಲಕರಣೆಗಳಾದ ಮರಳು ಮತ್ತು ನೀರು ತುಂಬಿದ ಬಕೇಟ್‌ಗಳು, ಫೈರ್ ಎಕ್ಸಿಂಗ್ರೂಷರ್ನು ಇಟ್ಟುಕೊಳ್ಳುವುದು.
> ವೇದಿಕೆಯ ಮೇಲೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರ ಪ್ರಮುಖರ ಹೆಸರು. ವಿಳಾಸ. ಮೊಬೈಲ್ ನಂಬ್ರದ ವಿವರವಾದ ಪಟ್ಟಿಯನ್ನು ಮುಂಚಿತವಾಗಿ ಪೊಲೀಸ್ ಠಾಣೆಗೆ ನೀಡುವುದು.
> ಕಾರ್ಯಕ್ರಮಕ್ಕೆ ಸಂಬಂಧಿಸಿ ಸಾರ್ವಜನಿಕ ಸ್ಥಳದಲ್ಲಿ ಪ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಆಳವಡಿಸುವ ಪೂರ್ವದಲ್ಲಿ ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆದುಕೊಳ್ಳಬೇಕು.
> ಕಾರ್ಯಕ್ರಮಕ್ಕೆ ಸಂಬಂಧಿಸಿ ಅಳವಡಿಸುವ ಪ್ಲೆಕ್ಸ್, ಬ್ಯಾನರ್‌ಗಳಲ್ಲಿ ಯಾವುದೇ ಪ್ರಚೋದನಾತ್ಮಕ ಬರಹಗಳು/ಚಿತ್ರಗಳನ್ನು ಬಳಸಬಾರದು.
> ಯಾವುದೇ ಧರ್ಮ/ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವಂತಹ ಟ್ಯಾಬ್ಲೊ, ನೃತ್ಯರೂಪಕ ಇರಬಾರದು.
> ಸುಡುಮದ್ದು ಬಳಸುವಾಗ ಆಸ್ಪತ್ರೆಗಳ ಬಳಿ, ಜನ ಸಂದಣಿಯ ಮಧ್ಯೆ ಬಳಸಬಾರದು ಹಾಗೂ ರಾತ್ರಿ 10:00 ಗಂಟೆಯ ನಂತರ ಸುಡುಮದ್ದು/ಪಟಾಕಿಗಳನ್ನು ಬಳಸುವಂತಿಲ್ಲ.
> ಬ್ಯಾನರ್‌ಗಳು ಹಾಗೂ ಕಟೌಟ್ ಗಳನ್ನು ಅಳವಡಿಸುವ ಸ್ಥಳಗಳು ಯಾವುದೇ ಸಂಚಾರ ದಟ್ಟಣೆ ಅಥವಾ ಸಾರ್ವಜನಿಕ ತೊಂದರೆಗೆ ಕಾರಣವಾಗದಂತೆ ನೋಡಿಕೊಳ್ಳುವುದು.
> ಗಣೇಶ ವಿಸರ್ಜನೆಯ ದಿನಾಂಕ, ವೇಳೆ, ಮಾರ್ಗ ಮುಂತಾದ ವಿವರಗಳನ್ನು ಮುಂಚಿತವಾಗಿ ಸಂಬಂಧಿಸಿದ ಠಾಣಾಧಿಕಾರಿ ಮತ್ತು ಡಿವೈಎಸ್‌ಪಿ ರವರಿಗೆ ನೀಡಿ ಮಂಜೂರಾತಿ ಪಡೆದುಕೊಳ್ಳುವುದು.

> ಪೊಲೀಸ್ ಇಲಾಖೆಯಿಂದ ಅಂತಿಮಗೊಳಿಸಲಾದ ಮಾರ್ಗದಲ್ಲಿ ಮಾತ್ರ ಮೆರವಣಿಗೆ ಸಾಗುವುದು.
> ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಇತರ ಧರ್ಮಗಳ ವಿರುದ್ಧ ಪ್ರಚೋಧನಾಕಾರಿ ಘೋಷಣೆಗಳನ್ನು ಕೂಗಬಾರದು.
> ಕಾರ್ಯಕ್ರಮ ಸ್ಥಳಗಳಲ್ಲಿ ಆಯೋಜಕರುಗಳು ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆಮಾಡಿಕೊಳ್ಳುವುದು ಸೂಕ್ತ ಪಾರ್ಕಿಂಗ್ ವ್ಯವಸ್ಥೆಗೆ ತಮ್ಮ ಸಂಘದ ವತಿಯಿಂದ ಸ್ವಯಂ ಸೇವಕರನ್ನು ನೇಮಿಸಿ ಕಾರ್ಯಕ್ರಮ ಸ್ಥಳಗಳಲ್ಲಿ ಸುಗಮ ಸಂಚಾರಿ ವ್ಯವಸ್ಥೆಗೆ ಅಡೆ ತಡೆ ಉಂಟಾಗದಂತೆ ನೋಡಿಕೊಳ್ಳುವುದು.
> ಸ್ಥಳದ ಮಾಲಿಕರ ಅನುಮತಿಯನ್ನು ಪಡೆದುಕೊಳ್ಳಬೇಕು.
> ಆಯೋಜಕರುಗಳು ತುರ್ತು ಸಂದರ್ಭದಲ್ಲಿ ಬಳಸಲು ಅನೂಕುಲವಾಗುವಂತೆ ಮೆರವಣಿಗೆಯಲ್ಲಿ ಒಂದು ಸುಸಜ್ಜಿತ ಆಂಬ್ಯುಲೆನ್ಸ್ ವ್ಯವಸ್ಥೆಗೊಳಿಸಬೇಕು.
> ಫಿಟ್‌ನೆಸ್ ಸರ್ಟಿಪಿಕೇಟ್, ಇನ್ಸುರೆನ್ಸ್ ಸರ್ಟಿಫಿಕೇಟ್ ಹಾಗೂ ಡಿ.ಎಲ್ ಹೊಂದಿರುವ ಚಾಲಕ ಇರುವ ವಾಹನಗಳಲ್ಲಿ ಮಾತ್ರ ಸ್ತಬ್ಧಚಿತ್ರವನ್ನು ಆಳವಡಿಸಲು ಉಪಯೋಗಿಸುವುದು.
> ಕಾರ್ಯಕ್ರಮ/ ಮೆರವಣಿಗೆ ಸಮಯದಲ್ಲಿ ಸ್ವಯಂ ಸೇವಕರಿಗೆ ಒಂದೇ ರೀತಿಯ ಬಣ್ಣದ ಉಡುಪು ನೀಡುವುದು.
> ಸ್ವಯಂ ಸೇವಕರನ್ನು ಗುಂಪುಗಳನ್ನಾಗಿ ವಿಂಗಡಿಸಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ನಿಯೋಜಿಸಿ ಮೆರವಣಿಗೆ ಸುಲಲಿತವಾಗಿ ಸಾಗುವಂತೆ ಮಾಡುವುದು.
ಕಾರ್ಯಕ್ರಮಕ್ಕೆ ಬರುವ ಜನರ ವಾಹನ ಪಾರ್ಕಿಂಗ್‌ಗೆ ಸ್ಥಳ ಗುರುತಿಸುವುದು. ಮೆರವಣಿಗೆ ಹಾದು ಹೋಗುವ ರಸ್ತೆಯಲ್ಲಿ ವಾಹನಗಳ ನಿಲುಗಡೆಯಾಗದಂತೆ ಸ್ವಯಂ ಸೇವಕರನ್ನು ನಿಯೋಜಿಸುವುದು.
> ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಬಂದೋಬಸ್ತ್ ಕರ್ತವ್ಯದಲ್ಲಿ ಇರುವ ಪೊಲೀಸ್ ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವುದು ಮತ್ತು ಪೊಲೀಸರೊಂದಿಗೆ ಸಂಘಟಕರು ಸಹಕರಿಸುವುದು.
ಸ್ತಬ್ಬ ಚಿತ್ರಗಳಲ್ಲಿ/ಕಾರ್ಯಕ್ರಮ ಸ್ಥಳಗಳಲ್ಲಿ ಧ್ವನಿವರ್ಧಕವನ್ನು ಅಳವಡಿಸುವ ಮೊದಲು ಪೊಲೀಸ್ ಇಲಾಖೆಯಿಂದ ಪಡೆಯಲಾದ ಪರವಾನಿಗೆಯನ್ನು ಪರಿಶೀಲಿಸಿ ಅನುಮತಿ ಇದ್ದಲ್ಲಿ ಮಾತ್ರ ಧ್ವನಿವರ್ಧಕವನ್ನು ಅಳವಡಿಸುವುದು.
> ಪೊಲೀಸ್ ಇಲಾಖೆಯಿಂದ ನೀಡಲಾದ ಪರವಾನಿಗೆಯಲ್ಲಿ ನಿಗದಿಪಡಿಸಿದ ಸಮಯದವರೆಗೆ ಮಾತ್ರ ಧ್ವನಿವರ್ಧಕವನ್ನು ಬಳಸುವುದು.
> ಡಿ.ಜೆ ಬಳಸಲು ಅವಕಾಶ ಇರುವುದಿಲ್ಲ.
> ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಬಳಿ ಧ್ವನಿವರ್ಧಕ ಅಳವಡಿಸಬಾರದು.
0 ಕಾಮೆಂಟ್‌ಗಳು