ಸುಬ್ರಹ್ಮಣ್ಯದಲ್ಲಿ ಸಿದ್ದಿ ಸಮಾಧಿ ಯೋಗ ಉದ್ಘಾಟನೆ.

ಕುಕ್ಕೆ ಸುಬ್ರಹ್ಮಣ್ಯ: ಸೆ.27: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಗುರುವಾರ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಸಿದ್ದಿ ಸಮಾಧಿ ಯೋಗ ಉದ್ಘಾಟನೆಗೊಂಡಿತು. ಸುಬ್ರಹ್ಮಣ್ಯದ ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

Img 20240927 Wa0006

ಬೆಂಗಳೂರು ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದ ಅಜಯ್ ಡಿ ಎಸ್ ಹಾಗೂ ಎಮ್ ಆರ್ ದೀಪಕ್ ಸಿದ್ದಿ ಸಮಾಧಿ ಯೋಗದ ಮಹತ್ವವನ್ನು ಹಾಗೂ ಪರಿಚಯವನ್ನು ವಿವರಿಸಿದರು ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡು ತೋಟ, ಕುಮಾರಸ್ವಾಮಿ ವಿದ್ಯಾಲಯದ ಪ್ರಾಂಶುಪಾಲ ಸಂಕೀರ್ಥ ಹೆಬ್ಬಾರ್, ಮುಖ್ಯೋಪಾಧ್ಯಾಯಣಿ ವಿದ್ಯಾರತ್ನ ,ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ವಿಜಯಕುಮಾರ್ ವಿಶೃತ್ ಕುಮಾರ್,ನವೀನ್, ಅಶೋಕ್ ಕುಮಾರ್ ಮೂಲೆ ಮಜಲು ,ಸುಬ್ರಹ್ಮಣ್ಯ ಅತ್ಯಡಿ, ದುಗ್ಗಪ್ಪ ಅಗ್ರಹಾರ , ಶ್ರೀಕೃಷ್ಣ ಶರ್ಮ ,ಮನೋಜ್, ವಿಠಲ ಮೂಲ್ಯ ವರ್ಷ ಕಾಮತ್ ,ಭಾರತಿ ದಿನೇಶ್ ,ಸುನಿತಾ ನವೀನ್ ,ಅರುಣ, ಪೂರ್ಣಿಮಾ, ಅಂಬಿಕಾ, ಮುಂತಾದವರು ಹಾಜರಿದ್ದರು. ಮುಂದಿನ ವಾರದಿಂದ 15 ದಿನ ಬೆಳಗ್ಗೆ ನಾಲ್ಕು ಗಂಟೆಯಿಂದ ಏಳರ ತನಕ ಶಿಬಿರ ನಡೆಯಲಿರುವುದೆಂದು ಬೆಂಗಳೂರಿನ ರಿಷಿ ಸಂಸ್ಕೃತಿ ವಿದ್ಯಾ ಕೇಂದ್ರದ ಪ್ರಮುಖರು ತಿಳಿಸಿರುತ್ತಾರೆ

0 ಕಾಮೆಂಟ್‌ಗಳು