ದ.ಕ.ಜಿಲ್ಲೆ ಪುತ್ತೂರು ತಾಲೂಕು,ಬಜತ್ತೂರು ಗ್ರಾಮದಲ್ಲಿ -ಸರ್ವೇ ನಂಬರ್ 90,132 ರಲ್ಲಿ ಮರಗಳು ನಾಶ! ಎಲ್ಲಿದ್ದೀರಪ್ಪ ಅರಣ್ಯಾಧಿಕಾರಿಗಳೆ? ಮರಗಳ ಸಾವಿಗೆ ಯಾರು ಹೊಣೆ?

ಮಣಿಕ್ಕಳ:ಸ,9, ಪ್ರಕೃತಿಯ ಅಸಮತೋಲದಿಂದ  ದ.ಕ ಸಹಿತ ಹಲೆವೆಡೆ ವಿಕೋಪಗಳು ನಡೆದಿವೆ,ಇದರಿಂದಾಗಿ ಜನ ಜೀವನಕ್ಕೆ ತೊಂದರೆಯಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಈ ನಡುವೆ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ,ಬಜತ್ತೂರು ಗ್ರಾಮದ, ಮಣಿಕ್ಕಳ ಎಂಬಲ್ಲಿ ಮರಗಳ ಮರಣಹೋಮವೇ ನಡೆದಿರುವುದು ಬೆಳಕಿಗೆ ಬಂದಿದೆ.

Img 20240909 Wa0005

Img 20240909 Wa0004

ಬಜತ್ತೂರು ಗ್ರಾಮದಲ್ಲಿ (ಸರ್ವೇ ನಂಬರ್ 90,132 ರಲ್ಲಿ )ಜಾಗವೊಂದರಿಂದ ಇದ್ದಕಿದ್ದಂತೆ ಬೃಹತ್ ಮರಗಳು ಕಾಣೆಯಾಗಿದ್ದು ಟಿಂಬರ್ ಮಾಫಿಯಾದ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

Inshot 20240909 113156876

ಅಲ್ಲಿನ ಸ್ಥಳೀಯರ ಪ್ರಕಾರ    ಸುಮಾರು ಹತ್ತಕ್ಕಿಂತ ಹೆಚ್ಚು  ಲೋಡು ಮರಗಳನ್ನು ಸಾಗಿಸಲಾಗಿದೆ ಎನ್ನಲಾಗುತ್ತಿದೆ . ಇದರಿಂದಾಗಿ ಈ ಮರಗಳಲ್ಲಿ ವಾಸಿಸುತ್ತಿದ ಹಲವು ಪಕ್ಷಿ ಸಂಕುಲಗಳು, ಮರಗಳ ನೆರಳಲ್ಲಿ ಆಸರೆ ಪಡೆಯುತ್ತಿದ್ದ ಪ್ರಾಣಿಗಳು ತತ್ತರಿಸಿ ಹೋಗಿವೆ.  ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಧರೆಗುಳಿಸಿದರೂ  ಅರಣ್ಯ ಇಲಾಖೆ ಚಿರನಿದ್ರೆಗೆ ಜಾರಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

Img 20240909 Wa0002

ಅಲ್ಲದೆ ಮರಗಳನ್ನು ರಕ್ಷಿಸಬೇಕಾದ ಅರಣ್ಯಅಧಿಕಾರಿಗಳನ್ನು ಪ್ರಭಾವಿಗಳು ಒತ್ತಡಕ್ಕೆ ಸಿಲುಕಿ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮಾಡಿದರೇ ಎಂಬ ಪ್ರಶ್ನೆ ಜನರನ್ನು ಕಾಡತೊಡಗಿದೆ.

Img 20240909 Wa0003

ಗ್ರಾಮೀಣ ಭಾಗದಲ್ಲಿ ಜನರು ಒಣ ಕಟ್ಟಿಗೆ ತರಲು ಕಾಡಿಗೆ ಹೋಗಿ ಮುರಿದು ಬಿದ್ದ ಗೆಲ್ಲು ತಂದರೂ ದಬಾಯಿಸುವ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಈ ಬೃಹತ್ ಟಿಂಬರ್ ಮಾಫಿಯ ಕಣ್ಣಿಗೆ ಕಾಣದಿರುವುದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುವಂತಾಗಿದೆ.

Img 20240909 Wa0006

ಸರ್ಕಾರಿ ಇರಲಿ,ಖಾಸಗಿ ಜಾಗವೇ ಇರಲಿ ಬೆಲೆಬಾಳುವ ಮರಗಳನ್ನು ಕಡಿಯಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಬೇಕಾಗುತ್ತದೆ, ಇದಕ್ಕೆ ಪೂರಕವಾಗಿ ಮರಗಳನ್ನು ಕಡಿದ ಜಾಗದಲ್ಲಿ ಗಿಡಗಳನ್ನು ಬೆಳೆಸಬೇಕಿದೆ,  ಆದರೆ  ಇಲ್ಲಿ ಮಾತ್ರ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ ದಟ್ಟ ಅನುಮಾನ ಕಾಡುತ್ತಿದೆ.

Img 20240908 Wa0049

ಸರಕಾರ ”ಗಿಡ ನೆಡಿ-ಪರಿಸರ ಉಳಿಸಿ”, ಪರಿಸರವಿದ್ದರೆ ನಾಡಿಗೆ ಮಳೆ, ಮಳೆ ಇದ್ದರೆ ಬೆಳೆ ಎಂದು ಪ್ರಚಾರ ಮಾಡುತ್ತದೆ. ಇನ್ನೊಂದೆಡೆ ಗಿಡ-ಮರಗಳನ್ನು ನಿಯಮ ಬಾಹಿರವಾಗಿ  ಕಡಿದರೂ ಯಾವುದೇ ಕ್ರಮವಿಲ್ಲದಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Timephoto 20240908 134009

 

 

0 ಕಾಮೆಂಟ್‌ಗಳು