ನೆಲ್ಯಾಡಿ :ಅ,10,ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕನ್ನಡ ತುಳು ಹಾಡುಗಳಿಗೆ ಸಾಹಿತ್ಯ ಬರೆದು ಆಲ್ಬಮ್ ಹಾಡುಗಳನ್ನು ನಿರ್ದೇಶಿಸಿ ನಿರ್ಮಿಸಿ ಹಲವು ಪ್ರಶಸ್ತಿಗಳನ್ನು ಪಡೆದಿರುವ,ತುಳು ನಾಟಕ,ತುಳು ಕವನ, ಕನ್ನಡ ಕವನ, ಕಥೆಗಳ ಮೂಲಕ ಗುರುತಿಸಿ ಕೊಂಡಿರುವ ಯುವ ಪ್ರತಿಭೆ .ಶೌರ್ಯ ವಿಪತ್ತು ತಂಡದಲ್ಲಿ ಸಮಾಜ ಸೇವೆ ಮಾಡಿ ಹಲವು ಸಾಮಾಜಿಕ ಸೇವೆಗಳ ಮೂಲಕ ಗುರುತಿಸಿ ಕೊಂಡಿರುವ ಕುಸಾಲ್ದ ಕಿಚ್ಚ ಕೇಶವ ನೆಲ್ಯಾಡಿ ಇವರ ಸಾಧನೆಯನ್ನು ಗುರುತಿಸಿ ವಲ್ಡ್ ಪ್ರೆಸ್ ಬುಕ್ ಆಪ್ ರೆಕಾರ್ಡ್ ,ಚೇತನ ಫೌಂಡೇಷನ್, ಕರ್ನಾಟಕ ಕಾವ್ಯ ಶ್ರೀ ಚಾರಿಟೇಬಲ್ ಟ್ರಸ್ಟ್ (ರಿ)ಬೆಂಗಳೂರು ಆಯೋಜಿಸಿರುವ ವಂದೇ ಮಾತರಂ ಕಾರ್ಯಕ್ರಮದಲ್ಲಿ ನೀಡಲಿರುವ “ಕಾವ್ಯ ಚೇತನ”ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ…ಈ ಪ್ರಶಸ್ತಿ ಪ್ರದಾನವು ಆಗಸ್ಟ್ 18ರ ರವಿವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನ ಕುವೆಂಪು ಸಭಾoಗಣದಲ್ಲಿ ನಡೆಯಲಿದೆ ಇವರ ಹೆಸರು ವಲ್ಡ್ ಪ್ರೆಸ್ ಬುಕ್ ಆಪ್ ರೆಕಾರ್ಡ್ ನಲ್ಲಿ ದಾಖಲಾಗಿರುತ್ತದೆ..
ಕೇಶವ ನೆಲ್ಯಾಡಿಯವರಿಗೆ ಕಾವ್ಯ ಚೇತನ ಪ್ರಶಸ್ತಿ.

0 ಕಾಮೆಂಟ್‌ಗಳು