ಗಾಯಕ ಜಗದೀಶ್ ಆಚಾರ್ಯ ಪುತ್ತೂರು ಅವರ ಧ್ವನಿಯಲ್ಲಿ ವಿಶೇಷ ದಾಸರ ಪದ ಬಂದಾ ಗೋವಿಂದ ಮುಕುಂದ ನಿತ್ಯಾನಂದ ಬಿಡುಗಡೆ- ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಬಿಡುಗಡೆಗೊಳ್ಳುತ್ತಿರುವ ಆಲ್ಬಮ್ ಹಾಡು.

ಪುತ್ತೂರು:ಅ,24,ತುಳುನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ ರಿ. ಅರ್ಪಿಸುವ ಜಗದೀಶ್ ಪುತ್ತೂರು ಸಂಗೀತ ನಿರ್ದೇಶನ ಮತ್ತು ಗಾಯನದ ಹೊಸ ರಾಗ ಸಂಯೋಜನೆಯಲ್ಲಿ ಮೂಡಿಬಂದ ಬಂದಾ ಗೋವಿಂದ ಮುಕುಂದ ನಿತ್ಯಾನಂದ ದಾಸರ ಪದ ಅ,25 ರಂದು Jagadish_puttur ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಗೊಳ್ಳಲಿದೆ.

ಹರಿ ಮೀನಾಕ್ಷಿ ದೋಟ ಮಿಜಾರ್ ಹರಿಯಪ್ಪ ಶೆಟ್ಟಿ ಮತ್ತು ಮಕ್ಕಳು ಸೊಸೆಯಂದಿರು ನಿರ್ಮಾಣದಲ್ಲಿ ಜನ್ಯ ಪ್ರಸಾದ್ ಅನಂತಾಡಿ, ಉಜ್ವಲ ಆಚಾರ್, ಭಾಗ್ಯಶ್ರೀ ಕೆ. ಎಸ್. ಮಲ್ಲೇರಿಯ ,ಸಾಹಿತ್ಯ ಆಚಾರ್ಯ, ಶರಣ್ಯ ತಂತ್ರಿ ನಂದಳಿಕೆ, ಶ್ರೀವಿಭಾ ಕೇಪು, ಶ್ರೀರಕ್ಷ ಸರ್ಪಂಗಳ , ಜಯಶ್ರೀ ಬೆಳ್ತಂಗಡಿ, ತನುಶ್ರೀ ಮಂಗಳೂರು ಸಹ ಗಾಯನದಲ್ಲಿ, ಪುಟಾಣಿಗಳಾದ ಸಾನ್ವಿ, ಶಾರ್ವಿ , ರಿಧನ್ಯ, ಆಪ್ತ್, ನಿಹಾರಿಕ, ಸಾನಿಕ , ರೂಹಿ, ಲಕ್ಷ್ಯ ಶ್ರೀ ಕೃಷ್ಣ ಪಾತ್ರದಲ್ಲಿ ಭಾಗವಹಿಸಿರುವ ಅರುಣ್ ರೈ ಪುತ್ತೂರು ಛಾಯಾಗ್ರಹಣದಲ್ಲಿ ದಾಸರ ಪದ ಸುಂದರವಾಗಿ ಮೂಡಿಬಂದಿದೆ. ಸಂಕಲನದಲ್ಲಿ ಚರಣ್ ಆಚಾರ್ಯ ಪುತ್ತೂರು, Y T ನಲ್ಲಿ ಶಿಶಿರ್ ರೈ ಚೆಲ್ಯಡ್ಕ ಸಹಕರಿಸಿದ್ದಾರೆ.

0 ಕಾಮೆಂಟ್‌ಗಳು