ಕುಕ್ಕೆ ಸುಬ್ರಹ್ಮಣ್ಯ: ಜೂ,1. ರಂದು ಮಹಾವಿದ್ಯಾಲಯದ ಪದನಿಮಿತ್ತ ಕಾರ್ಯದರ್ಶಿಗಳಾ ಡಾ. ನಿಂಗಯ್ಯ ಇವರಿಗೆ ಮಹಾವಿದ್ಯಾಲಯ,ಪ್ರಾಕ್ತನ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮವು ನೆರವೇರಿತು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದಿನೇಶ ಪಿ.ಟಿ. ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನು ನುಡಿದರು. ರಕ್ಷಕ ಶಿಕ್ಷಕ ಸಂಘದ ವತಿಯಿಂದ ಶ್ರೀ ಶಿವರಾಮ ರೈ, ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ, ಶ್ರೀ ಗಣೇಶ್ ಪ್ರಸಾದ್, ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಉದಯಕುಮಾರ್ , ವಿದ್ಯಾರ್ಥಿಗಳ ಪರವಾಗಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಹಾಸ್ ಎಮ್ ಜೆ.ಈ ಸಂದರ್ಭದಲ್ಲಿ ಶುಭ ಹಾರೈಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಮನೋಹರ ಸನ್ಮಾನ ಪತ್ರ ವಾಚಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಏಸುರಾಜ್ ಅವರು ವಹಿಸಿದ್ದರು. ಮಹಾವಿದ್ಯಾಲಯದ ಐಕ್ಯೂ ಎಸಿ ಸಂಯೋಜಕರಾದ ಶ್ರೀಮತಿ ಲತಾ ಬಿ. ಟಿ. ಇವರು ಧನ್ಯವಾದ ಸಮರ್ಪಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಪುಷ್ಪ ಡಿ. ಕಾರ್ಯಕ್ರಮ ನಿರೂಪಿಸಿದರು.
0 ಕಾಮೆಂಟ್‌ಗಳು