ಕುಕ್ಕೆ ಸುಬ್ರಹ್ಮಣ್ಯ: ಜೂ.4.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಉಚಿತ ಶೌಚಾಲಯ?-ಸೋರುತ್ತಿಹುದು ಕೊಳವೆಯಲ್ಲಿ ಮಲಮೂತ್ರ! ಸರಿಯಾದ ನಿರ್ವಹಣೆ ಇಲ್ಲದೆ ಸೋರಿಕೆ ಆಗುತ್ತಿದೆ,
ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ನಿನ್ನೆ ಮಾಧ್ಯಮದ ಮೂಲಕ ಅಧಿಕಾರಿಗಳ ಹಾಗೂ ಸಂಬಂಧಪಟ್ಟವರ ಗಮನಕ್ಕೆ ತರುವ ಪ್ರಯತ್ನ ಮಾಡಲಾಗಿತ್ತು.
ತಕ್ಷಣ ಸ್ಪಂದಿಸಿ ಅಧಿಕಾರಿಗಳು :
ಸೋರುತ್ತಿರುವ ಶೌಚಾಲಯದ ಪೈಪ್ ಗೆ ಪ್ಲಾಸ್ಟಿಕ್ ಚೀಲವನ್ನು ಕಟ್ಟಿ ಮುಚ್ಚಲಾಗಿದೆ.
ಜೊತೆಗೆ ಅಕ್ಕ ಪಕ್ಕದಲ್ಲಿ ಇದ್ದ ತ್ಯಾಜ, ಗಿಡ ಗಳನ್ನು ತೆಗೆದು ವಾಸನೆ ಬಾರದ ಹಾಗೆ ಮೇಲಿಂದ ಏನೋ ಪೌಡರ್ ಹಾಕಿ ಹೋಗಿದ್ದಾರೆ.
ಲೀಕೇಜ್ ಆಗುತ್ತಿರುವ ಶೌಚಾಲಯದ ಪೈಪ್ ಅನ್ನು ಹೀಗೂ ಸರಿಪಡಿಸಬಹುದು ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಂಬಂಧಪಟ್ಟ ಅಧಿಕಾರಿಗಳು ತೋರಿಸಿ ಕೊಟ್ಟಿದ್ದಾರೆ.

ಸ್ಥಳೀಯರ ಮಾತು :
ಇದನ್ನು ಕಂಡ ಸ್ಥಳೀಯರು, ಸಾರ್ವಜನಿಕರು
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಒಂದು ಒಳ್ಳೆ ಪೈಪ್ ತಂದು ಜೋಡಿಸಿ ಕೊಳಚೆ ನೀರು ಲೀಕ್ ಆಗದಹಾಗೆ ವ್ಯವಸ್ಥಿತವಾಗಿ ಮಾಡಲು ದುಡ್ಡಿನ ಕೊರತೆ ಇದೆಯೋ? ಈ ರೀತಿ ನರಕ ಬರೋದು ಯಾಕೆ ಉಪ್ಪಿನಕಾಯಿ ಬರಣಿಗೆ ತೊಟ್ಟೆ ಕಟ್ಟಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಅಂತೂ ಒಂದು ತೊಟ್ಟೆ (ಪ್ಲಾಸ್ಟಿಕ್ ಚೀಲ )ಕಟ್ಟಿ ಬೀಸುವ ದೊಣ್ಣೆ ಯಿಂದ ತಪ್ಪಿಸಿ ಕೊಂಡಿದ್ದಾರೆ.
0 ಕಾಮೆಂಟ್‌ಗಳು