ಕುಕ್ಕೆ ಸುಬ್ರಹ್ಮಣ್ಯ :ಜೂ. 3.ಕುಕ್ಕೆ ಯಲ್ಲಿ ನಿತ್ಯ ದುಃಖ ದಂತಾಗಿದೆ ಮೂಲಭೂತ ಸೌಕರ್ಯಗಳ ಸಮಸ್ಯೆ,ಕುಕ್ಕೆ ದೇವಸ್ಥಾನ ಆಡಳಿತ ಕಚೇರಿಗೆ ತಾಗಿಕೊಂಡೆ ಇರುವ ಶೌಚಾಲಯದ ಕಥೆ.
ನೋಡಿ ಶೌಚಾಲಯದ ಒಳಗೆ ಮಾಡಿದ್ದೂ ಕೊಳವೆ ಮೂಲಕ ಮೂತ್ರ ಹೇಗೆ ಚರಂಡಿಯಲ್ಲಿ ಹರಿಯುತ್ತಿದೆ. ಮೂಗು ಮುಚ್ಚಿಕೊಂಡು ಇರುವಂತೆ ಮಾಡಿದೆ.
ಕುಕ್ಕೆ ದೇವಸ್ಥಾನಕ್ಕೆ ಬರುವ ಜನರಿಗೆ ಏನಾದ್ರು ಕಾಯಿಲೆಗಳು ಇದ್ದರೆ ಹರಡುವ ಭೀತಿ ಎದುರಾಗಿದೆ.
ಎಷ್ಟು ಬಾರಿ ಈ ಬಗ್ಗೆ ದೇವಸ್ಥಾನಕ್ಕೆ ತಿಳಿಸಿದರು ಅಧಿಕಾರಿಗಳು ಬಂದು ನೋಡಿಕೊಂಡು ಹೋಗುತ್ತಾರೆ ಶಾಶ್ವತ ಪರಿಹಾರ ಇಲ್ಲದಾಗಿದೆ.

ಕುಕ್ಕೆ ಯಲ್ಲಿ ಸಾವಿರ ಸಾವಿರ ಸಂಬಳ ತಿನ್ನುವ ಅಧಿಕಾರಿಗಳು ಇಲ್ಲಿ ಏನೂ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ,
ಮುಜರಾಯಿ ಆಯುಕ್ತರು ಕುಕ್ಕೆಗೆ ಬಂದು ಭಕ್ತದಿಗಳಿಗೆ ಉಚಿತ ಶೌಚಾಲಯ ಆದೇಶ ಮಾಡಿ ಹೋಗಿದ್ದಾರೆ.ನಿರ್ವಹಣೆಗೆ ವ್ಯವಸ್ಥೆ ಮಾಡಿಲ್ಲ.
ಗುತ್ತಿಗೆದಾರರಿಗೆ ಶೌಚಾಲಯದ ನಿರ್ವಹಣೆಯ ಜವಾಬ್ದಾರಿ ಇರುವಾಗ ಎಲ್ಲವೂ ಚೆನ್ನಾಗಿ ಇತ್ತು ಇದೀಗ ಶೌಚಾಲಯ ಗಬ್ಬೆದ್ದು ನಾರುತಿದೆ.
ಇನ್ನೂ ಆದಿ ಸುಬ್ರಮಣ್ಯದಿಂದ ಹರಿಯುವ ದರ್ಪಣ ತೀರ್ಥ ನದಿಯ ಕಥೆ ಆ ದೇವರೇ ಬಲ್ಲ ಎಂಬಂತಾಗಿದೆ.
ಆದಿ ಸುಬ್ರಮಣ್ಯದಲ್ಲಿರುವ ಅನಘ, ಅಭಯ ವಸತಿ ಗೃಹಗಳಿಂದ ಹರಿದು ಬರುವ ಶೌಚಾಲಯದ ಕೊಳಚೆ ನೀರಿನ ಕೊಳವೆ ದರ್ಪಣ ತೀರ್ಥ ನದಿಯ ಮದ್ಯೆ ಹಾದುಹೋಗಿದ್ದು ಕೊಳವೆಯಲ್ಲಿ ಸೋರಿಕೆ, ಮೆನ್ ಹೋಲ್ ನಲ್ಲಿ ಸೋರಿಕೆಯಾಗಿ ನದಿ ನೀರಿಗೆ ಸೇರುತ್ತಿದೆ.ಸಾರ್ವಜನಿಕರಿಗೆ, ಕುಕ್ಕೆಗೆ ಬರುವ ಭಕ್ತರಿಗೆ ಸಮಸ್ಯೆ ಆಗುತ್ತಿದೆ ಅಂದರು ಕ್ಯಾರೇ ಅನ್ನೋದಿಲ್ಲ,ಅಧಿಕಾರಿಗಳಿಗೆ ಸಂಬಳ ಬರುತ್ತಿದೆ ಇಲ್ಲಿನ ಸಮಸ್ಯೆ ಯಾರಿಗೆ ಬೇಕು ಎಂಬಂತೆ ವರ್ತಿಸುತ್ತಿರುವ ಈ ಅಧಿಕಾರಿಗಳಿಗೆ ಇನ್ನು ಯಾರು ಹೇಳಬೇಕು ಗೊತ್ತಾಗುತ್ತಿಲ್ಲ.ಎಲ್ಲವು ಅವೈಜ್ಞಾನಿಕ ಕಾಮಗಾರಿ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.
0 ಕಾಮೆಂಟ್‌ಗಳು