ಕೊಕ್ಕಡ:ಜೂ.16.ಕೇರಳ -ತಿರುವನಂತಪುರಂದ ಪ್ರಸಿದ್ಧ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಪ್ರಮುಖ ಅರ್ಚಕರಾಗಿ ಕೊಕ್ಕಡದ ಸತ್ಯನಾರಾಯಣ ನೇಮಕಗೊಂಡಿದ್ದಾರೆ.ಕೊಕ್ಕಡ ಸಮೀಪದ ಅಡ್ಡೆಯಿ ಬಡೆಕ್ಕರ ನಿವಾಸಿ ದಿ.ಸುಬ್ರಾಯ ತೋಡ್ತಿಲ್ಲಾಯ ಮತ್ತು ಯಶೋಧ ದಂಪತಿಗಳ ದ್ವಿತೀಯ ಪುತ್ರ ಸತ್ಯನಾರಾಯಣ ತೋಡ್ತಿಲ್ಲಾಯ.


ಇವರು ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸವನ್ನು ಕೊಕ್ಕಡದಲ್ಲಿ, ಪ್ರೌಢಶಿಕ್ಷಣವನ್ನು ನೆಲ್ಯಾಡಿಯ ಸೈಂಟ್ ಜಾರ್ಜ್ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿದ್ದಾರೆ.ಇವರು ಪೌರೋಹಿತ್ಯವನ್ನು ಪಾಲಲೆ ದಿ.ಸತೀಶ್ ಎಡಪಡಿತ್ತಾಯರವರಲ್ಲಿ ಪೂರೈಸಿದ್ದಾರೆ.
ಶ್ರೀಅನಂತಪದ್ಮನಾಭ ಸ್ವಾಮಿಯ ದೇವಸ್ಥಾನದಲ್ಲಿ ಹಿಂದಿನಿಂದಲೂ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುವ ಹಕ್ಕು ಕೇರಳದ ಕಾಞಂಗಾಡ್ ಹಾಗೂ ನೀಲೇಶ್ವರ (ಇಕ್ಕರದೇಶಿ ) ಪ್ರಾಂತ್ಯದ ನಿರ್ದಿಷ್ಟ 8 ಕುಟುಂಬ ವರ್ಷದ ,ಆರು ತಿಂಗಳು ಪೂಜೆ ಹಾಗೂ ಕರ್ನಾಟಕ ತುಳುನಾಡಿನ ಕೊಕ್ಕಡ (ಅಕ್ಕರ ದೇಶೀ ) ಮೂಲದ ಎಡಪಾಡಿತ್ತಾಯ, ಶಬರಾಯ,ತೋಡ್ತಿಲ್ಲಾಯ,ಉಪ್ಪಾರಣ, ಬಾಳ್ತಿಲ್ಲಾಯ , ಮೊಡಂಬಡಿತ್ತಾಯ, ಅರಿಮಾಣಿತ್ತಾಯ,ಸೇರಿದಂತೆ 8 ಕುಟುಂಬಗಳಿಗೆ ವರ್ಷದ ಅರುತಿಂಗಳು ಪ್ರಧಾನ ಪೂಜೆ ಈ ಶಿಷ್ಟಾಚಾರವು ತಲೆತಲಾಂತರಗಳಿಂದ ನಡೆದುಕೊಂಡು ಬಂದಂತ ಪದ್ಧತಿ ಆಗಿರುತ್ತದೆ.

0 ಕಾಮೆಂಟ್‌ಗಳು