ಕಡಬ: ಮೇ,30.ಇಲ್ಲಿನ ಕಡಬ-ಪಂಜ ರಸ್ತೆಯ ಮೆಸ್ಕಾಂ ಕಚೇರಿ ಬಳಿ ಕೇರಳ ನೋಂದಣಿಯ ಪಿಕಪ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ನೆಡಿದಿದ್ದು ಪರಾರಿಯಾದ ವಾಹನವನ್ನು ಸಾರ್ವಜನಿಕರ ಸಹಕಾರದಿಂದ ನಿಂತಿಕಲ್ಲು ಬಳಿ ತಡೆದ ಘಟನೆ ಗುರುವಾರ ನಡೆದಿದೆ
ಈ ಅಪಘಾತದಿಂದ ಬೈಕ್ ಸವಾರನ ಕಾಲು ಮುರಿತಕ್ಕೆ ಒಳಗಾಗಿ ಗಂಭೀರ ಗಾಯ ಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಬೈಕ್ ಸವಾರನ ವಿವರ ತಿಳಿದು ಬಂದಿಲ್ಲ.

ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ಕಾರ್ಯ ನಿಮಿತ್ತ ಹೋಗುತ್ತಿದ್ದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಪಿಕ್ಕಪ್ ವಾಹನವನ್ನು ಹಿಂಬಾಲಿಸಿಕೊಂಡು ಹೋಗಿ ಸಿ. ಸಿ. ಕ್ಯಾಮರಾ ಮೂಲಕ ಮಾಹಿತಿ ಕಲೆ ಹಾಕಿದ್ದಾರೆ .ನಂತರದಲ್ಲಿ ನಿಂತಿಕಲ್ಲಿನ ಪ್ರವೀಣ್ , ಉಮೇಶ್ ಮರುವಂಜ ಹಾಗೂ ಇತರರ ಸಹಾಯದಿಂದ ನಿಂತಿಕಲ್ಲು ಎಂಬಲ್ಲಿ ಸಾರ್ವಜನಿಕರು ತಡೆದು ಕಡಬ ಪೊಲೀಸರಿಗೆ ಒಪ್ಪಿಸಿದ್ದಾರೆ.
ಚಾಲಕ ಅಮಲು ಪದಾರ್ಥ ಸೇವಿಸಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಗಾಯಾಳುವಿನ ಆಸ್ಪತ್ರೆಯಿಂದ ಮಾಹಿತಿ ಬಂದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ . ಇನ್ನು ಅಜಾಗರುಕತೆಯಿಂದ ವಾಹನ ಚಲಾಯಿಸಿದ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
0 ಕಾಮೆಂಟ್‌ಗಳು