ಪುತ್ತೂರು: ನವತೇಜ ಟ್ರಸ್ಟ್, ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್, ಅಡಿಕೆ ಪತ್ರಿಕೆ ಮತ್ತು ಜೆ.ಸಿ.ಐ. ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ 7ನೇ ವರುಷದ ʻಹಲಸು ಹಣ್ಣು ಮೇಳ’ ಜೈನಭವನದಲ್ಲಿ ಜರಗಿತು.
ನವತೇಜ ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತಡ್ಕ ರವರು ನ್ಯೂಸ್ ಪೇಡ್ ಜೊತೆ ಮಾತಾನಾಡಿದರು, ʻ2018 ರಲ್ಲಿ ಪ್ರಪ್ರಥಮ ಬಾರಿಗೆ ಹಲಸು ಮೇಳ ಆಯೋಜಿಸುವಾಗ ಕೇವಲ 10 ದಿನಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಜನರಿಂದ ಉತ್ತಮ ಸ್ಪಂದನೆ ದೊರಕಿತ್ತು. ಅದೇ ಪ್ರೇರಣೆ ಹಲಸು ಮೇಳವನ್ನು ಏಳನೇ ವರ್ಷದವರೆಗೆ ತಂದಿದೆ. ನವತೇಜ ಟ್ರಸ್ಟ್ ಮುಂದುವರಿಸುತ್ತಾ ಕೃಷಿ ಸಂಬಂಧಿಸಿದ ಮೇಳಗಳನ್ನ ಆಯೋಜನೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಮಂಚೂರಿ, ಟಿಕ್ಕ, ಕಬಾಬ್, ಬಜ್ಜಿ, ಮಿಲ್ಕ್‌ಶೇಕ್… ಘಮ ಘಮ

ಹಲಸು ಮೇಳದಲ್ಲಿತ್ತು ಸ್ಪೆಷಲ್ ಸ್ಪೆಷಲ್..
ಮೇಳವನ್ನು ಮೂರು ವಿಭಾಗ ಮಾಡಿದ್ದು, ಆರಂಭದಲ್ಲಿ ಹಲಸಿನ ಗಿಡಗಳು, ಅದರ ಉತ್ಪನ್ನ, ಹಲಸಿನ ಸೋಳೆಯನ್ನು ಬಿಡಿಸುವ ಪರಿಕರಗಳ ಮಳಿಗೆ, ಇತರ ಹಣ್ಣುಗಳ ಮಳಿಗೆ, ಕೃಷಿ ಪರಿಕರಗಳ ಮಳಿಗೆ, ಆಹಾರ ಮೇಳಗಳು ಸಿಗುತ್ತವೆ. ಸ್ಥಳದಲ್ಲೇ ತಯಾರಿಸುವ ಹಲವು ಪಾರಂಪರಿಕ ತಿಂಡಿಗಳು ಗ್ರಾಹಕರ ಬಾಯಿ ಚಪ್ಪರಿಸಿವೆ. ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿವೆ. ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ಸೊಳೆ ರೊಟ್ಟಿ, ಕೇಕ್, ಹಲ್ವ, ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆ ವಿಶೇಷ ಖಾದ್ಯಗಳಾಗಿವೆ.ಹೀಗೆ ಹಲವಾರು ಬಗೆಯ ತಿಂಡಿ ಗಳನ್ನು ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಕಲ್ಪಿಸಿದ್ದರು.
0 ಕಾಮೆಂಟ್‌ಗಳು