ಪುತ್ತೂರು : ದುರ್ಗಾ ಶ್ರೀ ಎಂಟರ್ಪ್ರೈಸಸ್ ನ 25ನೇ ವರ್ಷದ ಸಂಭ್ರಮ ಮತ್ತು ಏರ್ಟೆಲ್ DTH ಮತ್ತು FWA ಮೀಟ್ -2025 ಕಾರ್ಯಕ್ರಮ ನಗರದ ಹೇಮಂತ್ ಸ್ಮಾರಕ ಹಾಲ್ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಭಾ ಭವನದಲ್ಲಿ ಇಂದು ನಡೆಯಿತು.
ಕಾರ್ಯಕ್ರಮವನ್ನು ದರ್ಶನ್ ಕೆ ಟಿ ಹಾಗೂ ಇರ್ನಿಸ್ ಡಿ ಸೋಜಾ ದೀಪ ಬೆಳಗಿಸಿ ಉದ್ಘಾಟಿಸಿದರು.ಏರ್ಟೆಲ್ ಕರ್ನಾಟಕ ಝೋನಲ್ ಮ್ಯಾನೇಜರ್ ಗುರುರಾಜ್ ಎಸ್ ಮಾತನಾಡಿ ರೀಟೇಲರ್ ಹಾಗೂ ಸರ್ವಿಸ್ ಇಂಜಿನಿಯರ್ ಗಳಿಗೆ ಕಂಪೆನಿಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ದುರ್ಗಾ ಶ್ರೀ ಎಂಟರ್ಪ್ರೈಸಸ್ ಮಾಲಕ ನಾಗೇಶ್ ಬಲ್ನಾಡ್ ಮಾತನಾಡಿ ಕಳೆದ 25 ವರ್ಷಗಳಿಂದ ಸಂಸ್ಥೆಗೆ ಸಹಕರಿಸಿ ರಾಜ್ಯದಲ್ಲಿ ಎರಡನೇ ಹಿರಿಯ ಏರ್ಟೆಲ್ ವಿತರಕರಾಗಿ ಇರಲು ಹೆಮ್ಮೆ ಇದೆ ಇದೆಲ್ಲ ಎಲ್ಲಾ ಗ್ರಾಹಕರು ಹಾಗೂ ಡೀಲರ್ & ಟೆಕ್ನಿಷಿಯನ್ ಗಳ ಶ್ರಮ ಎಂದರು.ವೇದಿಕೆಯಲ್ಲಿ ಏರ್ಟೆಲ್ ಕರ್ನಾಟಕ ಝೋನಲ್ ಮ್ಯಾನೇಜರ್ ಗುರುರಾಜ್ ಎಸ್, ದುರ್ಗಾ ಶ್ರೀ ಎಂಟರ್ಪ್ರೈಸಸ್ ಮಾಲಕ ನಾಗೇಶ್ ಬಲ್ನಾಡ್,ಕ್ಲಸ್ಟರ್ ಮ್ಯಾನೇಜರ್ ವಿ ಎಂ ಪಾಟೀಲ್, ಬ್ಯುಸಿನೆಸ್ ಮ್ಯಾನೇಜರ್ ಶರತ್ ಕುಮಾರ್ ಟೀಮ್ ಲೀಡರ್ ವಿಜಯ್ ಕುಮಾರ್ ಉಪಸ್ಥಿತರಿದ್ದರು.
ಪುತ್ತೂರು ಹಾಗೂ ಕಡಬ ತಾಲೂಕಿನ ಸುಮಾರು 92 ಜನ ರೀಟೇಲರ್ ಹಾಗೂ ಸರ್ವಿಸ್ ಇಂಜಿನಿಯರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಈ ವೇಳೆ ಅತೀ ಹೆಚ್ಚು ಮಾರಾಟ ಮಾಡಿದ ಮಾರಾಟಗಾರರಿಗೆ ಉಡುಗೊರೆ ನೀಡಿ ಗುರುತಿಸಲಾಯಿತು.ಸಂಸ್ಥೆಯ ಸಿಬ್ಬಂದಿ ಭವ್ಯ ಕುರಿಯ ಪ್ರಾರ್ಥಿಸಿ,ಪ್ರದೀಪ್ ಎಸ್ ಸೇರ್ತಾಜೆ ಸ್ವಾಗತಿಸಿದರು.ಸಿಮಾಮ್ ಡಿ ಸೋಜಾ ಮತ್ತು ಮಹೇಶ್ ಕಡೇಶಿವಾಲಯ ಸಹಕರಿಸಿದರು.ಸಂಸ್ಥೆಯ ಮಾಲಕರಾದ ನಾಗೇಶ್ ಬಲ್ನಾಡು ವಂದಿಸಿದರು.ಶಿಲ್ಪ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.
0 ಕಾಮೆಂಟ್‌ಗಳು