ಕಡಬ: ಕೋಡಿಂಬಾಳ ಗ್ರಾಮದ ವಿದ್ಯಾನಗರ ಬಳಿಯಿಂದ ಅಕ್ರಮವಾಗಿ ದನವೊಂದನ್ನು ಪಿಕಪ್ ವೊಂದರಲ್ಲಿ ಸಾಗಾಟ ಮಾಡಲಾಗಿದ್ದು, ಇದನ್ನು ಗಮನಿಸಿದ ಸಂಘಟನೆಯ ಕಾರ್ಯಕರ್ತರು ತಡೆಯಲು ಮುಂದಾದಾಗ ಅವರ ಮೇಲೆಯೇ ವಾಹನ ಹತ್ತಿಸಲು ಯತ್ನಿಸಿದ ಆರೋಪ ಕೇಳಿ ಬಂದಿದ್ದು ಈಗಾಗಲೇ ಹಿಂದೂ ಸಂಘಟನೆಯ ಕಾರ್ಯಕರ್ತರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಕಡಬ ಮೆಸ್ಕಾಂ ಇಲಾಖೆಯ ಲೈನ್ ಮ್ಯಾನ್ ಆಗಿರುವ ಗುರು ಮೂರ್ತಿ ಎಂಬವರು ದನವನ್ನು ಮಾರಾಟ ಮಾಡಿದ್ದರೆನ್ನಲಾಗಿದೆ. ಈಗಾಗಲೇ ದನ ಮಾರಾಟ ಮಾಡಿದ ಲೈನ್ ಮ್ಯಾನ್ ಬಲ್ಯ ಗ್ರಾಮದ ವ್ಯಕ್ತಿಯೊಬ್ಬರ ಮನೆಗೆ ಕರೆದುಕೊಂಡು ಹೋಗಿದ್ದು ಇದು ಸುಳ್ಳು ಎಂದು ತಿಳಿದು ಬಂದಿದೆ. ಸಂಘಟನೆಯ ಮುಖಂಡರು ಪಿಕಪ್ ನ್ನು ವಶಕ್ಕೆ ತೆಗೆದುಕೊಳ್ಳಬೇಕೆಂದು ಪಟ್ಟು ಹಿಡಿದಿದ್ದು, ಎಸ್ .ಐ. ಅಭಿನಂದನ್ ಹಾಗೂ ಸಿಬ್ಬಂದಿಗಳು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
0 ಕಾಮೆಂಟ್‌ಗಳು