ಆಲಂಕಾರು ಕೃಷಿ ಪತ್ತಿನ ಸಹಕಾರಿ ಸಂಘ ವಾರ್ಷಿಕ ಮಹಾಸಭೆ..!


ಕಡಬ: ಕಡಬ ತಾಲೂಕು ಆಲಂಕಾರು ಕೃಷಿ ಪತ್ತಿನ ಸಹಕಾರಿ ಸಂಘವು ವರದಿ ಸಾಲಿನಲ್ಲಿ ೨೦೭.೯೪ ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.೭ ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ ತಿಳಿಸಿದರು. 
 
ಆಲಂಕಾರು ಪ್ರಧಾನ ಕಚೇರಿಯ ರೈತ ಸಭಾಭವನದಲ್ಲಿ ಶನಿವಾರ ನಡೆದ ಸಂಘದ ಮಹಾಸಭೆಯಲ್ಲಿ ಚರ್ಚೆ ನಡೆದು ಆರಂಭದಲ್ಲಿ ೧೦ ಶೇ.ಡಿವಿಡೆಂಡ್ ನೀಡುವ ತಿರ್ಮಾಣಕ್ಕೆ ಬರಲಾಯಿತು. ಬಳಿಕ ಸಂಸ್ಥೆಯ ಹಳೆನೇರಿಂಕಿಯಲ್ಲಿ ನಿರ್ಮಾಣ ಮಾಡಲಾದ ಸಂಘದ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಶೆ.೩ ರಷ್ಟು ಡಿವಿಡೆಂಡ್ ಸದಸ್ಯರು ಬಿಟ್ಟುಕೊಡಬೇಕೆಂಬ ಅಧ್ಯಕ್ಷರ ಮಾತಿಗೆ ಸದಸ್ಯರು ಸಹಮತ ಸೂಚಿಸಿದರು. 
   
ಈ ಹಿಂದಿನ ಆಡಳಿತ ಮಂಡಳಿ ನಿಯಾಮವಳಿಗಿಂತ ಹೆಚ್ಚಿನ ಸಿಟ್ಟಿಂಗ್ ಭತ್ತೆ ತೆಗೆದುಕೊಂಡಿದೆ. ಹಾಗಾಗಿ ಹೆಚ್ಚು ತೆಗೆದುಕೊಂಡ ಭತ್ಯೆಯನ್ನು ಸಂಘಕ್ಕೆ ವಾಪಸ್ಸು ನೀಡಬೇಕೆನ್ನುವ ವಿಚಾರದಲ್ಲಿ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಮಾಜಿ ಅಧ್ಯಕ್ಷ ಧರ್ಮಪಾಲ ರಾವ್ ಮಾತನಾಡಿ, ಡಿ ಸಿ ಸಿ ಬ್ಯಾಂಕಿನ ಸೂಚನೆ ಮೇರೆಗೆ ಭತ್ಯೆ ಪಡೆಯಲಾಗಿದೆ. ಭತ್ಯೆಯ ನಿಯಮಾವಳಿ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲದೆ ಆಡಳಿತ ಮಂಡಳಿ ನಿರ್ದಿಷ್ಟ ಮೊತ್ತವನ್ನು ನಿರ್ಣಯಿಸಿಕೊಂಡಿತ್ತು. ಡಿ ಸಿ ಸಿ ಬ್ಯಾಂಕಿನ ಪ್ರತಿನಿಧಿಯೂ ಭತ್ಯೆ ಪಡೆಯುತ್ತಿದ್ದರು. ಈ ಹಿಂದಿನ ನಾಲ್ಕು ವರ್ಷದಲ್ಲಿ ಆಡಿಟ್ ವರದಿಯಲ್ಲಿ ಹೆಚ್ಚುವರಿ ಮೊತ್ತ ತೆಗೆದುಕೊಂಡಿರುವುದು ಉಲ್ಲೇಖವಾಗಿಲ್ಲ ಆದರೆ ಈ ಭಾರಿಯ ಆಡಿಟ್ ವರದಿಯಲ್ಲಿ ಉಲ್ಲೇಖೆವಾಗಿರುವುದು ದುರಂತ ಎಂದರು. ಹಾಗಾಗಿ ಹೆಚ್ಚುವರಿ ಮೊತ್ತಮವನ್ನು ವಸೂಲಿ ಮಾಡುವುದಕ್ಕೆ ಆಕ್ಷೇಪವಿದೆ ಎಂದಾಗ ಇದಕ್ಕೆ ಮಾಜಿ ನಿರ್ದೇಶಕರಾದ ರಾಮಚಂದ್ರ ನಾಯ್ಕ, ಪ್ರದೀಪ್ ರೈ ಮನವಳಿಕೆ, ಆಶಾತಿಮ್ಮಪ್ಪ, ಸಂತೋಷ್, ಶೇಷಪತಿ ರೈ ಸಹಮತ ವ್ಯಕ್ತಪಡಿಸಿದರು. ಸದಸ್ಯ ನಾಗಪ್ಪ ಗೌಡ ಮಾತನಾಡಿ ಭತ್ತೆ ತೆಗೆದುಕೊಳ್ಳುವುದರ ಬಗ್ಗೆ ಸಹಮತವಿದೆ ಆದರೆ ಈ ಹಿಂದಿನ ಮಹಾಸಭೆಯಲ್ಲಿ ವಿಷಯ ಮಂಡಿಸಿ ತೆಗೆದುಕೊಳ್ಳಬೇಕಿತ್ತು ಎಂದರು. ಈ ಬಗ್ಗೆ ಅಧ್ಯಕ್ಷರು ಮಾತನಾಡಿ, ಹೆಚ್ಚುವರಿ ವಸೂಲಿಗೆ ಕಾನೂನಾತ್ಮಕವಾಗಿ ನೋಟೀಸು ನೀಡಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು. 

 ಹಳೆನೇರಿಂಕಿಯಲ್ಲಿ ಸುಮಾರು ೪ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಟ್ಟಡ ಅಪೂರ್ಣವಾಗಿದೆ. ಮುಂದಿನ ದಿನಗಳಲ್ಲಿ ಮೂಲಭೂತ ವ್ಯವಸ್ಥೆ ಕಲ್ಪಿಸಲು  ವೆಚ್ಚ ತಗಲಲಿದೆ. ಇದೊಂದು ಸಂಘದ ಆರ್ಥಿಕ ಚೌಕಟ್ಟುನ್ನು ಪರಿಗಣಿಸದೆ ನಿರ್ಮಿಸಲಾಗಿದೆ. ಪೂರ್ಣಗೊಳಿಸಿ ವ್ಯವಹಾರ ನಡೆಸಲು ಸಿಬ್ಬಂದಿಯ ಕೊರತೆಯಿದೆ. ಇದೊಂದು ಗ್ರಾಮೀಣ ಭಾಗವಾಗಿದ್ದರಿಂದ ಭದ್ರತೆಯೂ ಸವಲಾಗಿದೆ. ಸದ್ಯ ಇಲ್ಲಿ ಕಾರ್ಯಚರಿಸಲು ಅಸಾಧ್ಯ ಅಧ್ಯಕ್ಷರು ತಿಳಿಸಿದರು. ಈ ವೇಳೆ ಪರ ವಿರೋಧ ಚರ್ಚೆ ನಡೆಯಿತು. ಗಣೇಶ್ ಹಿರಿಂಜ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಯಾವೂದೆ ದೂರ ದೃಷ್ಟಿಯಿಲ್ಲದೆ ಕಟ್ಟಡ ನಿರ್ಮಿಸಲಾಗಿದೆ. ಇದೊಂದು ನಿಷ್ಪçಯೋಜಕ ಯೋಜನೆ ಎಂದರು. ಸದಸ್ಯ ಈಶ್ವರ ಗೌಡ, ನಾಗಪ್ಪ ಗೌಡ ಮೊದಲಾದವರು ಮಾತನಾಡಿ ಕಟ್ಟಡ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಮಾಜಿ ಅಧ್ಯಕ್ಷ ಧರ್ಮಪಾಲ ರಾವ್ ಮಾತನಾಡಿ, ಕಟ್ಟಡ ನಿರ್ಮಾಣ ಮಾಡಿರುವುದು ಮುಂದಿನ ೫೦ ವರ್ಷಗಳ ಕಾಲದ ದೂರದೃಷ್ಟಿಯಿಂದ , ಹಾಗಾಗಿ ಈಗಲೇ ಲಾಭ ನಷ್ಟದ ಮಾತುಕತೆ ನಡೆಸಿ ಈ ಹಿಂದಿನ ಆಡಳಿತ ಮಂಡಳಿಯನ್ನು ಅಪರಾಧಿಯಂತೆ ಬಿಂಬಿಸಲಾಗುತ್ತದೆ ಎಂದು ಆರೋಪಿಸಿದರು. ಇದಕ್ಕೆ ಜನಾರ್ದನ ಕದ್ರ ಬೆಂಬಲ ಸೂಚಿಸಿ ಮಾತನಾಡಿದರು. ಸುಧಾಕರ ರೈ, ಕಿರಣ್ ಪಾದೆ , ಮಹೇಶ್ ಪಾತ್ರಮಾಡಿ, ಮೋನಪ್ಪ ಗೌಡ ಪೆರಾಬೆ , ಲಕ್ಷಿö್ಮÃನಾರಾಯಣ ಅಲೆಪ್ಪಾಡಿ ಮೊದಲಾದವರು ಮಾತನಾಡಿ ಕಟ್ಟಡದ ಮುಂದಿನ ಕಾಮಗಾರಿ ಅಭಿವೃದ್ದಿಯತ್ತ ಕೊಂಡೊಯ್ಯೊನ ಎಂದರು. ಕಟ್ಟಡದ ಬಗ್ಗೆ ಸುದೀರ್ಘ ಚರ್ಚೆ ನಡೆಯುತ್ತಿದ್ದಾಗ ಮಾತನಾಡಿದ ಸದಸ್ಯ ಹೇಮಂತ ರೈ ಮನವಳಿಕೆ ಅಧ್ಯಕ್ಷರು ಸೂಕ್ತ ನಿರ್ಧಾರ ಕೈಗೊಳ್ಳಿ ಎಂದಾಗ ಮಾತನಾಡಿದ ಅಧ್ಯಕ್ಷರು ಕಟ್ಟಡವನ್ನು ಆರ್ಥಿಕ ಚೌಕಟ್ಟಿನೊಳಗೆ ನಿರ್ಮಿಸಬೇಕಿತ್ತು. ಪೂರ್ಣಗೊಳಿಸುವ ಜವಬ್ದಾರಿ ನಮ್ಮ ಮೇಲೆ ಬಂದಿದೆ. ಶಕ್ತಿ ಮೀರಿ ಪ್ರಯತ್ನಿಸಲಾಗುದು ಎಂದರು. ಆಡಳಿತ ಮಂಡಳಿಯ ಆರ್ಥಿಕ ಸಹಾಯಕ್ಕಾಗಿ ಸಂಘ ಈ ಭಾರಿ ನೀಡಿದ ಡಿವಿಡೆಂಟ್ ಎಲ್ಲವನ್ನು ಸಂಘಕ್ಕೆ ವಿನಿಯೋಗಿಸುವ ಎಂದು ಸದಸ್ಯ ಮುತ್ತಪ್ಪ ಪೂಜಾರಿ ಹೇಳಿದರು. ಈ ವಿಚಾರದಲ್ಲಿ ಜನಾರ್ದನ , ಫಲುಲೂದ್ದೀನ್, ಮೋಹನ್‌ದಾಸ್ ಶೆಟ್ಟಿ, ಯಧುಶ್ರೀ ಆನೆಗುಂಡಿ, ರಾಮಣ್ಣ ಸುರುಳಿ, ಪದ್ಮನಾಭ ಕುಂತೂರು ಮೊದಲಾದವರು ಚರ್ಚಿಸಿದರು. ಬಳಿಕ ಅಧ್ಯಕ್ಷರ ವಿನಂತಿ ಮೇರೆಗೆ ಸದಸ್ಯರು 3% ಡಿವಿಡೆಂಡ್ ಮೊತ್ತವನನು ನೀಡಲು ಒಪ್ಪಿದರು. 
 
ಸಂಘದ ಕುಂತೂರು, ಆಲಂಕಾರು, ಕೊಯ್ಲ ಶಾಖೆಗಳಲ್ಲಿ ಕಾರ್ಯಚರಿಸುತ್ತಿದ್ದ ಜಿನಸಿ ಅಂಗಡಿಗಳು ನಷ್ಟದಲ್ಲಿ ಸಾಗುತ್ತಿದೆ ಸುಮಾರು ೫೬ ಲಕ್ಷ ರೂ ನಷ್ಟವಾಗಿದೆ. ಇದನ್ನು ಮುಚ್ಚುವ ವಿಚಾರವನ್ನು ಅಧ್ಯಕ್ಷರು ಸಭೆಯ ಮುಂದಿಟ್ಟರು. ಈ ವೇಳೆ ಮಾತನಾಡಿದ ಮಾಜಿ ಅಧ್ಯಕ್ಷ ಧರ್ಮಪಾಲ ರಾವ್ ಸದ್ದುದ್ದೇಶದಿಂದ ಜಿನಸಿ ಅಂಗಡಿಗಳನ್ನು ಕೊರೊನ ಕಾಲಘಟ್ಟದಲ್ಲಿ ತೆರೆಯಲಾಯಿತು. ಇದರಿಂದ ಸದಸ್ಯರಿಗೆ ಭಾರಿ ಪ್ರಯೋಜನವಾಗಿದೆ. ಲಾಭದಲ್ಲಿ ಸಾಗುತ್ತಿದೆ ಎಂದು ಸಿಇಓಗಳು ಪ್ರತಿ ತಿಂಗಳು ವರದಿ ಕೊಡುತ್ತಿದ್ದರು. ಆದರೆ ಈ ಗ ನಷ್ಟವಾಗಿದೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು. 
ಮಾರಟ ವಿಭಾಗದ ದಿನಸಿ , ರಸಗೊಬ್ಬರ , ಪೈಪು ಮುಂತಾದ ವ್ಯವಹಾರದ ಒಟ್ಟು ಲೆಕ್ಕಚಾರ ಮಾಡವಾಗ ಮಾರಟ ವಿಭಾಗ ಲಾಭಾಂಶದಲ್ಲಿ ಮುನ್ನಡೆಯುತ್ತಿದೆ. ಆದರೆ ದಿನಸಿ ಮಾತ್ರ ಲೆಕ್ಕಚಾರ ಮಾಡುವಾಗ ನಷ್ಟದಲ್ಲಿತ್ತು. ಪ್ರತೈಕ ವರದಿ ಕೇಳುತ್ತಿದ್ದರೆ ನಾವು ಕೊಡಲು ಸಿದ್ದರಿರುತ್ತಿದ್ದೇವೆ ಎಂದು ಸಿಇಓ ಮನೋಹರ ಪ್ರಕಾಶ್ ತಿಳಿಸಿದರು. ಈ ವೇಳೆ ಮಾತನಾಡಿದ ಮಾಜಿ ಅಧ್ಯಕ್ಷ ಧರ್ಮಪಾಲ ರಾವ್ ಜಿನಸಿ ಮುಚ್ಚವುದಕ್ಕೆ ನನ್ನ ಅಕ್ಷೇಪವಿಲ್ಲ ಎಂದರು. ಪೈಪು ಮಾರಟ ಮಾಡಲು ಅಗತ್ಯಕ್ಕಿಂತ ಹೆಚ್ಚು ಪೈಪು ಖರಿದೀಸಿ ಶೇಖರಿಸಲಾಗಿದೆ ಆದರೆ ಅದೆಲ್ಲವೂ ಮಾರಟವಾಗಾದೆ ಹಾಗೆ ಉಳಿದಿದೆ ವಿಲವಾರಿ ಮಾಡಲು ಕ್ರಮಕೈಗೊಳ್ಳಲಾಗುವುದು , ಜಿನಸಿ ಅಂಗಡಿಗಳನ್ನು ಮುಚ್ಚಲಾಗುವುದು ಎಂದು ನಿರ್ಣಯಿಸಲಾಯಿತು. ಆಡಳಿತ ಮಂಡಳಿ ರೈತರೊಂದಿಗೆ ಸಮಲೋಚಿಸಿ ಉತ್ತಮ ಗುಣಮಟ್ಟದ ರಸಗೊಬ್ಬರವನ್ನು ರೈತರಿಗೆ ನೀಡಬೇಕೆಂದು ಕಿರಣ್ ಆಗ್ರಹಿಸಿದರು.

ಸಂಘದ ರೈತಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮಾಂಸಹಾರ ಊಟ ಮಾಡಲಾಗುತ್ತಿದೆ. ಆರಂಭದಲ್ಲಿ ಸಸ್ಯಹಾರಿ ಊಟಕ್ಕೆ ಅವಕಾಶವಿತ್ತು ಆದರೆ ಈ ಹಿಂದಿನ ಆಡಳಿತ ಮಂಡಳಿ ಮಾಂಸಹಾರಕ್ಕೆ ಅವಕಾಶ ಕಲ್ಪಿಸಿದೆ. ಎಲ್ಲಾ ವರ್ಗದವರೂ ಸಭಾಭವನವನ್ನು ಉಪಯೋಗಿಸುವುದರಿಂದ ಮತ್ತೆ ಸಸ್ಯಹಾರಕ್ಕೆ ಸೀಮಿತವಾಗಬೇಕೆಂದು ಸದಸ್ಯ ಶೇಖರ ಕಟ್ಟಪುಣಿ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮಾಜಿ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಮಾಂಸಹಾರ ಊಟಕ್ಕೆ ಪ್ರತೈಕ ಅಡುಗೆ ಪಾತ್ರೆಗಳ ಬಳಕೆಯಾಗುತ್ತಿತ್ತು. ಮಾಂಸಹಾರ ಊಟ ಅಡುಗೆಗೆ ಇಲ್ಲಿ ಅವಕಾಶ ನೀಡಿಲ್ಲ, ಹೊರಗಡೆಯಿಂದ ತರಲು ಸೂಚಿಸಲಾಗುತ್ತಿತ್ತು. ಈ ಬಗ್ಗೆ ಸುದೀರ್ಘ ಚರ್ಚೆ ನಡೆದಾಗ ಅಧ್ಯಕ್ಷರು ಮಾತನಾಡಿ, ಎಲ್ಲಾ ವರ್ಗದವರ ಧಾರ್ಮಿಕ ಭಾವನೆಗೆ ದಕ್ಕೆಯಾಗುವುದರಿಂದ ಮಾಂಸಹಾರ ಊಟಕ್ಕೆ ಸಭಾಂಗಣದ ಒಳಗಡೆ ಅವಕಾಶವಿಲ್ಲ, ಸಭಾಂಗಣದ ಹೊರಗಡೆ ಆವಕಾಶ ನೀಡಲಾಗುವುದು ಎಂದರು. 
 ಸಂಘದ ಸದ್ಯಸರ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸದಸ್ಯ ಸ್ನೇಹಿ ಇನ್ಸೂರೆನ್ಸ್ ಒಂದನ್ನು ಜಾರಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಸಂಘದ ಕಟ್ಟದಲ್ಲಿರುವ ಕ್ಯಾಂಪ್ಕೋ ಸ್ಥಳಾಂತರವಾಗದAತೆ ಪ್ರಯತ್ನಿಸಲಾಗುವುದು , ಎಲ್ಲಾ ಸದಸ್ಯರು ಒಮ್ಮತದಿಂದ ಸಂಘದ ಅಭಿವೃದ್ದಿಯಲ್ಲಿ ಕೈಜೋಡಿಸಬೇಕು ಎಂದರು.

ಸದಸ್ಯ ಲಕ್ಷ್ಮಿನಾರಾಯಣ ರಾವ್ ಮಾತನಾಡಿ, ಈ ಹಿಂದಿನ ಆಡಳಿತ ಮಂಡಳಿ ಬಹಲಷ್ಟು ಅಭಿವೃದ್ದಿ ಕಾರ್ಯ ಮಾಡಿದೆ. ಆದರೆ ಮುಂದಿನ ಅಧಿಕಾರ ನನಗೆ ಸಿಗಬೇಕೆಂಬ ಹಂಬಲ ವ್ಯಕ್ತಪಡಿಸಿಲ್ಲ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಇದರ ಹಿಂದೆ ಗೂಡಾಚಾರದ ಅರ್ಥವಿದೆ ಇದಕ್ಕೆ ಮತ್ತೆ ಉತ್ತರಿಸುವೆ ಎಂದರು ಈ ವೇಳೆ ಸಭೆಯಿಂದ ತೆರಳಿದ ಲಕ್ಷ್ಮಿನಾರಾಯಣ ರಾವ್ ಅವರನ್ನು ಉತ್ತರ ನೀಡುವವರೆಗೆ ನಿಲ್ಲುವಂತೆ ವಿನಂತಿಸಿದರು. ಉತ್ತರಕ್ಕೆ ಕಾಯದೆ ಹೊರಟು ಹೋದರು ನಾನು ಉತ್ತರಿಸುವೆ ಎಂದು ಅಧ್ಯಕ್ಷರು ಹೇಳಿ, ನಾವೇನು ಉದ್ದೇಶವಿಟ್ಟುಕೊಂಡು ಅಧಿಕಾರಕ್ಕೆ ಬಂದಿಲ್ಲ, ಹಿರಿಯರ ಅಪೇಕ್ಷೆಯಂತೆ ಸ್ಪರ್ದಿಸಿದಾಗ ಸದಸ್ಯರು ಚುನಾಯಿಸಿದ ಕಾರಣ ಅಧಿಕಾರದಲ್ಲಿ ಮುಂದುವರಿಯುತ್ತಿದ್ದೇವೆ ಎಂದರು. 

  
ಕಳೆದ ವರ್ಷದ ಆಡಳಿತದ ಯೋಜನೆಗೆ ಬ್ರೇಕ್ ರೈತಸಭಾಭವನದಲ್ಲಿ
ಮಾಂಸದೂಟ ಬಂದ್, ಕೊಯಿಲ,ಕುಂತೂರು,ಆಲಂಕಾರು ಶಾಖೆಯಲ್ಲಿ ಜಿನಸಿ ಅಂಗಡಿ ಬಂದ್, ಸಭೆಯ ಆರಂಭದಿಂದ ಕೊನೆ ತನಕ ಹಳೆನೇರೆಂಕಿಯ ಲ್ಲಿ ನಿರ್ಮಾಣವಾದ ನೂತನ ಕಟ್ಟಡ ಬಗ್ಗೆ ಪ್ರಸಕ್ತ ಆಡಳಿತ ಮಂಡಳಿ ತಲೆಕೆಡೆಸಿಕೊಂಡು ಚರ್ಚೆ, ನಮ್ಮ ಯೋಜನೆ ಎಲ್ಲವೂ ಸರಿ ಇದೆಯೆಂದು ಕಳೆದ ಆಡಳಿತ ಸಮರ್ಥಿಕೊಳ್ಳುತ್ತಿದ್ದರೆ ಇತ್ತ ನೂತನ ಆಡಳಿತ ಮಂಡಳಿ ಸಭೆಯುದ್ದಕ್ಕೂ ನಿಮ್ಮ ಯೋಜನೆ ಯಾವೂದು ಸರಿ ಇಲ್ಲ, ಇನ್ನೇನಿದ್ರೂ ನಮ್ಮದೆ ಆಢಳಿತ ನಾವು‌ಹೇಳಿದಾಗೆ ಎಲ್ಲವೂ ಎಂದು ಬಿಗಮಾನ ಮೆರೆಯಿತು. , ಇದಕ್ಕೆಲ್ಲ ತಮ್ಮ ತನದ ಸದಸ್ಯರ ಕರತಾಡನ, ಪರವಾದ ಚರ್ಚೆ, ಸಭೆಯ ಮದ್ಯೆ ಮದ್ಯೆ ಎದ್ದು ನಿಂತು ಮಾತನಾಡುತ್ತಿದ್ದ ರಮೇಶ್ ಭಟ್ ಉಪ್ಪಂಗಳ ಕಳೆದ ಬಿಜೆಪಿ ಅವಧಿಯ ಎಲ್ಲಾ ನಿರ್ದೇಶಕರನ್ನು ಮಾತಿನಲ್ಲಿ ತಿವಿಯುತ್ತಿದ್ದರು. ಸಭೆಯುದ್ದಕ್ಕೂ ಕಳೆದ ಬಿಜೆಪಿಯ ಆಡಳಿತ ಮತ್ತು ಪ್ರಸಕ್ತ ಉಪ್ಪಂಗಳ ಸಹಕಾರಿ ನಡುವೆ ಭಾರಿ ಅಂತರ ಕಾಣುತ್ತಿತ್ತು.

ಉದಯ ಕಶ್ಯಪ್ , ಜನಾರ್ದನ ಕಯ್ಯಪೆ, ಅಜಿತ್ ರೈ, ತಿಮ್ಮಪ್ಪ ಗೌಡ ಕುಂಡಡ್ಕ, ಪ್ರಶಾಂತ್ ರೈ, ಶಿವಣ್ಣ ಗೌಡ ಕಕ್ವೆ ಮೊದಲಾದವರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು. ನಿರ್ದೇಶಕರಾದ ಕೇಶವ ಗೌಡ ಎ, ಉದಯ ಎಸ್ ಸಾಲಿಯಾನ್, ಆಶೋಕ ಕೆ, ಗಾಯತ್ರಿ, ರತ್ನ ಬಿ.ಕೆ, ವಿಜಯ ಎಸ್, ಪದ್ಮಪ್ಪ ಗೌಡ, ಕುಂಞ ಮುಗೇರ, ಆಶೋಕ ಹೆಚ್, ಲೋಕೇಶ, ವಲಯ ಮೇಲ್ವಿಚಾರಕ ಶರತ್ ಡಿ ಉಪಸ್ಥಿತರಿದ್ದರು.ಸಿಬ್ಬಂದಿಗಳಾದ ರವಿರಾಜ್ , ರಾಧಕೃಷ್ಣ, ಆನಂದ ಗೌಡ, ಆಶಾಲತಾ, ಮಂಗಳಾ ಪೈ ವಿವಿಧ ವರದಿಗಳನ್ನು ಮಂಡಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮನೋಹರ್ ಪ್ರಕಾಶ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ದಯಾನಂದ ರೈ ವಂದಿಸಿದರು. ಸಿಬ್ಬಂದಿ ಲೋಕನಾಥ ರೈ ನಿರೂಪಿಸಿದರು.

0 ಕಾಮೆಂಟ್‌ಗಳು