ಕಡಬ : ವಿದ್ಯುತ್ ಶಾಕ್ ಗೆ ಒಳಪಟ್ಟು ಮಹಿಳೆಯೋರ್ವರು ಮೃತ ಪಟ್ಟ ಘಟನೆ ಇಂದು ಸಂಜೆ ಕಡಬ ಸಮೀಪದ ಎಡಮಂಗಲದಿಂದ ವರದಿಯಾಗಿದೆ.
ಟ್ಯಾಂಕಿಗೆ ನೀರು ತುಂಬಿಸಲು ಪಂಪ್ ಸ್ಟಾರ್ಟ್ ಮಾಡುತ್ತಿರುವ ವೇಳೆ ಪಂಪ್ ಶೆಡ್ ನಲ್ಲಿ ಮಹಿಳೆಗೆ ವಿದ್ಯುತ್ ಶಾಕ್ ಹೊಡೆದಿದೆ ಎನ್ನಲಾಗಿದೆ.ಎಡಮಂಗಲ ಸಮೀಪದ ದೋಳ್ಪಾಡಿ ಎಂಬಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದ್ದು ಮೃತ ಮಹಿಳೆಯನ್ನು ಜಲಜಾಕ್ಷಿ/ರೇಖಾ ಎಂದು ಗುರುತಿಸಲಾಗಿದೆ.
ಸದ್ಯ ಮೃತ ದೇಹವನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
0 ಕಾಮೆಂಟ್‌ಗಳು