ಕಡಬ :ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಅಧಿಕಾರಿಯಿಂದ ಕಾನೂನು ಸುವ್ಯವಸ್ಥೆ ದಕ್ಕೆ ಆಗ್ತಾ ಇದ್ಯಾ ಎನ್ನುವ ಪ್ರಶ್ನೆ ಕಾಡಲು ಪ್ರಾರಂಭವಾಗಿದೆ.
ಇತ್ತೀಚೆಗೆ ಜಿಲ್ಲೆಯಲ್ಲಿ ಒಂದರ ಮೇಲೆ ಒಂದರಂತೆ ನಡೆದ ಸಾಲು ಸಾಲು ಸರಣಿ ಹತ್ಯೆಯಿಂದ ಹದಗೆಟ್ಟ ಕಾನೂನು ಸುವ್ಯವಸ್ಥೆ ಸರಿಪಡಿಸಲು ಸರ್ಕಾರ ಖಡಕ್ ಹಾಗೂ ರಫ್ ಅಂಡ್ ಟಫ್ ಎಂದು ಖ್ಯಾತಿ ಪಡೆದಿರುವ ಇಬ್ಬರು ಖಡಕ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿತು.
ಇನ್ನು ಹೊಸದಾಗಿ ಕರ್ತವ್ಯಕ್ಕೆ ಹಾಜರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಗರ ಕಮಿಷನರ್ ಕಾನೂನು ಸುವ್ಯವಸ್ಥೆ ಕಾಪಾಡಲು ಒಂದಲ್ಲ ಒಂದು ಪ್ರಯೋಗ ಮಾಡ್ತಾ ಇದ್ರೆ ಕಡಬ ಎಸ್.ಐ ಅಕ್ಷಯ್ ಅವರು ಮಾತ್ರ ಅವರೆಲ್ಲ ಹಿರಿಯ ಅಧಿಕಾರಿಗಳು ಮಾಡ್ತಾ ಪ್ರಯತ್ನವನ್ನು ನೀರಿನಲ್ಲಿ ಹೋಮ ಮಾಡ್ತಾ ಇದ್ದಾರೆ ಅಂತ ಮೇಲ್ನೋಟಕ್ಕೆ ಕಾಣಿಸುತ್ತಿದ್ದೆ.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲಾ ಧಾರ್ಮಿಕ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ನಿಗಾ ಇಡಲು GPS ಮಾಡಲು ಪೊಲೀಸರಿಗೆ ತಿಳಿಸಿದ್ದರು ಎಲ್ಲೂ ಇರದ ವಿರೋಧ ಮಾತ್ರ ಕಡಬದಲ್ಲಿ ವ್ಯಕ್ತವಾಯಿತು.ಮಾತ್ರವಲ್ಲದೆ ಜನ ಎರಡೇ ದಿನದಲ್ಲಿ ವಿರೋಧ ಮಾಡಿ ಠಾಣೆಯ ಮುಂದೆ ಬಂದು ಪ್ರತಿಭಟನೆ ಮಾಡಿದ್ರು.ಜಿಲ್ಲೆಯ ಉಳಿದ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಇರದ ವಿರೋಧ ಕಡಬ ಯಾಕೆ ವ್ಯಕ್ತ ಆಯಿತು ಅಂತ ಹುಡುಕುತ್ತ ಹೋದ್ರೆ ಇದಕ್ಕೆ ಇದಕ್ಕೆ ಕಾರಣ ತನಿಖಾ ಎಸ್ ಐ ಅಕ್ಷಯ್ ಡವಗಿ ಅವರ ನಡೆ ಅನ್ನೋದು ವಾಸ್ತವ ವಿಚಾರ.ಯಾಕಂದ್ರೆ ಎಲ್ಲಾ ಕಡೆ ಕೂಡ ಪೊಲೀಸರು GPS ಮಾಡಲು ತೆರಳಿದ್ದಾರೆ ಆದ್ರೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಹೋದ ಕಾರಣ ಅಲ್ಲೆಲ್ಲೂ ಯಾರು ವಿರೋಧ ಮಾಡಿಲ್ಲ ಅನ್ನೋದನ್ನು ನಾವಿಲ್ಲಿ ಗಮನಿಸಬಹುದು.
ಇತ್ತ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಕಾರಣಕ್ಕೆ ಕಡಬ ಪೊಲೀಸರು 15 ಜನ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣವನ್ನು ದಾಖಲು ಮಾಡಿದ್ರು.ಇಷ್ಟಕ್ಕೆ ಎಲ್ಲಾ ಮುಗೀತು ಅನ್ನುವಷ್ಟರಲ್ಲಿ ಅಕ್ಷಯ್ ಡವಾಗಿ ಮಾತ್ರ ಮತ್ತೆ ಪುನಃ ಹಿಂದೂ ಕಾರ್ಯಕರ್ತನ ಮನೆಗೆ ತೆರಳಿ GPS ಮಾಡುವ ವೇಳೆ ನಿನ್ನ ಮೇಲೆ ರೌಡಿ ಶೀಟರ್ ಮಾಡ್ತೇನೆ ನಿನಗೆ ಪಾಠ ಕಲಿಸ್ಟೇನೆ ಅಂತ ಧಮ್ಕಿ ಹಾಕಿ ಬೂದಿಮುಚ್ಚಿದ ಕೆಂಡಕ್ಕೆ ತುಪ್ಪ ಸುರಿವ ಕೆಲಸ ಮಾಡಿಯೇ ಬಿಟ್ರ ಅನ್ನುವ ಅನುಮಾನ ಕಾಡತೊಡಗಿದೆ.
ಕಾರಣ ನಿನ್ನೆ ನಡೆದ ಪ್ರತಿಭಟನೆ ಸಭೆಯ ಉದ್ದಕ್ಕೂ ಎಲ್ಲರ ಬಾಯಲ್ಲೂ ಬಂದದ್ದು ಒಬ್ಬರೇ ಒಬ್ಬ ಪೋಲಿಸ್ ಅಧಿಕಾರಿಯ ಹೆಸ್ರು ಅದು ವನ್ ಅಂಡ್ ಓನ್ಲಿ ತನಿಖಾ ಎಸ್. ಐ ಅಕ್ಷಯ್ ಅವರದ್ದು ಮಾತ್ರ.
GPS ಮಾಡಲು ಮನೆಗೆ ಬಂದು ನಿಂಗೆ ರೌಡಿ ಶೀಟರ್ ಮಾಡ್ತೇನೆ ನಿಂಗೆ ಪಾಠ ಕಲಿಸಲು ಗೊತ್ತು ಅಂಥ ಹೇಳಲು ಇವರು ಯಾರು ಎಂಬ ಪ್ರಶ್ನೆಯನ್ನು ಎಲ್ಲರೂ ಎತ್ತಿದ್ದಾರೆ.GPS ಮಾಡಲು ಕಡಬ ಠಾಣೆಯ ಎಸ್.ಐ ಅಭಿನಂದನ್ ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿಗಳು ಹಲವರ ಮನೆಗೆ ಭೇಟಿ ಕೊಟ್ಟಿದ್ದು ಅವರ್ಯಾರ ಒಬ್ಬರ ಹೆಸರನ್ನು ಕೂಡ ಇಲ್ಲಿ ಯಾರೂ ಉಲ್ಲೇಖ ಮಾಡಿಲ್ಲ ಅನ್ನೋದು ಗಮನಾರ್ಹ ಸಂಗತಿ.
ಈ ಘಟನೆಗಳನ್ನು ನೋಡಿದ್ರೆ ಇಷ್ಟೆಲ್ಲಾ ಆಗಲು ಅಕ್ಷಯ್ ಅವರೇ ಕಾರಣ ವಾದ್ರಾ ಅನ್ನುವ ಅನುಮಾನ ಮೂಡುತಿದ್ದೆ.ತನ್ನ ಇಮೆಜನ್ನು ಹೆಚ್ಚಿಸಲು ಬೇಕಾಬಿಟ್ಟಿ ವರ್ತಿಸಿದ್ರಾ ಅನ್ನುವ ಪ್ರಶ್ನೆ ಕಾಡತೊಡಗಿದೆ.
ಪೊಲೀಸರು ಜನಸ್ನೇಹಿಯಾಗಿ ಇರಬೇಕು ಹೊರತು ಜನವಿರೋಧಿಯಾಗಿ ಆದ್ರೆ ಏನಾಗುತ್ತೆ ಅನ್ನೋದನ್ನು ಹೇಳ್ತಾ ಇದೆ ಕಡಬದಲ್ಲಿ ನಡೆದ ಘಟನೆಗಳು. ಸಂಭಂದ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ಮಾಡಬೇಕಿದೆ.
0 ಕಾಮೆಂಟ್‌ಗಳು