ಕಡಬ : ಅದೇನೋ ಗೊತ್ತಿಲ್ಲ ಇಲ್ಲಿ ಒಬ್ಬನೇ ಒಬ್ಬ ನರ ಇದ್ದ ಜನ ಬಿಜೆಪಿಗೆ ಸಿಕ್ಕಿಲ್ಲ.ಸಿಕ್ಕಿರುವ ಎಲ್ಲರೂ ದೋ ನಂಬರ್ ವೈವಾಟ್ , ಪರ್ಸನಲ್ ಬ್ಯುಸಿನೆಸ್ ಹಾಗೆ ಹೀಗೆ ಅಂತ ತಮ್ಮ ಮಕ್ಕಳು ,ಮೊಮ್ಮಕ್ಕಳಿಗೆ ಅಂತ ದುಡ್ಡು ಮಾಡುವವರು ಬಿಟ್ರೆ ಧರ್ಮ ರಕ್ಷಣೆ ಬಿಡಿ ಅಟ್ ಲಿಸ್ಟ್ ಧರ್ಮದ ರಕ್ಷಣೆಗೆ ಕಾವಲುಗಾರರಂತೆ ಕೆಲಸ ಮಾಡುವ ಕಾರ್ಯಕರ್ತರ ಜೊತೆ ಇದ್ದಾರೆ ಅಂದ್ರೆ ಅದು ಪಜಿ ಪಜಿ ಲೊಟ್ಟೆ!
ಓಟು ಬರುವಾಗ ಮನೆ ಮನೆ ಭೇಟಿ ಕೊಡಲು,ಕೋಲ ಜಾತ್ರೆ ಆಯನ ಆದಾಗ ಬಂಟಿಂಗ್ಸ್ ಕಟ್ಟಲು,ಪೆತ್ತ ಹಿಡಿಯಲು,ಪ್ರತಿಭಟನೆ ಮಾಡಲು,ಇವರ ಬಾವುಟ ಹಿಡಿಯಲು ಎಲ್ಲದಕ್ಕೂ ಬಿಜೆಪಿಯವರು ಯೂಸ್ ಮಾಡೋದು ಹಿಂದೂ ಕಾರ್ಯಕರ್ತರನ್ನ ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ ಬುಡಿ. ಹಿಂದುತ್ವಕ್ಕಾಗಿ ಮನೆ ಮಠ ಬಿಟ್ಟು ಯಾವುದೇ ಫಲಾಫೇಕ್ಷ ಇಲ್ಲದೆ ನಾಯಿಯ ಹಾಗೆ ಕೆಲ್ಸ ಮಾಡ್ತಾ ಇದ್ರು, ಈ ಕಡಬ ಬಿಜೆಪಿಯವರು ನಮ್ಮ ಹಿಂದೂ ಕಾರ್ಯಕರ್ತರಿಗೆ ಮಾಡುತ್ತಿರುವ ಅನ್ಯಾಯಕ್ಕೆ ಕಡಬದ __ಅಲ್ತಾಯ (ಕಡಬದ ದೈವ) ಕೂಡ ಕ್ಷಮೆ ಕೊಡ್ಲಿಕ್ಕಿಲ್ಲ.
ಇನ್ನು ಈ ಕಡಬ ಬಿಜೆಪಿಯವರು ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಮಾಡಿದ ಬಗ್ಗೆ ಬರೆಯಲು ಕೂತ್ರೆ ಕದಂಬ ರಾಜರ ಕಾಲದಿಂದ ಬರೆಯಬೇಕಾಗಿದಿತು.ಅವತ್ತಿನಿಂದ ಇವತ್ತಿನ ತನಕ ನಾಯಿ ಬೀಲಕ್ಕೆ ಓಟೆ (ಬಿದಿರು) ಹಾಕಿದ್ದೆ ಹಾಕಿದ್ದು ಬಾಲ ಮಾತ್ರ ಹಾಗೆ ಬುಡಿ.....
ಈಗ ಮೈನ್ ಮ್ಯಾಟರ್ ಬರೋಣ ಕರಿನ ತಿಂಗಳು ಮೇ 1 ರ ರಾತ್ರಿ ಸುಹಾಸ್ ಶೆಟ್ಟಿ ಕೊ*ಲೆ ನಡೆಯಿತು ಅದೇ ದಿನ ರಾತ್ರಿ ವಿಹಿಂಪ ಕೊಲೆ ಖಂಡಿಸಿ ಮೇ 2 ರಂದು ಬಂದ್ ಗೆ ಕರೆ ನೀಡಿತ್ತು,ಆದ್ರೆ ಅದ್ರ ಬೆನ್ನಲ್ಲೇ ಗಲಾಟೆ ಆಗಬಾರದು ಅಂತ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿತು.ಮೇ 2 ರಂದು ಜಿಲ್ಲಾದ್ಯಂತ ವಿಹಿಂಪ ಕರೆ ಕೊಟ್ಟ ಪ್ರತಿಭಟನೆ ಗಾಂಡ್ ಗೌಜಿಯಿಂದ ಅಂದುಕೊಂಡ ಹಾಗೆ ನಡೆಯದಿದ್ದರೂ ಕಡಬದಲ್ಲಿ ಯಶಸ್ವಿಯಾಗಿ ನಡೆಯಿತು.ಟಯರಿಗೆ ಸೂ ಕೊಟ್ಟದ್ದು ಅಂದು ಫುಲ್ ವೈರಲ್... ಕಡಬ ತಕುಲ್ ಭಯಂಕರ ಹಾಗೆ.. ಹೀಗೆ.. ಅಂತ ಕಡಬದ ವಿಹಿಂಪ ದವರನ್ನು ಅಟ್ಟಕ್ಕೆ ಇಟ್ಟದ್ದೆ ಇಟ್ಟದ್ದು ಯಬಾ ಭಯಂಕರ ಕಡಬ ತಕುಲೇಕ ಬೋಡು ಈತ್ತುಂಡ ಹಾಗೆ ಹೀಗೆ.ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದರೆ ಯಾವ ಕೇಸು ಎಂತದು ಕೂಡ ಆಗ್ತಾ ಇರ್ಲಿಲ್ಲ ಬಿಡಿ ಅದನ್ನು ಯಾರು ಕೇಳ್ತನು ಇರ್ಲಿಲ್ಲ ಸಮಾಜದ ಮುಂದೆ ಇರುವ ನಾವುಗಳು ಕೂಡ ಕೆಲ ನಾಟಕಗಳನ್ನು ನೋಡಿ ಸುಮ್ಮನೆ ಇರ್ತೇವೆ ಬುಡಿ. ಕಜಿಪು ಪಂಡ ಅವೆಟ್ ಉಪ್ಪು,ಖಾರ,ಪುಲಿ ಎಲ್ಲವೂ ಬೇಕಲ್ಲಾ
ಹೀಗೆ ಇರುವಾಗ ಬಂಟ್ವಾಳದಲ್ಲಿ ಒಬ್ಬ ಮುಸ್ಲಿಂ ಸಮುದಾಯದ ಯುವಕನನ್ನು ಕಿಡಿಗೇಡಿಗಳು ಬರ್ಬರವಾಗಿ ಹತ್ಯೆ ಮಾಡಿದ್ರು ಇದು ಕಾಂಗ್ರೆಸ್ ಪಕ್ಷದ ಬುಡ ಅಲುಗಾಡುವ ತನಕ ಮುಟ್ಟಿತು ಆಡಳಿತದಲ್ಲಿ ಇದ್ದು ಮುಸ್ಲಿಂ ಯುವಕನ ಕೊಲೆ ಸಪೋರ್ಟ್ ಇಲ್ಲ ಹಾಗೆ ಹೀಗೆ ಅಂತ ಒಂದೆಡೆ ಆದ್ರೆ ನಮ್ಮ ಟೀವಿ ಚಾನೆಲ್ ಗಳು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಅಂತೂ ಈ ಇಬ್ಬರು ಯುವಕರ ಸಾವಿನಲ್ಲಿ ಜಾತ್ರೆಯೇ ಮಾಡಿತು ಇದೆಲ್ಲ ಆಗ್ತಾ ಇರುವಾಗ ಪುಣ್ಯಕ್ಕೆ ಒಂದೇ ಒಂದು ಒಳ್ಳೆಯ ನಿರ್ಧಾರ ಮಾಡಿ ಪೊಲೀಸ್ ಇಲಾಖೆಯ ಪ್ರಮುಖ ಅಧಿಕಾರಿಗಳ ವರ್ಗಾವಣೆ ಮಾಡಿ ಖಡಕ್ ಅಧಿಕಾರಿಗಳನ್ನು ನೇಮಿಸಿ ನಿದ್ರೆಯಲ್ಲಿ ಇದ್ದ ಪೊಲೀಸರಿಗೂ ಬೆಚ್ಚ ಮುಟ್ಟಿಸುವ ಕೆಲಸ ಮಾಡಿತ್ತು.
ಹೊಸ SP ಬಂದದ್ದೇ ಬಂದದ್ದು ಮುಸ್ಲಿಂ ಹಾಗು ಹಿಂದೂ ಸಂಘಟನೆಯ ಮುಖಂಡರನ್ನು ಲೆಫ್ಟ್ ರೈಟ್ ತೆಗೆದು ಕೊಳ್ಳಲು ಶುರು ಮಾಡಿ ಬಿಟ್ರು ಆಗ ಕೂಡ ಇಡಿ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾದದ್ದು ಕಡಬದಲ್ಲಿ ಅದಕ್ಕೆ ಕಾರಣವಾದದ್ದು ಕಡಬ ಕ್ರೈಮ್ ಎಸ್.ಐ ನಡೆದು ಕೊಂಡ ರೀತಿ ಹೊರತು ಬೇರೇನೂ ಅಲ್ಲ ಯಾರಾದರೂ ಬಂದು ನಿನ್ನ ಮೇಲೆ ಕೇಸು ಹಾಕುತ್ತೇನೆ ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಅಂದ್ರೆ ಆಯನ ಒಕ್ಕೆಲ್ ಟು ಏರೆಂಡಲ ಉಲ್ಲೇರ ಅತ ವಿಷ್ಯ ಅದು.
ಈಗ ವಿಷ್ಯ ಅದಲ್ಲ ಬಿಡಿ ಕಾನೂನು ಸುವ್ಯವಸ್ಥೆ ಸರಿಪಡಿಸಲು Sp ಸಾಹೇಬರು ಹಿಂದಿನ ಡೈರಿ ತೆಗೆದು ನೋಡಿದಾಗ ಮೇ ಎರಡರಂದು ಸೆಕ್ಷನ್ ಇರುವಾಗ ಪ್ರತಿಭಟನೆ ಮಾಡಿದ್ದಕ್ಕೆ ಯಾಕೆ ಕೇಸು ಹಾಕಿಲ್ಲ ಅಂತ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡು ಎಫ್ಐಆರ್ ಹಾಕಿಸಿದ್ದಾರೆ ಸಮಸ್ಯೆಯ ಆರಂಭಕ್ಕೆ ಮದ್ದು ಅರೆದ್ರೆ ಅಲ್ಲ ಸಮಸ್ಯೆ ಸರಿ ಆಗೋದು ಹಾಗೆ ಮೇ 2 ರಂದು ಪ್ರತಿಭಟನೆ ಮಾಡಿದ್ದಕ್ಕೆ ಐದಾರು ದಿನ ಬಿಟ್ಟು ಎಲ್ಲಾ ಕಡೆ ಕೇಸು ಹಾಕಿದ್ರು. ಕಡಬದಲ್ಲಿ ಕೂಡ ಕೇಸು ಹಾಕಿದ್ರು ಆದ್ರೆ ಕಾಮೆಡಿ ಏನು ಅಂದ್ರೆ ಎಫ್ಐಆರ್ ಅಲ್ಲಿ ಆರೋಪಿಗಳು ಯಾರು ಅಂತ ನೋಡಿದ್ರೆ ಅಪರಿಚಿತರು ಅಂತ ಇದ್ದದ್ದು.
ಅಲ್ಲ ಎಸ್ಐ ಸಾಹೇಬರೇ ಕಡಬದ ವಾಟ್ಸಪ್ ಗ್ರೂಪಿನಿಂದ ಹಿಡಿದು ಟಿವಿ9 ಸ್ಟೇಟ್ ಚಾನೆಲ್ ಅಲ್ಲಿ ಮೇ ಎರಡರಂದು ನಡೆದ ಪ್ರತಿಭಟನೆ ವೀಡಿಯೋ ಪ್ರಸಾರ ಆಗಿದೆ,ಅದಲ್ಲದೆ ಮರುದಿನ ಪತ್ರಿಕೆಯಲ್ಲಿ ಕೆಜಿ ಕೆಜಿ ಹೆಸರು ಸಹಿತ ವರದಿ ಬಂದಿದೆ ಆದ್ರೂ ಒಂದು ವಾರ ಬಿಟ್ಟು ಕೇಸು ಮಾಡುವಾಗ ನಿಮಗೆ ಮಾತ್ರ ಯಾರ ಹೆಸ್ರು ಸಿಗ್ಲಿಲ್ಲ.ಸಾಯ್ಲಿ ಬುಡಿ ನಂತ್ರ ಬಿಜೆಪಿ ಮುಖಂಡ ಒಬ್ಬ ಈ ಕೇಸ್ ನಿಂದ ಎಸ್ಕೇಪ್ ಆಗಲು ನಿಮಗೆ ಒತ್ತಡ ಇದೆ ಅಂತ ಕೂಡ ನಾನೇ ಬರೆದಿದ್ದೆ ಆಮೇಲೆ ಆದ್ರೂ ನೀವು ಪ್ರಮುಖರ ಹೆಸರು ಉಲ್ಲೇಖ ಮಾಡಿದ್ದರೆ ನಿಮ್ಮ ಮೇಲೆ ಜನರಿಗೆ ಸ್ವಲ್ಪ ಒಳ್ಳೆಯ ಅಭಿಪ್ರಾಯ ಇರ್ತಾ ಇತ್ತು.ಬಿಡಿ ನಿಮಗೆ ಕೇಸು ನಿಮ್ಮ ಕಣ್ಣಿಗೆ ಕಂಡವರ ಹೆಸ್ರು ಹಾಕಿ ಮಾಡಿದ್ದೀರಿ ನೋಟಿಸ್ ಕೂಡ ಕೊಟ್ಟಿದ್ದೀರಿ ಇರಲಿ ಈಗ ವಿಷ್ಯ ಇರೋದು ಬಿಜಿಪಿಯವರ ಬಗ್ಗೆ ಅಲ್ಲ ಟಾಪಿಕ್ ಚೇಂಜ್ ಆಗೋದು ಬೇಡ.
ಮೇ ಎರಡರಂದು ವಿಹಿಂಪ ಕರೆ ಕೊಟ್ಟ ಬಂದ್ ಗೆ ಬೆಳಗ್ಗೆ ಬೆಳಗ್ಗೆ ಕಡಬದ ಅಂಗಡಿ ಅಂಗಡಿ ತೆರಳಿ ಬಂದ್ ಮಾಡಿ ಅಂದದ್ದು ಮಾಡಲ್ಲ ಅಂದವರ ಬಳಿ ಜಗಳ ಆಡಿದ್ದು ಎಲ್ಲಾ ಬಿಜೆಪಿ ಅವರು ಭಾಷಣ ಬಿಗಿದು ಮೈಲೇಜ್ ತೆಗೆದು ಕೊಂಡದ್ದು ಎಲ್ಲಾ ಬಿಜೆಪಿ ಅವರು ಕೇಸು ಮಾತ್ರ ಅಮಾಯಕರ ಮೇಲೆ ನಿಕ್ಲೆಗ್ ನಾಚಿಕೆ ಮಾನ ಮರ್ಯಾದಿ ಉಂಡ...? ನನ್ನ ಮೇಲೆ ಬೇಡ ಅವರ ಮೇಲೆ ಕೇಸ್ ಹಾಕಿ ಅಂತ ಜಾರಿದ್ದೀರಿ ಅಲ್ಲ ಮೊನೆಯಲ್ಲಿ ಚೋಲಿ ಉಂಟಾ ನಿಮಗೆ...?ಯಾಕೆ ಎಲ್ಲದಕ್ಕೂ ಕಡಬದ ಕಾರ್ಯಕರ್ತರನ್ನು ಬಲಿ ಕೊಡ್ತಾ ಇದ್ದೀರಿ...!? ನೀವುಗಳು ಬಾಯಿಯಲ್ಲಿ ಬೊಗಳೆ ಬಿಟ್ಟು ಒಳಗಿಂದ ಒಳಗೆ ವ್ಯಾಪಾರ ವಹಿವಾಟು ಮಾಡ್ತಾ ಇದ್ದೀರಿ ಅಂತ ಇವರ್ಯಾರೂ ಮಾಡ್ತಾ ಇಲ್ಲ..!ದುಡ್ಡಿನ ಹಿಂದೆ ಹೋದವರು ಇವರು ಅಲ್ಲ.ಕಡಬದಲ್ಲಿ ಅಲ್ಲ ಎಲ್ಲ ಕಡೆ ಕೂಡ ಬೆರಳಣಿಕೆಯ ಕಾರ್ಯಕರ್ತರು ಪಾಪ ಸ್ವಂತ ದುಡಿಮೆಯನ್ನು ಕೂಡ ಸಮಾಜಕ್ಕೆ ಮೀಸಲು ಇಟ್ಟು ಹೊಟ್ಟೆ ಕಟ್ಟಿ ಕೆಲ್ಸ ಮಾಡ್ತಾ ಇರುವಾಗ ಅಂಥವರಿಗೆ ಈ ರೀತಿ ಮಾಡ್ತೀರಿ ಅಲ್ಲ.. ತಿಂದ ಅನ್ನ ನಿಮಿಗೆ ಹೇಗೆ ಜೀರ್ಣೆ ಆಗುತ್ತೆ ಮಾರೇ...?
ನಂಗೆ ಇದಕ್ಕೂ ಯಾವ ಸಂಭದ ಕೂಡ ಇಲ್ಲ ಆದ್ರೆ ಕಡಬದ ಹಿಂದೂ ಸಂಘಟನೆಯ ಕಾರ್ಯಕರ್ತರ ಕೆಲಸವನ್ನು ನಾನು ಕಣ್ಣಾರೆ ಕಂಡವ ನೋಡ್ತಾ ಇರುವವ.ಕಾರ್ಯಕರ್ತರು ಯಾವತ್ತೂ ಕೂಡ ನಿಮ್ಮ ಹಾಗೆ ವೈಟ್ ಅಂಡ್ ವೈಟ್ ಹಾಕಿ ತಿರುಗಲು ಆಸೆ ಪಟ್ಟವರು ಅಲ್ಲ ಪ್ರತಿ ಕಾರ್ಯಕ್ರಮದಲ್ಲಿ ಕಾಗದ ಹಂಚುವುದರಿಂದ ಹಿಡಿದು ಚಯಾರ್ ಜೋಡಿಸುವ ಕೆಲಸ ಮಾಡ್ತಾ ನಿಮ್ಮನ್ನು ಸ್ಟೇಜ್ ಮೇಲೆ ಕೂರಿಸಿದವರು.
ಮೊನ್ನೆಯ ವಿಷ್ಯ ಅಲ್ಲ ಪ್ರತಿ ವಿಚಾರದಲ್ಲಿ ಕೂಡ ನಾನು ನೋಡ್ತಾ ಬಂದಿದ್ದೇನೆ.ಕಡಬದ ಬಿಜೆಪಿ ಪ್ರಮುಖರು ಯಾಕೆ ವಿಹಿಂಪ ಇರಲಿ ಜಾಗರಣ ಇರಲಿ ಯಾವುದೇ ಸಂಘಟನೆಯ ಕಾರ್ಯಕರ್ತರ ಪರ ಇಲ್ಲ...? ಬಾಯಿ ಬಿಟ್ರೆ ಕಾರ್ಯಕರ್ತರ ಪಕ್ಷ ಕಾರ್ಯಕರ್ತರ ಪಕ್ಷ ಅಂತೀರಿ ಅಲ್ಲ ಒಬ್ಬೊಬ್ಬ ಕಾರ್ಯಕರ್ತನ ಮೇಲೆ ಎಷ್ಟು ಕೇಸು ಇದೆ ಅನ್ನೋದು ಗೊತ್ತಿದ್ಯ ನಿಮ್ಗೆ ಯಾಕೆ ಕಂಡವರ ಮಕ್ಕಳನ್ನು ಬಾವಿಗೆ ದೂಡಿ ಅದ್ರಲ್ಲಿ ರಾಜಕೀಯ ಮಾಡ್ತೀರಿ....? ಇನ್ನು ಇದನ್ನು ಬರೆಯಲು ವಿಹಿಂಪ ದವರು ಹೇಳಿದ್ದು ಹಾಗೆ ಹೀಗೆ ಅಂಥ ಹೇಳಿ ನಾಳೆ ಅವರ ಜೊತೆ ಜಗಳ ಮಾಡಿದ್ರು ಆಶ್ಚರ್ಯ ಇಲ್ಲ ನಿಮ್ಮ ರಾಜಕೀಯದವರ ನಾಲಗೆ ಹೇಗೆ ಬೇಕು ಹಾಗೆ ತಿರುಗುತ್ತೆ ಅಲ್ಲ.ನಿಮ್ಮಂತ ಕೊಳಕು ಮನಸ್ಥಿತಿ ಯಾವುದೇ ಕಾರ್ಯಕರ್ತರಿಗೆ ಕೂಡ ಇಲ್ಲ ಎಲ್ಲಾ ವಿಚಾರಗಳನ್ನು ಗಮನಿಸಿ ಬರೆಯಬೇಕಾದ ಅನಿವಾರ್ಯತೆ ಬಂದಿದೆ ಅಷ್ಟೇ.ಈ ಹಿಂದೆ ಕೂಡ ಕಾರ್ಯಕರ್ತರ ಕಡೆಗಣನೆ ಬಗ್ಗೆ ನ್ಯೂಸ್ ಅಪ್ಡೇಟ್ ಅಲ್ಲಿ ಹಾಕಿದ್ದೆ ಆದ್ರೆ ಸರಿ ಆಗುವ ಲಕ್ಷಣ ಕಾಣ್ತಾ ಇಲ್ಲ ಅಷ್ಟೇ.ಇನ್ನಾದರೂ ಸಂಬಂಧ ಪಟ್ಟ ಪ್ರಮುಖರು ಕಾರ್ಯಕರ್ತರ ಕಷ್ಟಕ್ಕೆ ಜೊತೆ ನಿಂತು ಕೊಳ್ಳುತ್ತಾರ ಅಥವಾ ಭಾಷಣಕ್ಕೆ ಸ್ಥಿಮಿತ ಆಗುತ್ತರ ಅಂತ ಕಾದು ನೋಡಬೇಕಿದೆ...
0 ಕಾಮೆಂಟ್‌ಗಳು