ಕಡಬ :ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಜಾತ್ರೆ ವೈಯಕ್ತಿಕ ಮನಸ್ತಾಪ,ನಾನೇ ದೊಡ್ಡವ,ನಾವು ಹೇಳಿದ್ದೆ ಆಗಬೇಕು ಹಾಗೆ ಹೀಗೆ etc ಅಂತ ನಿಂತು ಹಲವು ವರ್ಷವೇ ಆಗಿಹೋಗಿರೋದು ಎಲ್ಲರಿಗೂ ಗೊತ್ತಿರುವ ವಿಚಾರವೇ.ಆದ್ರೆ ಕಡಬದಲ್ಲಿರುವ ಜನತೆಯ ಮನದಲ್ಲಿ ಜಾತ್ರೆ ಆಗಲೇ ಬೇಕು ಅನ್ನೋದು ಇತ್ತು. ಜಾತ್ರೆಯ ಟೈಮ್ ಬರುವಾಗ ಕಡಬದಲ್ಲಿದ್ದವರ ಬಾಯಲ್ಲಿ ಬರ್ತಾ ಇದ್ದದು ಒಂದೇ ಒಂದು ಮಾತು ಮುಕುಲೆನಾ ಈ ಉಲಾಯಿತ ಜಗಳಟ್ ದೈವಗು ಕೊರೊಂದು ಇತ್ತಿನ ಸೇವೆನು ದಾಯೆ ಉಂತವೋಡು ಅನ್ನೋದು...? ಇವರ ಒಳ ಜಗಳದ ಪ್ರಭಾವ ಬೀರ್ತಾ ಇರೋದು ನಮಿಗೆ ಅನ್ನೋದು.ಯಾಕಂದ್ರೆ ಕಡಬವನ್ನು ರಕ್ಷಣೆ ಮಾಡ್ತಾ ಇರೋದು ದೈವವೇ ಅನ್ನೋದು ಇಲ್ಲಿರುವವರ ಇಲ್ಲಿಗೆ ಬಂದವರ ನಂಬಿಕೆ.ಕಾಲ ಕಾಲಕ್ಕೆ ಕೊಡ್ತಾ ಇದ್ದ ಕೋಲ ತಂಬಿಲ ನಿಲ್ಲಿಸಿದರೆ ಅದರಿಂದ ಅನಾಹುತ ಕಟ್ಟಿಟ್ಟ ಬುತ್ತಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ ದೈವ ದೊಡ್ಡದೇ ಹೊರತು ಮನುಷ್ಯರಲ್ಲ.
ಹೀಗೆ ವೈಯಕ್ತಿಕವೋ ಏನೋ ಅದು ಕಮಿಟಿ ಅವರ ವಿಚಾರಗಳು ಒಟ್ಟಿನಲ್ಲಿ ಜಾತ್ರೆ ನಿಂತು ಕಡಬಕ್ಕೆ ಗ್ರಹಣ ಮಾತ್ರ ಆವರಿಸಿ ಇದ್ದದ್ದು ಸುಳ್ಳಲ್ಲ ಇದೀಗ ಈ ವರ್ಷ ಜಾತ್ರೆ ನಡೆದ ದಿನದಿಂದ ಕಡಬಕ್ಕೆ ಹೊಸ ಚೈತ್ಯನ ಸಿಕ್ಕಿದೆ.ಜಾತ್ರೆ ಆಯಿನನೆ ಆಯಿನ ಪೂರ ಸರಿ ಆಂಡ್ ಅಂತ ಜನರ ಬಾಯಲ್ಲಿ ಬರ್ತಾ ಇದೆ ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಬರಹಗಳು ಕಳೆದ ಕೆಲ ದಿನಗಳಿದ ಭಾರಿ ವೈರಲ್ ಆಗುತಿದ್ದೆ.
ವೈರಲ್ ಆರ್ಟಿಕಲ್ ಹೀಗಿದೆ👇🏼
*ಗುತ್ತಿನ ಮನೆಯ ಗತ್ತಿನ ಮನುಷ್ಯನ ಅಹಂಕಾರಕ್ಕೆ ಬಲಿಯಾಗುತ್ತಿದೆಯಾ ಕಡಬದ ಆಯನ (ಕಡಬದ ಜಾತ್ರೆ ) ......???*
ಕಡಬ ಎಂಬ ಊರು ಹಿಂದೆ ರಾಜಮನೆತನದ ಆಳ್ವಿಕೆಯಲ್ಲಿದ್ದು ಇಂದು ತಾಲೂಕು ಕೇಂದ್ರವಾಗಿ ಪ್ರಸಿದ್ದಿ ಹೊಂದಿರುತ್ತದೆ.
ಕಡಬ ಪರಿಸರದಲ್ಲಿ ಹಲವಾರು ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಅಸ್ತಿಕ ಭಕ್ತರ ನಂಬಿಕೆ ಮತ್ತು ಭಕ್ತಿಯಿಂದ ದೇವಾಲಯ, ದೈವಸ್ಥಾನ, ಮಂದಿರಗಳಲ್ಲಿ ವಿವಿಧ ಜಾತ್ರೆ , ಕೋಲ, ಭಜನೆ ಇತ್ಯಾದಿಗಳು ಅದ್ದೂರಿಯಾಗಿ ನಡೆದುಕೊಂಡು ಬರುತ್ತಿದೆ.
ಕಡಬದಲ್ಲಿ ಹಿರಿಯರು ತಲೆ ತಲಾಂತರಗಳಿಂದ ಕಡಬದ ಪ್ರಧಾನ ದೈವವಾಗಿ ಕಡಂಬಳಿತ್ತಾಯ ಮತ್ತು ಪುರುಷ ಹಾಗೂ ಸಪರಿವಾರ ದೈವಗಳನ್ನು ಆರಾಧಿಸಿಕೊಂಡು ಬರುತ್ತಿದ್ದು, ಊರು ಪರಊರುಗಳಲ್ಲಿ ಪ್ರಸಿದ್ದಿ ಪಡೆದುಕೊಂಡ ಕಡಬದ ಆಯನ ಎಂಬ ಹೆಸರಿನಲ್ಲಿ ದೈವಗಳ ನೇಮವು ಮಾಡದಲ್ಲಿ ಕೊಡಿ ಏರುವುದರೊಂದಿಗೆ ನಡೆದು ಕೊಂಡುಬರುತ್ತಿತ್ತು.
ಹಲವಾರು ವರ್ಷಗಳಿಂದ ನಿಂತು ಹೋಗಿದ್ದ ಕಡಬದ ಆಯನದಿಂದ ಮಾಡದ ಗುಡಿ ಸಂಪೂರ್ಣ ಶಿಥಿಲಾವಸ್ಥೆ ಹೊಂದಿದ ಕಾರಣ ಊರ ಪರಊರ ದೈವಭಿಮಾನಿಗಳು ಒಟ್ಟು ಸೇರಿ ಚಿಂತನೆ ನಡೆಸಿ ಮಾಡದ ನವೀಕರಣದೊಂದಿಗೆ ಜೀರ್ಣೋದ್ಧಾರ ಕಾರ್ಯಕ್ಕೆ ಅಣಿಯಾಗುತ್ತಿದ್ದಂತೆ ಅಲ್ಲಿಯವರೆಗೆ ಈ ಕಡೆ ತಲೆ ಹಾಕಿ ಮಲಗದ ಗುತ್ತಿನ ಮನೆಯ ಗತ್ತಿನ ಮನುಷ್ಯನ ಗತ್ತು ಆರಂಭವಾಗುತ್ತದೆ. ಪ್ರಥಮ ವರ್ಷದ ಅದ್ದೂರಿಯ ಆಯನವು ಅತ್ಯಂತ ವೈಭವದಿಂದ ನಡೆದ ದಿನದಿಂದಲೇ ಈತನ ಬಾಯಿಂದ ದೈವಸ್ಥಾನ ನನ್ನದು, ನಾನೇ ಯಜಮಾನ, ನಾನೇ ಪ್ರಧಾನ ಆಡಳಿತಗಾರ ಎಂಬ ಬಿಗುಮಾನದ ನುಡಿಗಳು ಉದುರಾಲಾರಂಭಿಸುತ್ತದೆ.
ಇದನ್ನು ಕೇಳಿದ ಹಿರಿಯ ಧಾರ್ಮಿಕ ಮುಂದಾಳುಗಳು ದೈವದ ಕಡೆ ನೋಡಿ ಸುಮ್ಮನಿದ್ದರು. ಅಲ್ಲಿಂದ ಮುಂದುವರಿದ ಈತನ ದರ್ಪ ದಬ್ಬಾಳಿಕೆ ಅಹಂಕಾರ ಮಿತಿ ಮೀರಿ ವಿಜೃಂಭಿಸುತ್ತಿರಲು ಲೋಕಕ್ಕೆ ಬಂದೆರಗಿದ ಕೋರನಾ ಕಾಲದಲ್ಲಿ ಅನಿವಾರ್ಯವಾಗಿ ನೇಮೋತ್ಸವ ನಡೆಸಲು ಆಗದೆ ಆ ವರ್ಷದ ಕಡಬ ಆಯನ ಬಾಕಿಯಾಯಿತು. ಕಡಬದ ಆಯನ ಎರಡು ವರ್ಷ ಬಾಕಿಯಾದ ಕಾರಣ ಕನಿಷ್ಠ ಮುಂದಿನ ನೇಮೋತ್ಸವ ನಡೆಯುವ ಮೊದಲು ಐದು ಮನೆತನದವರು ಸೇರಿ ಕಡಬದ ಮಾಡದಲ್ಲಿ ಗಣಹೋಮ ಮತ್ತು ಕಲಶಾಭಿಷೇಕ ನಡೆಯಬೇಕು ಎಂದಾಗ ಇದಕ್ಕೆ ಪೂರ್ಣವಾಗಿ ವಿರೋಧಿಸಿದ ಈ ಗುತ್ತಿನ ಮನೆಯವನಿಂದಾಗಿ ಒಟ್ಟು ಐದು ವರ್ಷ ಕಡಬದ ಆಯನ ನಡೆಯದೇ ಬಾಕಿಯಾಯಿತು.
ನೇಮೋತ್ಸವ ಬಾಕಿ ಆಗಿ ಸಮಸ್ಯೆಗಳು ಉದ್ಭವಿಸಲು ಕಡಬ ಜಾತ್ರೆ ನಡೆಸುವ ಸಲುವಾಗಿ ಬಂಡಾರದ ಮನೆಗಳಿಗೆ ಸಂಬಂಧ ಪಟ್ಟ ಪ್ರಮುಖರು ಮತ್ತು ಊರಿನ ಹಿರಿಯರು ವಿಮರ್ಶೆ ಮಾಡಲು ಒಂದುಗೂಡಿದ ಸಂದರ್ಭದಲ್ಲಿ ಸ್ವಯಂ ಘೋಷಿತ ಪ್ರಧಾನ ಆಡಳಿತದಾರನಿಂದ ಒಮ್ಮತದ ಅಭಿಪ್ರಾಯಕ್ಕೆ ವಿರೋಧ ವ್ಯಕ್ತವಾಯಿತು. ಈತನ ಉದ್ದಟತನದಿಂದ ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿದ್ದ ಕಡಂಬಳಿತ್ತಾಯ ದೈವದ ಮತ್ತು ಸಹ ಪರಿವಾರ ದೈವಗಳ ನೇಮ ನಿಂತು ಹೋಗಿರುತ್ತದೆ . ಇದಕ್ಕೆ ಸಂಪೂರ್ಣವಾಗಿ ಗತ್ತಿನ ಮನುಷ್ಯ ಕಾರಣ ಹೊರತು ದೈವಗಳ ಬಂಡಾರದ ಮನೆಗಳು ಕಾರಣವಲ್ಲ.
ನೇಮೋತ್ಸವ ಕ್ರಮಬದ್ದವಾಗಿ ಪುನರಾರಂಭ ಮಾಡಲು ಹಲವಾರು ಧಾರ್ಮಿಕ ಕ್ಷೇತ್ರದ ಹಿರಿಯರು ಪ್ರಯತ್ನಿಸಿದರಾದರೂ ಈ ಗುತ್ತಿನವನ ಮೊಂಡಾಟದಿಂದ ಯಶಸ್ವಿಯಾಗಲಿಲ್ಲ. ಕ್ರಮ ಪ್ರಕಾರವಾಗಿ ಬೇರೆ ಬೇರೆ ಕಡೆಗಳ ಐದು ಮನೆತನದಿಂದ ಬಂಡಾರ ಬಂದು ನೇಮೋತ್ಸವ ಜರಗಬೇಕಾಗಿತ್ತು. ಆದರೆ ಈ ವ್ಯಕ್ತಿಯು ವೈಯಕ್ತಿಕ ಸ್ವಾರ್ಥಕೊಸ್ಕರ ತಾನೇ ಮೆರೆದಾಡಬೇಕು, ತನ್ನ ಹೆಸರೇ ಮೇಲಿರಬೇಕು ಎಂಬ ಉದ್ದೇಶದಿಂದ ಅನಾದಿಕಾಲದಿಂದ ನಡೆಸಿಕೊಂಡು ಬರುತ್ತಿದ್ದ ಆಚರಣೆಗಳನ್ನು ಧಿಕ್ಕರಿಸಿ ಈ ವರ್ಷ ಕಡಬದಲ್ಲಿ ಜನರನ್ನು ಮರಳುಮಾಡಿ ನೇಮೋತ್ಸವವನ್ನು ನಡೆಸಿದ್ದಲ್ಲದೆ, ಇದೀಗ ಜೂನ್ 8 ರಂದು ಕಡಬದ ಮಾಡದಲ್ಲಿ ಕಡಂಬಳಿತ್ತಾಯ ಸ್ವಾಮಿಯ ಮೂರ್ತಿಯನ್ನು ತನಗಿಷ್ಟ ಬಂದ ಸ್ವಜಾ*ತಿಯವರಿಂದ ಪ್ರತಿಷ್ಠೆ ಮಾಡಲು ಹೊರಟಿರುತ್ತಾನೆ. ಈತನಿಂದ ಆಗುವ ತೊಂದರೆಗಳಿಂದ ಕಡಬದ ಜನರನ್ನು ಕಡಂಬಳಿತ್ತಾಯ ಸ್ವಾಮಿ ಮತ್ತು ಪುರುಷ ದೈವಗಳೇ ಕಾಪಾಡಬೇಕು.
ಮಾಡದಲ್ಲಿ ಊರವರನ್ನು ಒಟ್ಟು ಸೇರಿಸಿ ಪ್ರಶ್ನೆ ಚಿಂತನೆಗೆ ಒಪ್ಪದ ಈ ವ್ಯಕ್ತಿ ತನ್ನ ಮನೆಯಲ್ಲಿ ಕೆಲವೇ ಕೆಲವು ಜನರನ್ನು ಸೇರಿಸಿಕೊಂಡು ಊರಿಗೆ ಸಂಬಂದ ಪಟ್ಟ ದೈವಸ್ಥಾನದ ಬಗ್ಗೆ ಪ್ರಶ್ನೆ ಚಿಂತನೆಯನ್ನು ನಡೆಸಿದ್ದಾನೆ. ಕಡಬಕ್ಕೆ ಸಂಬಂಧಪಟ್ಟ ದೈವಗಳ ಹೆಸರಿನಲ್ಲಿ ಊರವರನ್ನು ಸೇರಿಸದೆ ತಾನು ಮತ್ತು ತನ್ನ ಚೇಲಾಗಳನ್ನು ಸೇರಿಸಿಕೊಂಡು ದೈವಕಿಂತಲೂ ತಾನೇ ದೊಡ್ಡವ ಎಂಬ ಭಾವನೆಯಲ್ಲಿ ತನ್ನ ಸ್ವಯಂ ವಿಜೃಂಭಣೆಗೋಸ್ಕರ ದೈವಸ್ಥಾನದ ಮತ್ತು ಕಡಬದ ಆಯನದ ಹೆಸರನ್ನು ಬಳಸಿಕೊಂಡು ಮೆರೆದಾಡುತ್ತಿದ್ದಾನೆ.
ಈತ ಎಷ್ಟು ಉತ್ತಮ ವ್ಯಕ್ತಿ ಎಂದರೆ ಹಿರಿಯ ತಲೆಮಾರುಗಳಿಂದ ಗುತ್ತಿನ ಮನೆಯ ಒಡೆತನದಲ್ಲಿ ಇದ್ದ ಆಸ್ತಿಗಳೆಲ್ಲವನ್ನು ಬೇರೆಯವರಿಗೆ ಮಾರಾಟ ಮಾಡಿ ನುಂಗಿ ನೀರು ಕುಡಿದಿದ್ದಾನೆ. ತನ್ನ ಹೆತ್ತ ತಾಯಿಯನ್ನೇ ಇನ್ಯಾರದ್ದೋ ಆಶ್ರಯದಲ್ಲಿ ಬದುಕುವಂತೆ ಮಾಡಿದ ಈತ ಯಾವ ದೇವರ ಸೇವೆ, ದೈವ ಸೇವೆ ಮಾಡಿದರೇನು ಫಲ...!!
ದೈವ ಮುಡಿಯಾಗಿ
ಹೊರಡುವ ಮೆರವಣಿಗೆಯಲ್ಲಿ ರಾಜನಂತೆ ಪೇಟಧರಿಸಿ ಯಾರೋ ಹಿಡಿಯುವ ಕೊಡೆಯ ಅಡಿಯಲ್ಲಿ ಸಾಗುವ ಈತನ ಭಕ್ತಿ ಎಷ್ಟು ದೊಡ್ಡದೆಂದರೆ ದೇವಸ್ಥಾನದಲ್ಲಿ ದೇವರಿಗೆ ಅಡ್ಡ ಬಿದ್ದು ನಮಿಸುವುದನ್ನು ಇದುವರೆಗೆ ನೋಡಿದವರಿಲ್ಲ ,ಅಲ್ಲಿ ಕೊಟ್ಟ ತೀರ್ಥವನ್ನು ಸ್ವೀಕಾರ ಮಾಡುವುದಿಲ್ಲ.
ಒಟ್ಟಿನಲ್ಲಿ ಈತನ ಬಗ್ಗೆ ಬರೆಯಲು ಹೋದರೆ ಕಾದಂಬರಿಯ ರಚನೆಯಾಗಬಹುದು.....!!!
ಹಿಂದಿನ ಆರಾಧನ ಕ್ರಮದಲ್ಲಿ ಕಡಬದ ಆಯನವನ್ನು ನಡೆಸಿಕೊಂಡು ಬರುವುದರಿಂದ ಈತನಿಗೆ ಆಗುವ ಸಮಸ್ಯೆಯಾದರು ಏನು...???
ಕೇವಲ ನೇಮ ನಡೆಯುವುದಕ್ಕಾಗಿ ಇರುವ ಮಾಡದಲ್ಲಿ ದೈವದ
ಪ್ರತಿಷ್ಠಾಪನೆ ಮಾಡುವುದು ಸರಿಯೇ..???
ಇದು ಸರಿಯಾಗಿದ್ದಲ್ಲಿ ಈತನ ಮನೆಯಲ್ಲಿ ಇರುವ ದೈವದ ಬಂಡಾರವನ್ನು ಕೂಡ ಇಲ್ಲೇ ಪ್ರತಿಷ್ಠಾಪನೆ ಮಾಡಬಹುದಲ್ಲವೇ ...???
ಅನಾದಿಕಾಲದಿಂದ ನಡೆದುಕೊಂಡು ಬರುತ್ತಿದ್ದ ಪರಂಪರೆಯನ್ನು ಬದಲಿಸಲು ಹೊರಟ ಇತನ ಅಧಿಕಪ್ರಸಂಗಿತನಕ್ಕೆ ಕಡಬ ಊರಿನವರೇ ಸೂಕ್ತ ರೀತಿಯಲ್ಲಿ ಉತ್ತರ ಕೊಡಬೇಕು .....!!!🙄🙄
ಬರಹ..🖊️
ಪರಂಪರೆಯ ಉಳಿವಿಗಾಗಿ ಚಿಂತಿಸುವ ದೈವಭಕ್ತ.
ಎರಡನೆಯ ಸಂದೇಶ👇🏼
*ಕಡಬದ ಮಾಡದ ಸತ್ಯಾಸತ್ಯತೆ ಏನು.....???*
ಐದು ಕಡೆಗಳಿಂದ ಭಂಡಾರ ಬಂದು ನಡೆಯುತ್ತಿದ್ದ ವಿಜೃಂಭಣೆಯ ಕಡಬ ಆಯನ ಕೇವಲ ಒಂದು ಮನೆಯಿಂದ ಮಾತ್ರ ಭಂಡಾರ ಬಂದು ನಡೆಯುವಲ್ಲಿ ಕಾರಣ ಏನು....??
ಯಾಕೆ....??
ಐದು ಕಡೆಗಳಿಂದ ಭಂಡಾರ ಬಂದು ಕಡಬ ಆಯನ (ಜಾತ್ರೆ) ನಡೆದು ಮರಳಿ ಭಂಡಾರವು ಭಂಡಾರದ ಮನೆಗಳಿಗೆ ತೆರಳುತ್ತಿದ್ದುದು ವಾಡಿಕೆ.
ಆದರೆ ಮೊನ್ನೆ ಕಡಂಬಳಿತ್ತಾಯ ಸ್ವಾಮಿಯನ್ನು ಮಾತ್ರ ಮಾಡದಲ್ಲಿ ಪ್ರತಿಷ್ಠೆ ಮಾಡಲು ಕಾರಣವೇನು....???
ಹೀಗಾಗಲು ವ್ಯಕ್ತಿಯೋರ್ವನ ಸರ್ವಾಧಿಕಾರದ ಪ್ರಭಾವವೇ....??
ಇದಕ್ಕೆ ಊರಿನ ದೈವ ಭಕ್ತರ ಸಮ್ಮತಿ ಇದೆಯೇ...???
ಸ್ವಜಾ#ತಿಯವನಿಂದಲೇ ಮಾಡದಲ್ಲಿ ಸ್ವಾಮಿಯ ಪ್ರತಿಷ್ಠೆ ಮಾಡುವುದು ಸಮಂಜಸವೇ...??
ಸಂಪ್ರದಾಯ ಮುರಿದು ತನ್ನಿಚ್ಚೆಯಂತೆ ದೈವದ ಕಾರ್ಯಗಳನ್ನು ಮಾಡಿಸುವುದು ಊರಿಗೆ ಕ್ಷೇಮವೇ....!! ಅಥವಾ ಅವನತಿಗೆ ನಾಂದಿಯೇ..??
ಕೆಲವೇ ಕೆಲವು ಮಂದಿಯನ್ನು ತನ್ನ ದಾಳಗಳನ್ನಾಗಿಸಿ ಮಾಡುವ ಕಾರ್ಯಕ್ಕೆ ಸದ್ಯದಲ್ಲಿಯೇ ಕಡಬದ ಊರಿನ ಭಕ್ತ ಜನತೆ ಪ್ರಶ್ನಿಸುವ ಕಾಲ ಸನ್ನಿಹಿತವಾಗಲಿದೆ.
ಒಂದು ವೇಳೆ ಕಡಂಬಳಿತ್ತಾಯ ದೈವದ ಭಂಡಾರವು ಹಿಂದಿನಂತೆ ಭಂಡಾರಾದ ಮನೆಯಿಂದಲೇ ಬರುವಂತದಲ್ಲಿ ಮಾಡದಲ್ಲಿ ಪ್ರತಿಷ್ಠಾಪನೆ ಮಾಡಿದ ಮೂರ್ತಿಯನ್ನು ಏನು ಮಾಡುವುದು...!! ಗುತ್ತಿನ ಮನೆಗೆ ಕೊಂಡು ಹೋಗಬಹುದೇ....???
ಭಂಡಾರ ಬರದಿರುವ ಇತರ ದೈವಗಳ ಮೂರ್ತಿಯನ್ನು ಮಾಡದಲ್ಲಿ ಯಾವಾಗ ಪ್ರತಿಷ್ಠಾಪನೆ ಮಾಡುವುದು....??
ಈ ಎಲ್ಲಾ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಉತ್ತರಿಸುವಿರಾ ಗುತ್ತಿನಾನಾರೇ.... 😯
ಹೀಗೆ ಈ ಎರಡು ಸಂದೇಶ ಗಳು ಕಡಬದ ಹಲವು ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡುತಿದ್ದು ಪ್ರಧಾನ ಆಡಳಿತದಾರನಿಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.ಇನ್ನು ಕೆಲ ಗ್ರೂಪ್ ಗಳಲ್ಲಿ ಈ ಸಂದೇಶಗಳು ಡಿಲಿಟ್ ಆಗಿದ್ದು ಕೆಲ ದಿನಗಳಿಂದ ಇಷ್ಟೆಲ್ಲಾ ಸಂದೇಶಗಳು ಹರಿದಾಡುತಿದ್ದರು ಈ ಬಗ್ಗೆ ಸಂಬಂಧ ಪಟ್ಟವರು ಯಾವುದೇ ಪ್ರತಿಕ್ರಿಯೆ ನೀಡದೆ ಇರೋದು ಹಲವು ಅನುಮಾನುಗಳಿಗೆ ಎಡೆ ಮಾಡಿಕೊಟ್ಟಿದೆ.
0 ಕಾಮೆಂಟ್‌ಗಳು