ಕಡಬ : ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ನಡೆದ ಪ್ರತಿಭಟನೆ-ರಸ್ತೆ ತಡೆಯಲ್ಲಿ ಪಾಲ್ಗೋಂಡವರ ವಿರುದ್ಧ FIR ದಾಖಲು...!

ಕಡಬ: ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಮೇ.2ರಂದು ವಿ.ಹಿಂ.ಪ. ಜಿಲ್ಲಾ ಬಂದ್ ಗೆ ಕರೆ ನೀಡಿದ್ದು ಈ ಹಿನ್ನೆಲೆಯಲ್ಲಿ ಕಡಬದಲ್ಲಿಯೂ ರಸ್ತೆ ತಡೆ ಬಂದ್ ನಡೆದಿತ್ತು. ಪ್ರತಿಭಟನೆಯ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಉಪ್ಪಿನಂಗಡಿ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ರಸ್ತೆ ಯಲ್ಲಿ ಟಯರ್ ಗಳನ್ನು ಉರಿಸಲಾಗಿತ್ತು. ಸಧ್ಯ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಕಡಬ ಠಾಣೆಯಲ್ಲಿ BNS 2023
(U/s-126(2),189(2),285,190) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
FIR ನಲ್ಲಿ ಏನಿದೆ.. ?
ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ 01-05-2025 ರಂದು ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ನಿಮಿತ್ತವಾಗಿ ಪಿರ್ಯಾದುದಾರರು ಮೇಲಾಧಿಕಾರಿಯವರ ಆದೇಶದಂತೆ ದಿನಾಂಕ 02-05-2025 ರಂದು ಬೆಳಿಗ್ಗೆ 09-30 ಗಂಟೆ ಸಮಯಕ್ಕೆ ಇಲಾಖಾ ವಾಹನ ಕೆಎ 19 ಜಿ 1028 ಹೆಚ್ ಪಿ-05 ರಲ್ಲಿ ಬಲ್ಯ, ಕುಂತೂರು ಕಡೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಕಡಬ ಪೇಟೆಯ ಕಡಬ ಜಂಕ್ಷನ್ ನಲ್ಲಿ ಜನರು ಗುಂಪು ಸೇರಿ ರಸ್ತೆ ತಡೆ ಮಾಡಿ ಟಯರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಪಿರ್ಯಾದುದಾರರು ಸಿಬ್ಬಂದಿಯೊಂದಿಗೆ ಕಡಬಕ್ಕೆ ಬಂದಿರುತ್ತಾರೆ. ಪಿರ್ಯಾದುದಾರರು ಹಾಗೂ ಸಿಬ್ಬಂದಿಗಳು ಬರುವುದನ್ನು ನೋಡಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರರು ಅಲ್ಲಿಂದ ಹೋಗಿರುತ್ತಾರೆ,ಪಿರ್ಯಾದುದಾರರು ಸ್ವಲ್ಪ ಜನರನ್ನು ನೋಡಿದ್ದು ಅವರ ಪರಿಚಯ ಇರುವುದಿಲ್ಲ.ಕಡಬ ಜಂಕ್ಷನ್ ನಲ್ಲಿ ಏಕಾ ಏಕಿ ರಸ್ತೆಯಲ್ಲಿ ಅಡ್ಡವಾಗಿ ಕುಳಿತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಹಾಗೂ ಇತರ ತುರ್ತು ಸೇವೆಗೆ ಅಡ್ಡಿ ಪಡಿಸಿರುತ್ತಾರೆ. ಆದುದರಿಂದ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಅಕ್ರಮ ಕೂಟ ಸೇರಿ ವಾಹನಗಳನ್ನು ತಡೆದು ನಿಲ್ಲಿಸಿ,ಗೊಂದಲದ ವಾತಾವರಣವನ್ನು ನಿರ್ಮಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಹಾಗೂ ರಸ್ತೆ ತಡೆ ಮಾಡಿದ ಪ್ರತಿಭಟನಾಕಾರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿಕೆ.ಮೇಲಾಧಿಕಾರಿಗಳವರೊಂದಿಗೆ ಚರ್ಚಿಸಿ ತಡವಾಗಿ ದೂರು ನೀಡುತ್ತಿರುವುದಾಗಿದೆ ಎಂದಿದೆ.
F.I.R ಪ್ರತಿ

ತನ್ನ ಹೆಸರು ಕೇಸಿನಲ್ಲಿ ಸೇರಿಸದಂತೆ ರಾಜಕೀಯ ಮುಖಂಡನೊಬ್ಬನಿಂದ ಒತ್ತಡ ..?
ಇನ್ನು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸುಮಾರು 20 ಮಂದಿಯ ಹೆಸರನ್ನು ಈಗಾಗಲೇ ಪೊಲೀಸರು ಶಾರ್ಟ್ ಲಿಸ್ಟ್ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದ್ದು ಆದ್ರೆ ಪೊಲೀಸರು ಮಾತ್ರ ಇನ್ನೂ ಕೂಡ ಯಾರ ಹೆಸರನ್ನು ಬಹಿರಂಗಪಡಿಸಿಲ್ಲ ಅಷ್ಟೇ ಅಲ್ಲದೆ FIRನಲ್ಲಿ ಕೂಡ ಯಾರ ಹೆಸರನ್ನು ಉಲ್ಲೇಖಿಸಿಲ್ಲ ಈ ಮಧ್ಯೆ ಪ್ರಕರಣದಲ್ಲಿ ತಮ್ಮ ಹೆಸರನ್ನು ಸೇರಿಸಬಾರದು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ರಾಜಕೀಯ ಮುಖಂಡನೊಬ್ಬ ಪ್ರಭಾವಿಗಳ ಮೂಲಕ ಪೋಲಿಸರ ಮೇಲೆ ಒತ್ತಡ ಹೇರುತ್ತಿರುವ ವಿಚಾರವು ಮೂಲಗಳಿಂದ ತಿಳಿದು ಬಂದಿದೆ.ಇನ್ನೂ ವಿಷಯ ಬಹಿರಂಗವಾಗುತ್ತಿದಂತೆ ಕೇಸಿಗೆ ಹೆದರುವ ಇಂಥಹ ಮುಖಂಡರು ಮುಖಸ್ತುತಿಗೆ ಪ್ರತಿಭಟನೆಗೆ ಬರುವ ಆವಶ್ಯಕತೆ ಇದೆಯಾ ಎಂಬ ಪ್ರಶ್ನೆಯನ್ನು ಕಾರ್ಯಕರ್ತರು ಎತ್ತಿದ್ದಾರೆ ಎನ್ನಲಾಗಿದೆ.

0 ಕಾಮೆಂಟ್‌ಗಳು