ಇರಾ ಪಾಂಡೆ ಎನ್ನುವಾಕೆ ಡೇಟಿಂಗ್ ಆ್ಯಪ್ ಮೂಲಕ ದೂರುದಾರರೊಂದಿಗೆ ಪರಿಚಯ ಮಾಡಿಕೊಂಡು ಸ್ಪ್ರೆಡೆಕ್ಸ್ ಎಂಬ ವೆಬ್‌ಸೈಟ್ ಮೂಲಕ ಹಣ ಹೂಡಿಕೆ ಮಾಡುವಂತೆ ತಿಳಿಸಿ ಅದೇ ವೆಬ್‌ಸೈಟ್ ಅನ್ನು ಹೋಲುವಂತಹ ಬೇರೊಂದು ವೆಬ್‌ಸೈಟ್ ಲಿಂಕ್ ಕಳುಹಿಸಿದ್ದಳು. ಅನಂತರ ಅದರ ಮೂಲಕ ಹಂತ ಹಂತವಾಗಿ ಹೂಡಿಕೆ ಮಾಡಿಸಿದ್ದಳು. ದೂರುದಾರರು ಒಟ್ಟು 8.50 ಲ.ರೂ. ಹೂಡಿಕೆ ಮಾಡಿದ್ದರು. ಈ ಪೈಕಿ 1.20 ಲ.ರೂ. ವಿದ್‌ಡ್ರಾ ಮಾಡಿದ್ದರು. ಉಳಿದ 7.30 ಲ.ರೂ. ವಾಪಸ್ ಪಡೆಯಲು ಯತ್ನಿಸಿದಾಗ ಶೇ. 30ರಷ್ಟು ತೆರಿಗೆ ಪಾವತಿಸಬೇಕು ಎಂದು ತಿಳಿಸಿದ್ದಳು. ಆಗ ದೂರುದಾರರಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
Scam: ಡೇಟಿಂಗ್ ಆ್ಯಪ್ ಮೂಲಕ ಪರಿಚಯಸಿಕೊಂಡು 7.30 ಲಕ್ಷ ವಂಚಿಸಿದ ನಯವಂಚಕಿ...!

ಮಂಗಳೂರು: ವೆಬ್‌ಸೈಟ್ ಮೂಲಕ ಹೂಡಿಕೆ ಮಾಡಿಸಿ 7.30 ಲ.ರೂ. ವಂಚಿಸಿರುವ ಘಟನೆ ನಡೆದಿದೆ.
0 ಕಾಮೆಂಟ್‌ಗಳು