ಕರೆಂಟ್ ಕೊಡುವ ಅಧಿಕಾರಿಗಳಿಗೆ ಶಾಕ್ ಕೊಡೋರು ಯಾರು....?

ಕಡಬ:ಹೇಳೋದಕ್ಕೆ ತಾಲೂಕು ಕೇಂದ್ರ ಆದ್ರೆ ದೊಡ್ಡ ದಡ್ಡ ಅಧಿಕಾರಿಗಳಿಗೆ ಅದೇಕೋ ಏನೋ ಇಲ್ಲಿನ ಅಧಿಕಾರಿಗಳು ಏನು ಮಾಡಿದ್ರೂ ನಡೆಯುತ್ತೆ ಅನ್ಸುತ್ತೆ ಹಾಗಾಗಿ ಇಲ್ಲಿನ ಅಧಿಕಾರಿಗಳು ಅವರಿಗೆ ಹೇಗೆ ಬೇಕು ಹಾಗೆ ಇರೋದು.
ಕಡಬದ ಮೆಸ್ಕಾಂ ಕಚೇರಿಯಲ್ಲಿ ಇಂದು ಜನ ಸಂಪರ್ಕ ಸಭೆ ಅಂತೆ ಆದ್ರೆ ಈ ವಿಚಾರ ಮಾಧ್ಯಮದವನ್ನು ಸೇರಿ ಒಂದು ನರ ಪಿಲ್ಲೆಗೂ ಗೊತ್ತಿಲ್ಲ ,ಎಂತ ಅವಸ್ಥೆ ಅಲ್ಲ ಮಾರ್ರೆ ಇವರದ್ದು.

ಜನ ಸಂಪರ್ಕ ಸಭೆ ಅನ್ನೋದು ಇರೋದು ಜನರಿಗೆ, ಆದ್ರೆ ಇಲ್ಲಿನ ಅಧಿಕಾರಿಗಳು, ಇವರ ಬಂಡವಾಳ ಗೊತ್ತಾಗುತ್ತೆ ಅಂತ ಯಾರಿಗೂ ಹೇಳದೆ ಗುಪ್ತವಾಗಿ ಸಭೆ ನಡೆಸುತ್ತಾರೆ ಅನ್ನೋದು ಸಾರ್ವಜನಿಕರ ಆರೋಪ.ಇನ್ನು ಸಭೆಗೆ ಬಂದ ಹಿರಿಯ ಅಧಿಕಾರಿಗಳಿಗೆ ಇಲ್ಲಿನ ಜನ ಫುಲ್ ಬ್ಯುಸಿ,ಯಾರಿಗೂ ಯಾವುದೇ ಸಮಸ್ಯೆ ಇಲ್ಲ ಹಾಗಾಗಿ ಯಾರು ಬಂದಿಲ್ಲ ಅಂತ ಸಬೂಬು ನೀಡಿ ಕಳಿಸುತ್ತಾರೆ ಅನ್ನಿಸುತ್ತೆ.
ನೆನಪಾದಾಗ ಲೈನ್ ರಿಪೇರಿ ಕರೆಂಟ್ ನಂಬಿ ಕೆಲಸಕ್ಕೆ ಹೋಗುವ ಕಾರ್ಮಿಕರ ಪರದಾಟ ..!
ಇನ್ನು ಈ ಕಡಬ ಮೆಸ್ಕಾಂ ಇಲ್ಲಿ ಇದ್ಯೋ ಅಥವಾ ದೊರದ ಮಂಗಳ ಗ್ರಹದಲ್ಲಿ ಇದೆಯೋ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ ಮಾರ್ರೆ.ಅಲ್ಲ ಪುತ್ತೂರು,ಮಂಗಳೂರು,ಸುಳ್ಯದ ಕಡೆಯೆಲ್ಲಾ ಲೈನ್ ಆಫ್ ಮಾಡೋದದ್ರೆ ಒಂದೆರೆಡು ದಿನದ ಹಿಂದೆಯೇ ಪತ್ರಿಕೆಗಳಲ್ಲಿ,ಡಿಜಿಟಲ್ ಮಾಧ್ಯಮಗಳಲ್ಲಿ,ವಾಟ್ಸಪ್ ಗ್ರುಪು ಗಳಲ್ಲಿ ಮಾಹಿತಿ ಹೋಗಿರುತ್ತೆ.ಆದ್ರೆ ನಮ್ಮ ಕಡಬದಲ್ಲಿ ಹೇಳೋರು ಕೇಳೋರು ಇಲ್ಲ ಅಲ್ಲ,ಹಾಗೆ ಇವರಿಗೆ ಕುಸಿ ಬಂದಾಗ ಲೈನ್ ಆಫ್ ಮಾಡಿ ಕೆಲ್ಸ ಶುರು ಮಾಡುತ್ತಾರೆ.ಅಲ್ಲ ಮಾರ್ರೆ ಈ ಕಡಬದ ಮೆಸ್ಕಾಂ ನವರಿಗೆ ಅದೇಗೆ ಕೆಲಸ ಮಾಡೋದಕ್ಕೆ ಸಡನ್ ಆಗಿ ಜನ ಸಿಗ್ತಾರೆ ಗೊತ್ತಿಲ್ಲ.ಈ ಟ್ರಿಕ್ಸ್ ಅನ್ನು ನಮ್ಮೆಲ್ಲರಿಗೂ ಹೇಳಿದ್ರೆ ತುಂಬಾ ಒಳ್ಳೆಯದಿತ್ತು ಅಲ್ವಾ..?ಯಾಕಂದ್ರೆ ಅರ್ಜೆಂಟ್ ಕೆಲಸ ಇರುವಾಗ ಯಾರು ಕೂಡ ಸಿಗೋದಿಲ್ಲ.ತಾಲೂಕು ಹೆಡ್ ಕ್ವಾಟ್ರಸ್ ಅಲ್ಲಿ ಇವರು ಸಡನ್ ಆಗಿ ಕರೆಂಟ್ ತೆಗದು ಲೈನ್ ರಿಪೇರಿ ಅಂತ ಕುಂತ್ರೆ ಯಾವುದಾವುದೋ ಕೆಲ್ಸಕ್ಕೆ ದೂರು ದೂರಿಂದ ಜನ ಏನು ಮಾಡಬೇಕು..? ಪಾಪ ಬಂದ ತಪ್ಪಿಗೆ ಗೋಳಿಬಜೆ ತಿಂದು ಚಾ ಕುಡಿದು ಹೋಗಬೇಕಷ್ಟೇ ಪಾಪ.ಇನ್ನು ಕಟ್ಟದ ಕಾರ್ಮಿಕರು,ಪಂಪು ರಿಪೇರಿಯವರು,ಎಸಿ ಸರ್ವಿಸ್ ಮಾಡೊರೋ ಎಲ್ಲೆಲ್ಲೋ ಲೈನ್ ಗೆ ಹೋಗಿ ಪರದಾಡ ಒಂದೆಡೆಯಾದರೆ, ಕಜಿಪು ಕಡೆಯಲು ಮಿಕ್ಸಿಯ ಮುಂದೆ ನಿಂತ ಗೃಹಿಣಿ ಗಳದ್ದು ಇನ್ನೊಂದು ಪಾಡು.

ಇನ್ನಾದರೂ ಇಲ್ಲಿನ ಮೆಸ್ಕಾಂ ಅಧಿಕಾರಿಗಳು ಲೈನ್ ಆಫ್ ಮಾಡುವ ವಿಚಾರವನ್ನು ಒಂದೆರಡು ದಿನಗಳ ಮೊದಲೇ ತಿಳಿಸಿದರೆ ಹಾಗೆಯೇ ಹಿರಿಯ ಅಧಿಕಾರಿಗಳು ಇಲ್ಲಿನ ಅಧಿಕಾರಿಗಳಿಗೆ ಬೆಚ್ಚ ಮುಟ್ಟಿಸಿದರೆ ಒಳ್ಳೆಯದು ಅನ್ನುತ್ತಾರೆ ಸಾರ್ವಜನಿಕರು.

0 ಕಾಮೆಂಟ್‌ಗಳು