ಏರಿಕೆ ಕಂಡ ಕೊಕ್ಕೋ ರೇಟ್; ಕೆಜಿಗೆ ಎಷ್ಟು ಗೊತ್ತಾ...!?

ಪುತ್ತೂರು: ಕೆಲವು ಸಮಯಗಳ ಹಿಂದೆ ದಾಖಲೆಯ ಧಾರಣೆ ಬರೆದು ಬಳಿಕ ತೀವ್ರ ಕುಸಿತ ಕಂಡಿದ್ದ ಹಸಿ ಕೊಕ್ಕೋ ಧಾರಣೆ ಮತ್ತೆ ಏರಿಕೆ ಕಾಣುತ್ತಿದೆ.

ಶುಕ್ರವಾರ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 220 ರೂ. ಹಾಗೂ ಹೊರ ಮಾರುಕಟ್ಟೆ ಯಲ್ಲಿ 230 ರೂ. ಇತ್ತು. ಧಾರಣೆ 250 ರೂ.ಗಡಿ ದಾಟುವ ಸಂಭವವಿದೆ. ಇಪತ್ತು ದಿನಗಳಲ್ಲಿಹಸಿಕೊಕ್ಕೊ, ಒಣ ಕೊಕ್ಕೊ ಧಾರಣೆ ಕೆ.ಜಿ. ಯೊಂದಕ್ಕೆ 50 ರೂ. ಏರಿಕೆ ಕಂಡಿದೆ. ಡಿ.7 ರಂದು ಹಸಿಕೊಕ್ಕೊಗೆ 175 ರೂ. ಹಾಗೂ ಒಣಕೊಕ್ಕೊ 650 ರೂ. ಧಾರಣೆ ಇತ್ತು. ಅದೀಗ 230 ರೂ. ಹಾಗೂ 700 ರೂ.ಗೆ ತಲುಪಿದೆ.

ಅಡಿಕೆ ಧಾರಣೆ ಸ್ಥಿರ
ಚಾಲಿ ಮಾರುಕಟ್ಟೆಯಲ್ಲಿ ಹೊಸ ಅಡಿಕೆ, ಸಿಂಗಲ್‌ ಚೋಲ್‌, ಡಬ್ಬಲ್‌ ಚೋಲ್‌ ಧಾರಣೆ ಸ್ಥಿರವಾಗಿದೆ. ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 5 ರೂ. ಏರಿದೆ. ಡಿ.27ರಂದು ಹೊಸ ಅಡಿಕೆ ಕೆ.ಜಿ.ಗೆ 350 ರೂ., ಸಿಂಗಲ್‌ ಚೋಲ್‌ 450 ರೂ., ಡಬ್ಬಲ್‌ ಚೋಲ್‌ 485 ರೂ. ಇತ್ತು. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 358 ರೂ., ಸಿಂಗಲ್‌ ಚೋಲ್‌ 455 ರೂ., ಡಬ್ಬಲ್‌ ಚೋಲ್‌ 485 ರೂ. ಇತ್ತು.

ಕಾಳುಮೆಣಸು, ರಬ್ಬರ್‌ ಕುಸಿತ
ಡಿ.27 ರಂದು ರಬ್ಬರ್‌ ಗ್ರೇಡ್‌ಗೆ 184 ರೂ., ಸಾðಪ್‌ಗೆ 122 ರೂ. ದಾಖಲಾಗಿತ್ತು. ಕೆಲವು ದಿನಗಳ ಹಿಂದೆ ರಬ್ಬರ್‌ ಗ್ರೇಡ್‌ 200 ರೂ.ಸನಿಹ ತಲುಪಿತ್ತು. 650 ರೂ. ನಿರೀಕ್ಷೆಯಲ್ಲಿದ್ದ ಕಾಳು ಮೆಣಸು ಧಾರಣೆ 605 ರೂ.ನಲ್ಲಿದೆ. ತೆಂಗಿನಕಾಯಿ ಧಾರಣೆ ಕೆ.ಜಿ.ಗೆ 52 ರೂ. ತನಕ ಇದೆ.

0 ಕಾಮೆಂಟ್‌ಗಳು