ಸಂಸದ ಚೌಟರ ಬ್ಯಾನರ್ ಹಾಕಲು ಬೇಕಿದೆ ಆಧಾರ ಕಂಬ..!?

ಕುಕ್ಕೆ ಸುಬ್ರಹ್ಮಣ್ಯ : ಈ ಮೆಸ್ಕಾಂನ ಅಧಿಕಾರಿಗಳಿಗೆ ಧಮ್ ಇಲ್ವಾ ಅಥವಾ ಜಾಹಿರಾತು ಹಾಕುವವರ ಮೇಲೆ ಕರುಣೆಯ ಗೊತ್ತಿಲ್ಲ.ಅಲ್ಲ ಪಾಪದವರು ಐನೂರು ರುಪಾಯಿ ಕರೆಂಟ್ ಬಿಲ್ ಬಾಕಿ ಇದ್ದರೂ 24 ಗಂಟೆ ಕೆಲ್ಸ ಮಾಡುವ ಲೈನ್ ಮ್ಯಾನ್ ಗಳನ್ನೂ ಕರೆದು ಸಭೆ ಮೇಲೆ ಸಭೆ ಮಾಡಿ ವಸೂಲಿ ಮಾಡಿಕೊಂಡು ಬನ್ನಿ ಅಂತ ಕಳಿಸುತ್ತಾರೆ.ಆದ್ರೆ ಇಲ್ಲಿ ನೋಡಿ ಕ್ಯಾಪ್ಟನ್ ಅಂತ ಕರೆಸಿಕೊಳ್ಳುವ ನಮ್ಮ ಸಂಸದರ ನೇತೃತ್ವದಲ್ಲಿ ನಡೆವ ಕಂಬಳದ ಬ್ಯಾನರ್ ಹಾಕಲು ಕಂಬಕ್ಕೆ ಗತಿ ಇಲ್ಲದೆ ಕರೆಂಟ್ ಕಂಬದಲ್ಲಿ ನೇತಾಡುತ್ತಿದ್ದು,ಸುಬ್ರಹ್ಮಣ್ಯದ ಮೆಸ್ಕಾಂ ಅಧಿಕಾರಿಗಳು ಮಾತ್ರ ಮೊಬೈಲ್ ನೋಡುತ್ತಾ ಚಯರ್ ಬಿಸಿ ಮಾಡ್ತಾ ಇದ್ದಾರೆ ಅನ್ಸುತ್ತೆ.
ಇನ್ನು ಇದೊಂದೇ ಬ್ಯಾನರ್ ಅಲ್ಲ ಕಡಬ ತಾಲ್ಲೂಕಿನಾದ್ಯಂತ ಅಸ್ತ್ರ ಒಲೆ,ರಬ್ಬರ್ ಹಾಲು ಖರೀದಿ,ತಂತಿ ಬೇಲಿ,ಉದ್ಯೋಗ ಅವಕಾಶ, ಸತಿ ಪತಿ ಕಲಹ ಎರಡು ದಿನದಲ್ಲಿ ಪರಿಹಾರ,ಇಷ್ಟ ಪಟ್ಟವಳ ವಶೀಕರಣ ಅಂತೆಲ್ಲ ಇನ್ನು ತರಹೇವಾರಿ ಬ್ಯಾನರ್ ಗಳು ಕಂಬದಲ್ಲಿ ನೇತಾಡುತ್ತಿದೆ.ಆದ್ರೆ ಈ ಬಗ್ಗೆ ಕೇಳಬೇಕಾದವರದ್ದು ಮಾತ್ರ ಫುಲ್ ಸೈಲೆಂಟ್ ಇನ್ನು ಸ್ಥಳೀಯ ಆಡಳಿತ ನಡೆಸುವ ಗ್ರಾಮ ಪಂಚಾಯತ್ ನಲ್ಲಿರುವರು ಇದ್ದಾರೆ ಅಲ್ವಾ ಅವರಿಗೆ ಭೂಕಂಪ ಆದ್ರೂ ಅವರಿಗೆ ಗೊತ್ತಾಗಲ್ಲ ಬಿಡಿ ಅವರು ಯಾವ ಯಾವ ಕ್ರಿಯೆ ಯೋಜನೆ ಮಾಡಿದರೆ ಎಷ್ಟು ಲಾಭ ಬರುತ್ತೆ,ಯಾವುದಕ್ಕೆ ಟ್ಯಾಕ್ಸ್ ಜಾಸ್ತಿ ಮಾಡಿದ್ರೆ ಗಂಟು ಜಾಸ್ತಿ ಮಾಡಬಹುದು ಅನ್ನೋದನ್ನು ಗೂಗಲ್ ಮಾಡಿ ನೋಡ್ತಾ ಇದ್ದರೆ ಅನ್ನಿಸುತ್ತೆ ಬಿಡಿ.

ಇನ್ನು ದೊಡ್ಡ ದೊಡ್ಡ ಜನಗಳು ಪತ್ರಿಕೆಗಳಲ್ಲಿ ,ಬ್ಯಾನರ್'ನಲ್ಲಿ ಎಲ್ಲ ಶುಭಾಶಯ ಕೋರಿಸಿಕೊಳ್ಳೋದು, ಕಾರ್ಯಕ್ರಮಕ್ಕೆ ಸ್ವಾಗತ ಬಯಸಿಕೊಳ್ಳೋದು ಎಲ್ಲ ಅವರೇ ಆದ್ರೂ ಜನರನ್ನು ಮಂಗ ಮಾಡಲು ಬೇರೆ ಯಾರ್ಯಾರದ್ದೋ ಹೆಸರನ್ನು ಅವರೇ ಹೇಳಿಸಿ ಹಾಕಿಕೊಳ್ಳೋದು ಕಾಮನ್ ಬಿಡಿ.ಯಾಕಂದ್ರೆ ಇಲ್ಲಿ ಯಾರೂ ವ್ಯಕ್ತಿ ಪೂಜೆ ಮಾಡುವವರು ಇಲ್ಲ ಬಿಡಿ ಅಂತ ದಡ್ಡರು ಕೂಡ ಯಾರು ಇಲ್ಲಿ ಬುಡಿ.ಉದಾಹರಣೆಗೆ ನನ್ನ ಬರ್ತ್ ಡೇ ಯ ಸತ್ತಡೇ ಅಂತ ಅಂದು ಕೊಳ್ಳುವ ಅದಕ್ಕೆ ನನ್ನ ಅಭಿಮಾನಿ ಬಳಗದಿಂದ ಶುಭಾಶಯ,ಸ್ವಾಗತ ಇತ್ಯಾದಿ ಇತ್ಯಾದಿ ಅಂತ ನಾನೆ ದುಡ್ಡು ಕೊಟ್ಟು ಹಾಕಿಸೋದು ಒಟ್ಟಿನಲ್ಲಿ ಪಬ್ಲಿಸಿಟಿ ಬೇಕು ಅಷ್ಟೆ. ಗಟ್ಟದ ಮೇಲೆ ಇದು ನಡೀತಾ ಇದ್ದ ಇಂತಹ ಸಂಸ್ಕೃತಿ ಪರಿಚಯಿಸಿದ ಕೀರ್ತಿ ನಮಗೆ ಸಲ್ಲಬೇಕು ಹೇಗೆ ಅಂತ ಗೊತ್ತಾಗುವವರಿಗೆ ಗೊತ್ತಾಗುತ್ತೆ ಬಿಡಿ.ಆದ್ರೆ ಹಿಂದಿನ ಹಾಗೆ ಈಗ ಇದೆಲ್ಲ ನಡೆಯಲ್ಲ ಯಾಕಂದ್ರೆ ಬುದ್ಧಿವಂತೆ ಇಲ್ಲಿನವರಿಗೂ ಇದೆ.

ಸದ್ಯ ಸಂಸದ ಚೌಟರ ಬ್ಯಾನರ್ ಗೆ ಕಂಬಕ್ಕೆ ಗತಿ ಇಲ್ಲದ ವಿಚಾರ ಸುಬ್ರಹ್ಮಣ್ಯದ ಕೆಲ ವಾಟ್ಸಪ್ ಯುನಿವರ್ಸಿಟಿ ಗ್ರೂಪು ಗಳಲ್ಲಿ ಭಾರಿ ಚರ್ಚೆ ಆಗುತಿದ್ದು ಬ್ಯಾನರ್ ಹಾಕಿದ ಅಭಿಮಾನಿ ಕಂಬದ ವ್ಯವಸ್ಥೆ ಮಾಡುತ್ತರ ಅಥವಾ ಸಂಭಂದ ಪಟ್ಟವರು ಇಂತಹ ಬ್ಯಾನರ್ ಅನ್ನು ತೆರವು ಗೊಳಿಸುತ್ತಾರ ಅಂತ ಕಾದು ನೋಡಬೇಕಿದೆ.

0 ಕಾಮೆಂಟ್‌ಗಳು