ಕಡಬದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಕೋಳಿ ಅಂಕ..!

ನ್ಯೂಸ್ ಅಪ್ಡೇಟ್: ದೀಪಾವಳಿ ಹಬ್ಬದ ನೆಪದಲ್ಲಿ ಅಲ್ಲಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಪರ್ಬ ಅತ ಅಂತ ನಾವು ಸುಮ್ಮನೆ ಇದ್ವಿ ಇನ್ನು ಕೋಳಿ ಅಂಕ ಅಂಕವಾಗಿ ಇದ್ದಿದ್ದರೆ ನಾವು ಒಪ್ಪುವ ಜೂಜು ಕಟ್ಟಿ ಆಡುತ್ತಿರುವ ಹಿನ್ನಲೆ ಮಾತ್ರವಲ್ಲ ಕಟ್ಟ ನಡೆಸುವರು ಹೇಳುತ್ತಿರುವ ಬಾಯಿಗೆ ಬಂದ ಹಾಗೆ (ಅವರು ದುಡ್ಡು ಮಾಡಲು) ಬೊಗಳುತ್ತಿರುವ ಹಿನ್ನಲೆ ಸುದ್ದಿ ಮಾಡಬೇಕಾದ ಅನಿಾರ್ಯತೆ ಇದೆ. (ಕೊರಿತ ಕಟ್ಟ ಅಲ್ಲ ಜೂಜೆ ಆಡಿ ಎಂಕ್ ದಾಳ ಸಮಸ್ಯೆ ಎಂಚ ಬೋಡು ಅಂಚ ಮಲ್ಪುಲೆ ಆಂಡ ಎಂಕ್ಲೆನಾ ಟೀಮ್ ತಕ್ಲೆನಾ ಪುದರ್ ಯುಸ್ ಮಲ್ಪಿನ ತಪ್ಪು.) ಇದೀಗ ಹಬ್ಬ ಮುಗಿದರೂ ಕಡಬ ಠಾಣಾ ವ್ಯಾಪ್ತಿಯ ಹಲವು ಕಡೆಗಳಲ್ಲಿ ಭರ್ಜರಿ ಕೋಳಿ ಅಂಕ ನಡೆಯುತ್ತಿದೆ.


ಕಡಬದ ಪಾಲೋಳಿ ಎಂಬಲ್ಲಿ ಅಕ್ರಮ ಕೋಳಿ ಅಂಕ ಸೋಮವಾರ ಮತ್ತು ಮಂಗಳವಾರ ನಡೆಸಲು ಸಿದ್ದತೆಯಾಗಿದ್ದು ಇಂದು ಭಾರೀ ಪ್ರಮಾಣದಲ್ಲಿ ಜನ ಸೇರಿದ್ದು ಲಕ್ಷಾಂತರ ರೂ ಹಣ ಪಣಕ್ಕಿಟ್ಟು ಕೋಳಿ ಅಂಕ ನಡೇಯುತ್ತಿರುವುದು ಬೆಳಕಿಗೆ ಬಂದಿದೆ. ಕಡಬ ಠಾಣೆಯಿಂದ ಬರೇ ಮೂರು ಕಿ.ಮಿ ದೂರದಲ್ಲಿ ಈ ಕೋಳಿ ಅಂಕ ನಡೆಯುತ್ತಿರುವುದು ಎಸ್.ಪಿ ಆದಿಯಾಗಿ ಇಲ್ಲಿರುವ ಪೊಲೀಸರು ಹಾಗು ಕೆಲ ಪೇಪರ್ ನವರಿಗೂ ಗೊತ್ತಿದೆ ಅಂತೆ ದಿನಕ್ಕೆ ಇಂತಿಷ್ಟು ಅಂತ ಪೊಲೀಸರಿಗೆ ಕೊಡ್ತಾ ಇದ್ದೇವೆ ಎಂದು ಗೂಡಂಗಡಿಗಳಲ್ಲಿ ಬೊಗಳುತ್ತಿದ್ದಾರಂತೆ ಕಟ್ಟಾ (ಅಂಕ) ನಡೆಸುವರು,ಹಾಗು ಹೋದವರು..?

ಇನ್ನು ಕೋಳಿ ಅಂಕ ನಡೆಯುತ್ತಿರುವ ಬಗೆಗಿನ ಪೋಟೊ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಡಬ –ಮರ್ದಾಳ ಪರಿಸರದಲ್ಲಿ ಕಾಡು ಪ್ರಾಣಿ ಬೇಟೆ, ಅಕ್ರಮ ಮರ-ಮರಳು, ಕೋಳಿ ಅಂಕಕ್ಕೆ ಖ್ಯಾತಿ ಪಡೆದಿರುವ ಜೆಸಿಬಿ ಗನೇಸ ಅಲಿಯಾಸ್ ಚೊಟ್ಟೆ ರಾಜರೋಷವಾಗಿ ವಾಹನವನ್ನು ರಸ್ತೆ ಮದ್ಯದಲಿಟ್ಟು ಜೂಜೂ ಕೂಟದಲ್ಲಿ ಪಾಲ್ಗೊಂಡಿರುವುದು ಹಾಗು ಕಾನೂನು ಪಾಲನೆ ಮಾಡಬೇಕಾದ ಪೊಲೀಸರು ದಿನಕ್ಕೆ ಇಷ್ಟು ಅಂತ ಹೇಳಿ ಕಟ್ಟ ನಡೆಸಲು ಅನುಮತಿ ನೀಡಿರುವ ಬಗ್ಗೆ ಕಟ್ಟದ ಕಲದಲ್ಲಿ ಜನ ಮಾತನಾಡುತ್ತಿರುವುದು, ಪೊಲೀಸರ ಧನ ದಾಹವನ್ನು ಎತ್ತಿ ತೋರಿಸುತ್ತಿದೆ.ಇನ್ನಾದರೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋಳಿ ಅಂಕಕ್ಕೆ ಬ್ರೇಕ್ ಹಾಕ್ತಾರ ಅಥವಾ ರಾಜಕೀಯ ಪಕ್ಷದ ಚೇಳಗಳ ಒತ್ತಡಕ್ಕೆ ಮಣಿದು ಅವರೇ ಹಿಂದೆಯಿಂದ ಮಾಡಿ ಅಂಥ ಸಪೋರ್ಟ್ ಮಾಡ್ತಾರ ಅಂತ ಕಾದು ನೋಡಬೇಕಿದೆ.

1 ಕಾಮೆಂಟ್‌ಗಳು

  1. ಕಡಬದಲ್ಲಿ ಮಾತ್ರ ಅಲ್ಲ ಎಲ್ಲಾ ಕಡೆ ನಡೆಯುತ್ತಿದೆ ಬಂಟ್ವಾಳ ತಾಲೂಕಿನಲ್ಲಿ ದಿನಂ ಪ್ರತಿ ಒಂದಿಲ್ಲೊಂದು ಕಡೆ ನಡೆಯುತ್ತಾನೆ ಇದೆ

    ಪ್ರತ್ಯುತ್ತರಅಳಿಸಿ