ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದ ಆರೋಪದ ದೂರಿನ ಮೇರೆಗೆ ಹೋಟೆಲ್ ಗೆ ದಾಳಿಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸುರೇಶ್ ಎಂಬವರಿಗೆ ಸೇರಿದ ಹೋಟೆಲನ್ನು ಕೆಲ ಹೊತ್ತು ಶಟರ್ ಎಳೆದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪಕ್ಕದ ಪ್ರಶಾಂತ್ ವೈನ್ಸ್ ನಿಂದ ಮದ್ಯ ಖರೀದಿಸಿ ಹೋಟೆಲ್ ನಲ್ಲಿ ಕೆಲವರು ಸಾರ್ವಜನಿಕವಾಗಿ ಕುಡಿಯುತ್ತಿದ್ದರು ಎಂದು ತಿಳಿದು ಬಂದಿದೆ.
ಕಡಬ ಎಸ್.ಐ ಅಭಿನಂದನ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.ಪೊಲೀಸರು ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದು,ಹೋಟೆಲ್ ಮಾಲಕನಿಗೆ ಈ ಹಿಂದೆಯೂ ಪೊಲೀಸರು ಎಚ್ವರಿಕೆ ನೀಡಿದ್ದರಂತೆ.ಇನ್ನು ಪೊಲೀಸ್ ದಾಳಿ ನಡೆಸಿರುವ ಬಗ್ಗೆ ಕಡಬದಾದ್ಯಂತ ಗುಸು ಗುಸು ಸುದ್ದಿ ಹಬ್ಬಿದ ಹಿನ್ನಲೆ ಕೆಲ ಹೊತ್ತು ಕೆಲ ಮಧ್ಯ ಪ್ರಿಯರು ಮದ್ಯ ಖರೀದಿಸದೆ ಇದ್ದರೆ ಕುಡಿದು ಕೂತಿದ್ದ ಕೆಲವರ ನಶೆ ಇಳಿದಿದೆಯಂತೆ.
0 ಕಾಮೆಂಟ್‌ಗಳು