ಉಳ್ಳಾಲ ತಾಲೂಕಿನ ಬಾಳೆಪುಣಿ ಬಳಿಯ ಅಡಿಕೆ ಅಂಗಡಿಯೊಂದರ ಬಳಿ ಮೂರರ ಹರೆಯದ ಬಾಲಕಿಯೊಬ್ಬಳು ಆಟವಾಡುತ್ತಿದ್ದಳು. ಈ ವೇಳೆ ಕಾಮುಕ ಕಿರಾತಕ ಲೈಂಗಿಕ ಕಿರುಕುಳ ನೀಡಿದ ಪರಿಣಾಮ ಮಗು ಅಸ್ವಸ್ಥಗೊಂಡಿದೆ.
ಇನ್ನು ಅಸ್ವಸ್ಥಗೊಂಡ ಮಗುವನ್ನು ಗಮನಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ವಿಷಯ ಬಹಿರಂಗವಾಗಿದೆ.ಈ ಕುರಿತು ಮಗುವಿನ ತಾಯಿ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದು ಸದ್ಯ ಆರೋಪಿಯ ವಿರುದ್ದ ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
0 ಕಾಮೆಂಟ್‌ಗಳು