ಕರಾವಳಿ ಭಾಗದಲ್ಲಿ ಮದುವೆ ಸಮಾರಂಭದಲ್ಲಿ ಹಾಡುವ ಜಾನಪದ ಹಾಡುಗಳು.

ಕುಕ್ಕೆ ಸುಬ್ರಹಮಣ್ಯ:ಮದುವೆ ಸಮಾರಂಭಗಳಲ್ಲಿ ಶೋಭಾನೆ ಹಾಡುಗಳು,ಮದುಮಗನಿಗೆ ಅರಿಶಿನ ಸ್ನಾನ ಮಾಡಿಸುವಾಗ,ಮದುಮಗಳನ್ನು- ಮದುಮಗನಿಗೆ ಒಪ್ಪಿಸಿ ಕೊಡುವಾಗ ಹಾಡು ಹಾಡುಗಳು ಕುಕ್ಕೆ ಸುಬ್ರಹಮಣ್ಯ ,ದೋಣಿ ಮನೆ ನಿವಾಸಿ ಸತ್ಯನಾರಾಯಣ ಅವರ ಪತ್ನಿ ಲೀಲಾವತಿ ಅವರು ಮದುವೆ ಸಮಾರಂಭದಲ್ಲಿ ಹಾಡುವ ಕೆಲವೊಂದು ಜಾನಪದ ಹಾಡುಗಳನ್ನು ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ.

ಕರಾವಳಿಯ, ತುಳುನಾಡಿನಲ್ಲಿ ಜಾನಪದ ಗೀತೆ ಮದುವೆ ಸಮಾರಂಭಗಳಲ್ಲಿ ಹೆಚ್ಚಾಗಿ ಉಪಯೋಗ ಮಾಡುವ ಈ ಅಪೂರ್ವ ಜಾನಪದ ಗೀತೆಗಳು, ಈಗಿನ ಮದುವೆ ಸಮಾರಂಭಗಳಲ್ಲಿ ಕೇಳುವುದು ಅಪರೂಪವಾಗಿದೆ.

ಹಳ್ಳಿ ಭಾಗದಲ್ಲಿ ಇನ್ನೂ ಇಂತಹ ಜಾನಪದ ಗೀತೆಗಳು ಉಳಿದುಕೊಂಡಿದೆ, ಒಂದೆರಡು ಶೋಭಾನೆ ಹಾಡುಗಳನ್ನು ಲೀಲಾವತಿ ಯವರು ಹಾಡಿದ್ದಾರೆ. ಇಂತಹ ಹಾಡುಗಳನ್ನು ಮುಂದಿನ ಜನಾಂಗಕ್ಕೆ ಉಳಿಸಿ ಬೆಳೆಸಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನಮ್ಮ ಸಂಸ್ಕೃತಿ, ಸಂಪ್ರದಾಯಗಳು, ಆಚಾರ ವಿಚಾರಗಳು ಮುಂದಿನ ಜನಾಂಗಕ್ಕೆ ಉಳಿಯಲಿ ಎಂಬುದು ನಮ್ಮ ಆಶಯ.

0 ಕಾಮೆಂಟ್‌ಗಳು