ಗ್ಯಾರೇಜ್ ಮಾಲೀಕ ಸಂಘದಿಂದ ಕಡಬದಲ್ಲಿ ಸ್ವಚ್ಛತಾ ಕಾರ್ಯಕ್ರಮ-ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಲೀಲಾವತಿ ಅವರಿಂದ ಕಾರ್ಯಕ್ರಮಕ್ಕೆ ಚಾಲನೆ.

ಕಡಬ; ಕಡಬ ಪಟ್ಟಣ ಪಂಚಾಯಿತಿ, ದ.ಕ. ಉಡುಪಿ ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘದ ಕಡಬ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಮತ್ತು ಕಡಬ ಪಟ್ಟಣ ಸ್ವಚ್ಛತಾ ಕಾಠ್ಯಕ್ರಮ ಬುಧವಾರ ನಡೆಯಿತು.Img 20241004 Wa0028

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಅವರು ಕಡಬ ಶ್ರೀ ಗಣೇಶ್ ಬಿಲ್ಡಿಂಗ್ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಡಬ ಉಪ ತಹಸೀಲ್ದಾರ್ ಗೋಪಾಲ್ ಕಲ್ಲುಗುಡೆ ಮಾತನಾಡಿ, ಕೇಂದ್ರ ಸರಕಾರವು ಸ್ವಚ್ಛತಾ ಆಂದೋಲನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Img 20241004 Wa0027

ಇಡೀ ದೇಶವನ್ನು ಒಗ್ಗೂಡಿಸಿ ದೇಶದಲ್ಲಿ ಕ್ರಾಂತಿಕಾರಿ ಸುಸ್ಥಿರ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡಿದೆ.ಪೌರ ಕಾರ್ಮಿಕರು ನಮ್ಮ ಪುರವನ್ನು ಸಂರಕ್ಷಿಸಿ ಸ್ವಚ್ಛತೆಯನ್ನು ಕಾಪಾಡುವ ವೀರರು, ಅವರೊಟ್ಟಿಗೆ ಕಳೆದ ನಾಲ್ಕು ವರ್ಷಗಳಿಂದ ಕಡಬ ಗ್ಯಾರೇಜ್ ಮಾಲೀಕರ ಸಂಘದವರು ಕೈಜೋಡಿಸಿಕೊಂಡು ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ. ಅವರನ್ನು ಗೌರವಿಸುವ ಕಾರ್ಯವಾಗಬೇಕು. ಸ್ವಚ್ಛ ಮಾಡಿದ ಪ್ರದೇಶದಲ್ಲಿ ಸಾರ್ವಜನಿಕರು ಮತ್ತೆ ತ್ಯಾಜ್ಯ ಕಸ ಹಾಕದಂತೆ ಅವರಿಗೆ ಜಾಗೃತಿ ಮೂಡಿಸುವ ಕಾರವಾಗಬೇಕು ಎಂದರು. ದ.ಕ. ಉಡುಪಿ ಜಿಲ್ಲಾ, ಗ್ಯಾರೇಜ್ ಮಾಲೀಕರ ಸಂಘದ ಕಡಬ ತಾಲೂಕು ಘಟಕದ ಗೌರವಾಧ್ಯಕ್ಷ ಸುಂದರ ಗೌಡ ಮಂಡೆಕರಮಾತನಾಡಿ, “ನಾವು ಸಂಘಟಿತರಾಗಿ ಉತ್ತಮ

ಕೆಲಸಗಳನ್ನು ಮಾಡಿ ಸಮಾಜ ನಮ್ಮನ್ನು ಗುರತಿಸಿ ಗೌರವಿಸುವಂತಾದರೆ ಅದು ಇತರರಿಗೆ ಮಾದರಿಯಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲಾ ನಮ್ಮ ಸಂಘವನ್ನು ಬಲಪಡಿಸಬೇಕಾಗಿದೆ” ಎಂದರು.

ಈ ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶಿವಕುಮಾರ್, ಸಿಬ್ಬಂದಿ ವಾರಿಜಾ, ಶಶಿಕಲಾ, ಗ್ಯಾರೇಜ್ ಸಂಸ್ಥೆಯ ಸಂಘದ ಕಡಬ ತಾಲೂಕು ಅಧ್ಯಕ್ಷ ಅಶೋಕ್ ಕುಮಾರ್, ಉಪಾಧ್ಯಕ್ಷ ನಿತ್ಯಾನಂದ ಗೌಡ, ಪ್ರಧಾನ ಕಾವ್ಯದರ್ಶಿ ರಾಜ್ ಪ್ರಕಾಶ್, ಜತೆ ಕಾವ್ಯದರ್ಶಿ ಪ್ರವೀಣ್ ಆಚಾರ್ಯ, ಅಧಿಕಾರಿ ಕೋಶ ದೇವಣ್ಣಗೌಡ ಸಂಪಡ್ಕ, ಜೂನಿಯರ್ ಟೆಲಿಕಾಂ ಅಧಿಕಾರಿ ಹೇಮಂತ್ ಮಂಡೆಕರ, ಉದ್ಯಮಿ ಹಿತೇಶ್ ಮಂಡೆಕರ ಮತ್ತಿತರರು ಉಪಸ್ಥಿತರಿದ್ದರು. Img 20241004 Wa0029

ಚಾರ್ವಿ ಮಂಡೆಕರ ಪ್ರಾರ್ಥಿಸಿದರು. ಪಟ್ಟಣ ಪಂಚಾಯಿತಿ ಸಿಬ್ಬಂದಿ ಹರೀಶ್ ಬೆದ್ರಾಜೆ ಸ್ವಾಗತಿಸಿ, ವಂದಿಸಿದರು. ಪಟ್ಟಣ ಪಂಚಾಯಿತಿ ಸ್ವಚ್ಛತಾ ಸಿಬ್ಬಂದಿಗೆ ಕಡಬ ದೇವಸ್ಯ ಹೈಡೋಮೇಟಕ್ಸ್ ఎంజినియరింగా ಸಂಸ್ಥೆಯ ಮಾಲೀಕ ಚೇತನ್ ದೇವಸ್ಯ ಕೊಡ ಮಾಡಿದ ಕಸಹೆಕ್ಕುವ ಸಾಧನವನ್ನು ವಿತರಿಸಲಾಯಿತು. ಬಳಿಕ ಕಡಬ ತಾಲೂಕು ಕಚೇರಿ ಬಳಿಯಿಂದ ಪ್ರಾರಂಭಿಸಿ ಪೇಟೆಯಾದ್ಯಂತ ಸ್ವಚ್ಛತೆ ಮಾಡಲಾಯಿತು.

0 ಕಾಮೆಂಟ್‌ಗಳು