ಬೆಥನಿ ವಿದ್ಯಾಸಂಸ್ಥೆಯಲ್ಲಿ ಗಾಂಧಿ ಜಯಂತಿ ಆಚರಣೆ.

ನೆಲ್ಯಾಡಿ : ನ,2,ಬೆಥನಿ ವಿದ್ಯಾಸಂಸ್ಥೆಯಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಶಾಲಾ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜಯಾನಂದ ಬಂಟ್ರಿಯಾಲ್ ವಹಿಸಿದ್ದರು ಇವರು ತಮ್ಮ ಭಾಷಣದಲ್ಲಿ ಗಾಂಧೀಜಿಯ ಜೀವನ ಮೌಲ್ಯಗಳು ಹಾಗೂ ಜೀವನ ಆದರ್ಶಗಳ ಬಗ್ಗೆ ಹೇಳಿದರು.

Inshot 20241002 223711731

ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಜಾರ್ಜ್ ಕೆ ಥಾಮಸ್ ಅವರು ಗಾಂಧೀಜಿಯ ಜೀವನ ಮೌಲ್ಯಗಳು ವಿದ್ಯಾರ್ಥಿಗಳ ಜೀವನದಲ್ಲಿ ಕಾರ್ಯರೂಪಕ್ಕೆ ಬರಬೇಕು ಎಂದು ಹೇಳಿದರು. ಈ ಕಾರ್ಯಕ್ರಮದ ಭಾಗವಾಗಿ ಮಹಾತ್ಮ ಗಾಂಧೀಜಿಯ ಭಾವಚಿತ್ರಕ್ಕೆ ಪುಷ್ಪ ಹಾರವನ್ನು ಹಾಕಲಾಯಿತು ಗಾಂಧೀಜಿಯ ಭಾವಚಿತ್ರಕ್ಕೆ ಉಪಸ್ಥಿತರಿದ್ದ ಸಂಸ್ಥೆಯ ಎಲ್ಲಾ ವಿಭಾಗಗಳ ಮುಖ್ಯಸ್ಥರು ಫಾದರ್ ಜೇಮ್ಸ್ ಥಾಮಸ್ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜಯಾನಂದ್ ಬಂಟ್ರಿಯಾಲ್ ನಮನವನ್ನು ಸಲ್ಲಿಸಿದರು ಈ ಕಾರ್ಯಕ್ರಮಕ್ಕೆ ಕುಮಾರಿ ಆಲ್ ಭ ಸ್ವಾಗತವನ್ನು ಕೋರಿದರು.

Img 20241002 Wa0037

ಕುಮಾರಿ ಆಲಿಷ ಕಾರ್ಯಕ್ರಮವನ್ನು ನಿರೂಪಿಸಿ ಕುಮಾರಿ ಏಂಜಲ್ ಕೆ ಪಿ ವಂದಿಸಿದರು ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಂತರ ಶಾಲಾ ಆವರಣವನ್ನು ಸ್ವಚ್ಛಗೊಳಿಸಿದರು.

0 ಕಾಮೆಂಟ್‌ಗಳು