ನೆಲ್ಯಾಡಿ : ನ,2,ಶ್ರೀರಾಮ ವಿದ್ಯಾಲಯ ಸೂರ್ಯ ನಗರ ನೆಲ್ಯಾಡಿ ಇದರ ಸದ್ವಿಚಾರ ಕಾರ್ಯಕ್ರಮ ಅಂಗವಾಗಿ “ಜ್ಞಾನಮಯ ಪ್ರದೀಪ” ಮತ್ತು ಘೋಷ್ ವಾದನಗಳ ಸಮರ್ಪಣೆಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಗವದ್ಗೀತಾ ಪಾರಾಯಣ ನಡೆಯಿತು ಹಾಗೂ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ *ಶ್ರೀಯುತ ಸುಬ್ರಾಯ ನಂದೋಡಿ* ಇವರು ಭಗವದ್ಗೀತಾ ಸಂದೇಶವನ್ನು ನೀಡಿದರು. ನಂತರ ನಿವೃತ್ತ ಕಮಾಂಡೆಂಟ್ BSF ಯೋಧ *ಶ್ರೀಯುತ ಚಂದಪ್ಪ ಮೂಲ್ಯ* ಇವರು ಘೋಷ್ ವಾದನಗಳನ್ನು ಕೊಡುಗೆಯಾಗಿ ನೀಡಿ ಅದರ ಸಮರ್ಪಣೆಯನ್ನು ಮಾಡಿ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಪುಸ್ತಕವನ್ನು ವಿತರಿಸಿ ಮಕ್ಕಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲಚಂದ್ರ ಕಾಂಚನ ಮತ್ತು ಕಾರ್ಯಕ್ರಮದ ವೇದಿಕೆಯಲ್ಲಿ ಇನ್ನೋರ್ವ ಅತಿಥಿಯಾಗಿ ಜಯಂತ ಪೋರೋಳಿಯವರು ಉಪಸ್ಥಿತರಿದ್ದರು.
ಆಡಳಿತ ಸಮಿತಿ ಸದಸ್ಯರಾದ ಶ್ರೀಯುತ ಸುಬ್ರಾಯ ಪುಣಚ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕಾರ್ಯಕ್ರಮವನ್ನು ಶ್ರೀಮತಿ ಶುಭ ರಾಣಿ ಮಾತಾಜಿ ನಿರೂಪಿಸಿದರು ಶ್ರೀಮತಿ ಕಾವ್ಯ ಮಾತಾಜಿ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಯುತ ಗಣೇಶ್ ವಾಗ್ಲೆ ಶ್ರೀಮಾನ್ ವಂದಿಸಿದರು.
0 ಕಾಮೆಂಟ್‌ಗಳು