ಕುಕ್ಕೆಯಲ್ಲಿ ನಟಿ ರಕ್ಷಿತಾ ಪ್ರೇಮ್ ಅವರಿಂದ ಹುಲಿವೇಷ ವೀಕ್ಷಣೆ.

ಕುಕ್ಕೆ ಸುಬ್ರಹ್ಮಣ್ಯ: 4: ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ದೇಶಕ ಪ್ರೇಮ್ ಹಾಗೂ ಅವರ ಪತ್ನಿ ನಟಿ ರಕ್ಷಿತಾ ಪ್ರೇಮ್ ಅವರು ಗುರುವಾರ ಕುಕ್ಕೆ ಸುಬ್ರಮಣ್ಯ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

Img 20241004 Wa0013

ತದನಂತರ ಕಾರಲ್ಲಿ ಹೊರಡುವ ಸಮಯದಲ್ಲಿ ನವರಾತ್ರಿಯ ವಿಶೇಷ ದಿನದಂದು ಕರಾವಳಿಯಲ್ಲಿ ಪ್ರಸಿದ್ಧ ಪಡೆದಿರುವ ಹುಲಿ ವೇಷವನ್ನು ಕಂಡು ಕಾರಿನಿಂದ ಇಳಿದರು .ತಕ್ಷಣ ಸುಬ್ರಹ್ಮಣ್ಯದ ಖ್ಯಾತ ಫೋಟೋಗ್ರಾಫರ್ ಸಂತೋಷ್ ನುಚಿಲ ಅವರು ರಕ್ಷಿತ್ ಪ್ರೇಮ್ ದಂಪತಿಗಳಿಗೆ ಹುಲಿ ವೇಷ ನರ್ತನವನ್ನು ವೀಕ್ಷಿಸಲು ವ್ಯವಸ್ಥೆ ಮಾಡಿರುವರು.

Img 20241004 Wa0015

ಹುಲಿ ವೇಷದಾರಿಗಳ ನರ್ತನವನ್ನು ಕಂಡು ಪುಳಕಿತರಾದರು ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ರಕ್ಷಿತ್ ಪ್ರೇಮ್ ದಂಪತಿಗಳು ಎಲ್ಲಾ ವೇಷಧಾರಿಗಳಿಗೆ ಶುಭಾಶಯವನ್ನು ಕೋರಿದರು.

Img 20241004 Wa0014

0 ಕಾಮೆಂಟ್‌ಗಳು