ಕುಕ್ಕೆ ಸುಬ್ರಹ್ಮಣ್ಯ:ದೇವರ ಪೂಜೆಯನ್ನುವಿವಿಧ ರೀತಿಯಲ್ಲಿ ಮಾಡಬಹುದಾಗಿದೆ. ಅದರಲ್ಲಿ ವಿಶೇಷ ವಾಗಿ ಚಕ್ರಾಬ್ಜ ಮಂಡಲವನ್ನು ಹಾಕಿ ಅದರಲ್ಲಿ ಭಗವಂತನ ಪೂಜೆ ವಿಶೇಷ ವಾದುದು. ಇದಕ್ಕೆ ಸಂಬಂಧಿಸಿದಂತೆ ಸರಿಯಾದ ಪುಸ್ತಕಗಳು ಉಪಲಬ್ಧವಿಲ್ಲ.

ಹಾಗಾಗಿ ಹಿರಿಯರ ಅಪೇಕ್ಷೆ ಗೆ ಅನುಗುಣವಾಗಿ ಈ ಪುಸ್ತಕವನ್ನು ರಚಿಸಲಾಗಿದೆ. ದಿ. ಶಿಬರೂರು ಹಯಗ್ರೀವ ತಂತ್ರಿಗಳಲ್ಲಿ ವೈದಿಕ ಶಿಕ್ಷಣ ವನ್ನು ಪೂರೈಸಿದ ಶ್ರೀ ಕೆ ಕೃಷ್ಣ ಪ್ರಸಾದ ನೂರಿತ್ತಾಯರು ಇಂದು ವಿದ್ವಾಂಸರಾಗಿ ಈ ಪುಸ್ತಕ ವನ್ನು ರಚಿಸಿರುತ್ತಾರೆ. ದಿನಾಂಕ 10.10.24 ರಂದು ಗುರುವಾರ ಸಂಜೆ 4.00 ಗಂಟೆಗೆ ಈ ಪುಸ್ತಕ ವನ್ನು ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀ ಪಾದರು ತಮ್ಮ ಮಠದಲ್ಲಿ ಪುಸ್ತಕ ವನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ.
0 ಕಾಮೆಂಟ್‌ಗಳು