ನನ್ನನ್ನು ಸಾಯಲು ಬಿಡಿ ಯಾಕೆ ರಕ್ಷಣೆ ಮಾಡುತ್ತೀರಿ ಎಂದ ವೃದ್ಧ!
ಕುಕ್ಕೆ ಸುಬ್ರಮಣ್ಯ; ಅ,18, ಎಂದಿನಂತೆ ಕುಮಾರಧಾರ ನದಿ ಇಂದು ಶಾಂತವಾಗಿ ಹರಿಯುತ್ತಿತ್ತು ಯಾವುದೇ ಪ್ರವಾಹದ ಭೀತಿ ಇರಲಿಲ್ಲ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ಭಕ್ತರು ಎಂದಿನಂತೆ ಕುಮಾರಧಾರ ನದಿಯಲ್ಲಿ ತೀರ್ಥ ಸ್ನಾನ ಮಾಡುತ್ತಿದ್ದರು, ಎಲ್ಲವೂ ಶಾಂತವಾಗಿತ್ತು.
ಆದರೆ ಬೆಳಿಗ್ಗೆ ಸುಮಾರು 8:30ರ ಹೊತ್ತಿಗೆ, ಸುಮಾರು 90 ವರ್ಷ ವಯಸ್ಸಿನ ಬೆಂಗಳೂರು ನಿವಾಸಿ ಕೃಷ್ಣಮೂರ್ತಿ,ನೀರಿನಲ್ಲಿ ಕೊಚ್ಚಿಕೊಂಡು ಹೋಗುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ.
ತಕ್ಷಣ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭದ್ರತಾ ಸಿಬ್ಬಂದಿ ಲೋಕನಾಥ್,ಹಾಗೂ ಸ್ಥಳೀಯರಾದ ಗೋಪಾಲಣ್ಣ, ಕೊಕ್ಕಡ ಬಾಬು,ವೃದ್ಧ ಕೃಷ್ಣಮೂರ್ತಿ ಅವರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ, ಒಂದು ಜೀವ ಉಳಿಸಿದ್ದಾರೆ.
ವೃದ್ಧರಾದ ಇವರು ಬೆಂಗಳೂರು ನಿವಾಸಿಯಾಗಿದ್ದು ಭದ್ರತಾ ಸಿಬ್ಬಂದಿ ಜೊತೆ ಅವರು ತಿಳಿಸಿದ ಪ್ರಕಾರ ಅವರಿಗೆ ಮಕ್ಕಳಿದ್ದಾರೆ ಮನೆಯಲ್ಲಿ ಯಾವುದೋ ವಿಚಾರಕ್ಕೆ ಮನಸ್ತಾಪಗೊಂಡು, ಸುಮಾರು ಹತ್ತು ದಿನಗಳ ಹಿಂದೆ ಮನೆ ಬಿಟ್ಟಿದ್ದಾರೆ.ನಿನ್ನೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಇವರು ಇಂದು ಬೆಳಿಗ್ಗೆ 8.30 ರ ಸುಮಾರಿಗೆ ಎಲ್ಲ ಭಕ್ತರಂತೆ ಸ್ನಾನಘಟ್ಟದಲ್ಲಿ ಸ್ನಾನ ಮಾಡುವರೀತಿ ತೆರಳಿದ್ದಾರೆ.

ನೇರವಾಗಿ ನೀರಿಗೆ ಧುಮುಕಿದ ಅವರು ಸುಮಾರು ದೂರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸ್ವಲ್ಪ ಸ್ವಲ್ಪ ಈಜುಗೊತ್ತಿದ್ದು ಕೃಷ್ಣಮೂರ್ತಿ ಅವರು ಬದುಕಿದ್ದಾನೆ ಎಂದು ರಕ್ಷಣೆ ಮಾಡಿದ ಲೋಕನಾಥ್ ಅವರು ಹೇಳುತ್ತಾರೆ.
ರಕ್ಷಣೆ ಮಾಡಲು ತೆರಳಿದ ಸಂದರ್ಭದಲ್ಲಿ ಕೈಹಿಡಿದು ಎತ್ತುವಾಗ ನನ್ನು ಯಾಕೆ ಬದುಕಿಸುತ್ತೀರಿ ನಾನು ಸಾಯಬೇಕು ಎಂದು ಭದ್ರತಾ ಸಿಬ್ಬಂದಿಗಳ ಜೊತೆ ಹೇಳಿದ್ದಾರೆ.
ಕೊನೆಯದಾಗಿ ವೃದ್ಧ ನನ್ನ ರಕ್ಷಣೆ ಮಾಡಿ ಸುಬ್ರಮಣ್ಯ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ, ಸಂಜೆ ಹೊತ್ತಿಗೆ ಅವರ ಮಕ್ಕಳು ಆಗಮಿಸಿ ಕೃಷ್ಣಮೂರ್ತಿ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತಕ್ಷಣಕ್ಕೆ ವೃದ್ಧ ನನ್ನ ರಕ್ಷಣೆ ಮಾಡಿದ ಭದ್ರತಾ ಸಿಬ್ಬಂದಿ ಅವರ ಬಗ್ಗೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.
0 ಕಾಮೆಂಟ್‌ಗಳು