ಕಡಬ/ಸವಣೂರು: ತುಂಬಿ ತುಳುಕುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಹಿಂಬದಿ ಬಾಗಿಲಲ್ಲಿ ನೇತಾಡುತ್ತಾ ಪ್ರಯಾಣಿಸುತ್ತಿದ್ದ ಪ್ರಯಾಣಿಕನೋರ್ವ ರಸ್ತೆ ತಿರುವಿನಲ್ಲಿ ರಸ್ತೆಗೆ ಎಸೆಯಲ್ಪಟ್ಟು ಪವಾಡ ಸದೃಶವಾಗಿಪಾರಾದ ಘಟನೆ.

ಕಡಬ/ಸವಣೂರು: ತುಂಬಿ ತುಳುಕುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಹಿಂಬದಿ ಬಾಗಿಲಲ್ಲಿ ನೇತಾಡುತ್ತಾ ಪ್ರಯಾಣಿಸುತ್ತಿದ್ದ ಪ್ರಯಾಣಿಕನೋರ್ವ ರಸ್ತೆ ತಿರುವಿನಲ್ಲಿ ರಸ್ತೆಗೆ ಎಸೆಯಲ್ಪಟ್ಟು ಪವಾಡ ಸದೃಶವಾಗಿಪಾರಾದ ಘಟನೆ ಅ.15ರ ಸಂಜೆ ಕುದ್ಮಾರು ಬಳಿ ನಡೆದಿದೆ.

ಪುತ್ತೂರಿನಿಂದ ಸವಣೂರು ಮೂಲಕ ಪಂಜ ಮಾರ್ಗವಾಗಿ ಬಾಳುಗೋಡು ಪ್ರದೇಶಕ್ಕೆ ( KA19F.3203 ) ತೆರಳುತ್ತಿದ್ದ ಬಸ್ಸಿನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಭರ್ತಿಯಾಗಿದ್ದರು. ಹಿಂಬದಿ ಬಾಗಿಲಿನಲ್ಲಿ ನಿಂತಿದ್ದ ಪ್ರಯಾಣಿಕ ಕುದ್ಮಾರು ಸಮೀಪದ ತಿರುವೊಂದರಲ್ಲಿ ರಸ್ತೆಗೆ ಎಸೆಯಲ್ಪಟ್ಟಿದ್ದು, ಸಣ್ಣ ಗಾಯದೊಂದಿಗೆ ಪಾರಾಗಿದ್ದಾರೆ.

ಬಸ್ ನ ಹಿಂದಿನಿಂದ ಬರುತ್ತಿದ್ದ ಕಾರಿನಲ್ಲಿ ಕರ್ತವ್ಯ ನಿಮಿತ್ತ ತೆರಳಿದ್ದ ಸುಬ್ರಹ್ಮಣ್ಯ ಠಾಣೆಯ ಮಹಿಳಾ ಕಾಸ್ಟೇಬಲ್ ಪುನಿತಾ ಎಂಬವರು ಕೂಡಲೇ ಗಮನಿಸಿ ಕಾರು ನಿಲ್ಲಿಸಿ ನೆರವಿಗೆ ಧಾವಿಸಿದ್ದಾರೆ. ಅಲ್ಲದೆ ಬಸ್ ನಿರ್ವಾಹಕನನ್ನು ವಿಚಾರಿಸಿ ಸಮರ್ಪಕವಾಗಿ ಬಾಗಿಲು ಮುಚ್ಚುವಂತೆ ಸೂಚಿಸಿದ್ದಾರೆ. ಅಲ್ಲದೆ ಪುಟ್ ಪಾತ್ ನಲ್ಲಿ ನೇತಾಡಿಕೊಂಡು ಹೋಗದಂತೆ ಪ್ರಯಾಣಿಕರಿಗೂ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಕಡಬ ಟೈಮ್ ಗ್ ವೀಡಿಯೋ ಲಭ್ಯವಾಗಿದ್ದು ಬಸ್ ನಿರ್ವಾಹಕ ಅವರು ನಮ್ಮ ಸಿಬ್ಬಂದಿ ಎಂದು ಹೇಳುತ್ತಿರುವುದು ಕಂದು ಬಂದಿದೆ.

ಈ ಮಾರ್ಗದಲ್ಲಿ ಸಾಯಕಾಲದ ವೇಳೆ ಬಸ್ ಓಡಾಟ ವಿರಳವಾಗಿದ್ದು ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದೇ ಸಮಯಕ್ಕೆ ಹೊರಡುವ ಬಸ್ ಅವಲಂಬಿಸಿದ್ದಾರೆ. ಇದೀಗ ಈ ಮಾರ್ಗದಲ್ಲಿ ಹೆಚ್ಚುವರಿ ಬಸ್ ಸೇವೆ ಒದಗಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.

0 ಕಾಮೆಂಟ್‌ಗಳು