ಹೊಸಮಠ ಕಾರುಗಳ ಮಧ್ಯೆ ಅಪಘಾತ.

ಕಡಬ: ಅ;13,ಉಪ್ಪಿನಂಗಡಿ,ಕಡಬ,ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಹೊಸಮಠ ಸೇತುವೆಯ ಸಮೀಪ ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಕಾರುಗಳು ನಜ್ಜುಗುಜ್ಜಾಗಿ ಎರಡೂ ಕಾರಿನಲ್ಲಿದ್ದವರು ಅಪಾಯದಿಂದ ಪಾರಾದ ಘಟನೆ ಭಾನುವಾರ ನಡೆದಿದೆ.

Img 20241013 Wa0012

ಸುಬ್ರಹ್ಮಣ್ಯ ಕುಲ್ಕುಂದ ನಿವಾಸಿ ಚೇತನ್ ಎಂಬವರು ಉಪ್ಪಿನಂಗಡಿ ಕಡೆಯಿಂದ ಚಲಾಯಿಸಿಕೊಂಡು ಬಂದು ಕಾರು ಬಲ್ಯ ಗ್ರಾಮದ ಬೀರುಕ್ಕು ನಿವಾಸಿ ಹರಿಶ್ಚಂದ್ರ ಎಂಬವರು ಚಲಾಯಿಸಿಕೊಂಡು ಹೊಸಮಠ ಪೇಟೆಯಿಂದ ಮನೆಗೆ ಹೋಗುತ್ತಿದ್ದಾಗ ಕಾರಿಗೆ ಡಿಕ್ಕಿ ಹೊಡೆದಿದೆ.

Img 20241013 Wa0016

ಅಪಘಾತದ ತೀವೃತೆಗೆ ಎರಡೂ ಕಾರುಗಳು ನಜ್ಜುಗುಜ್ಜಾಗಿ ಪಕ್ಕದ ಚರಂಡಿಗೆ ಬಿದ್ದಿವೆ. ಚೇತನ್ ಅವರ ಕಾರಿನಲ್ಲಿ ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

0 ಕಾಮೆಂಟ್‌ಗಳು