ಆಂಬುಲೆನ್ಸ್ , ಈಚರ್ ಲಾರಿ ರಸ್ತೆ ಅಪಘಾತ ಓರ್ವನಿಗೆ ಗಾಯ.

ನೆಲ್ಯಾಡಿ: ಅ,12, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪ ಆಂಬುಲೆನ್ಸ್ ಹಾಗೂ ಈಚರ್ ಲಾರಿ ನಡುವೆ ಶನಿವಾರ ಮಧ್ಯಾಹ್ನ ಅಪಘಾತ ಸಂಭವಿಸಿ ಆಂಬುಲೆನ್ಸ್‌ ಚಾಲಕ ಗಾಯಗೊಂಡ ಘಟನೆ ನಡೆದಿದೆ.Img 20241012 Wa0046

ಬೆಂಗಳೂರಿನಿಂದ ಪುತ್ತೂರಿಗೆ ಕಡೆಗೆ ಬರುತ್ತಿದ್ದ ಆಂಬುಲೆನ್ಸ್ ಹಾಗೂ ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಈಚರ್ ಲಾರಿಗೆ ಡಿಕ್ಕಿಯಾಗಿ ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿದ್ದು.

Img 20241012 Wa0044

ಅಪಘಾತದಲ್ಲಿ ಆಂಬುಲೆನ್ಸ್ ಚಾಲಕ ಮುಸ್ತಾಫ ಎಂಬವರು ಗಾಯಗೊಂಡಿದ್ದು ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡು ತೆರಳಿದ್ದಾರೆ ಎಂದು ವರದಿಯಾಗಿದೆ.

Img 20241012 Wa0045

0 ಕಾಮೆಂಟ್‌ಗಳು