ವಿಜೃಂಭಣೆಯಿಂದ ಸಂಪನ್ನಗೊಂಡ-24ನೇ ವರ್ಷದ ಶಾರದೋತ್ಸವ.

ಕುಕ್ಕೆ ಸುಬ್ರಹ್ಮಣ್ಯ; ದೇವರ ಗದ್ದೆ ಅಂಗನವಾಡಿ ಕೇಂದ್ರ ಹಾಗು ಸಾರ್ವಜನಿಕ ಶಾರದೋತ್ಸವ ಸಮಿತಿ ನಡೆಸಿಕೊಂಡು ಬರುವಂತ 24ನೇ ವರ್ಷದ ಶಾರದೋತ್ಸ 11/10/24 ರಂದು ಸಂಪನ್ನಗೊಂಡಿತು.

Img 20241012 Wa0027

ಈ ಸಂದರ್ಭದಲ್ಲಿ ಧಾರ್ಮಿಕ ಸಭೆಯೂ ನಡೆಸಲಾಯಿತು, ಸಭೆಯ ಅಧ್ಯಕ್ಷತೆಯನ್ನು ಕಿರಣ್ ಕೊನಡ್ಕ ವಹಿಸಿದ್ದರು, ಸುಬ್ರಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಅರವಿಂದಯ್ಯಪ್ಪ ಸುತಗುಂಡಿ, ಉಪಸ್ಥಿತರಿದ್ದರು.Img 20241012 Wa0026

ಅಕ್ಷರ ಮೆಲೋಡಿಸ್ ಅವರಿಂದ ಸಂಗೀತ ರಸಮಂಜರಿ, ಸ್ಥಳೀಯ ಪ್ರತಿಭಾನ್ವಿತ ಕಲಾವಿದರಿಂದ ನೃತ್ಯ ಪ್ರದರ್ಶನ ಮತ್ತು ಹಾಸ್ಯಮಯ ನಾಟಕ ನಡೆಯಿತು.

ವಿಶೇಷವಾಗಿ ಅಂಗನವಾಡಿ ಕೇಂದ್ರದಲ್ಲಿ ಶಾರದಾ ದೇವಿಗೆ ಪೂಜೆಯನ್ನು ಸಲ್ಲಿಸಿ, ಭವ್ಯ ಮೆರವಣಿಗೆಯಲ್ಲಿ ಕಾಶಿ ಕಟ್ಟೆ ವರೆಗೆ ಬಂದು ಕುಕ್ಕೆ ಸುಬ್ರಮಣ್ಯ ಶ್ರೀ ದೇವರ ರಥ ಬೀದಿ ಮೂಲಕ ರುದ್ರಪಾದ ಎಂಬಲ್ಲಿ ದರ್ಪಣ ತೀರ್ಥ ನದಿಯಲ್ಲಿ ಶಾರದೆ ದೇವಿಯ ವಿಗ್ರಹವನ್ನು ವಿಸರ್ಜನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿ ಅಧ್ಯಕ್ಷರಾದ ಕಿರಣ್ ಕೋನಡ್ಕ, ಶೋಭಾ ಯಾತ್ರೆ ಸಂದರ್ಭದಲ್ಲಿ ಸಂಚಾಲಕರಾದ ಹರೀಶ್ ಇಂಜಾಡಿ ,ಅರ್ಚಕರಾದ ವೇ/|ಮೂ.ಶಂಕರ್ ಭಟ್, ಈಶ್ವರ ಭಟ್ರು, ರಾಘವೇಂದ್ರ ಭಟ್ರು ಹಾಗೂ ಭಗವದ್ಭಕ್ತರು ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು