ಮಕ್ಕಳಂತೆ ಹೂವಿನ ಸಸಿಗಳನ್ನು ಬೆಳೆಸಿ ಪೋಷಿಸುತ್ತಿರುವ ರಾಜೇಶ್ವರಿ ಆರ್. ಭಟ್.

ಸುಳ್ಯ :ಸೆ,22, ಸುಳ್ಯ ತಾಲೂಕು, ಮುಪ್ಪೆರಿಯ ಗ್ರಾಮದ ದೇವಸ್ಯ ಎಂಬಲ್ಲಿರುವ ಕೃಷಿಕ ರಾಮಚಂದ್ರ ಭಟ್ ಅವರ ಪತ್ನಿ ರಾಜೇಶ್ವರಿ ಆರ್. ಭಟ್ ಅವರು ಸುಮಾರು ಚಿಕ್ಕ ಪ್ರಾಯದಿಂದ ಗಿಡ ನೆಡುವ, ಹವ್ಯಾಸ ಬೆಳೆಸಿಕೊಂಡು ಬಂದಿದ್ದಾರೆ.

Img 20240922 Wa0015

ಇದೀಗ ಮನೆಯಂಗಳ  ತುಂಬಾ ಹೂವಿನ ಸಸಿಗಳು ನೋಡಲು ಕಣ್ಣಿಗೆ ಹಬ್ಬದಂತಿದೆ.

20240921222104

ಅರುನೂರಕ್ಕೂ ಹೆಚ್ಚು ಸೇವಂತಿಗೆ, ಮಲ್ಲಿಗೆ, ದಾಸವಾಳ ಕನಕಾಂಬರ, ಗುಲಾಬಿ, ಮಂದಾರ,ಸಸಿಗಳು.ಸುಮಾರು ಒಂದು ಸಾವಿರ ಬಗೆ ಬಗೆಯ ಹೂವಿನ ಸಸಿಗಳು ಸೇರಿದಂತೆ ಅಲಂಕಾರಿಕ ಗಿಡಗಳನ್ನು ಬೆಳೆಸಿದ್ದಾರೆ.ಔಟ್ಡೋರ್ ಸುಮಾರು 70 ಬಗೆಯ ಅಲಂಕಾರಿಕ ಸಸ್ಯ ಇನ್ಡೋರ್ ಸುಮಾರು 60 ಬಗೆಯ ಸಸ್ಯಗಳು ಹಾಗೂ ನೀರಿನಲ್ಲಿ ಬೆಳೆಯುವ ತಾವರೆ ಪ್ರಬೇಧಕ್ಕೆ ಸೇರಿದ ಸಸ್ಯಗಳು ಇವರಲ್ಲಿದೆ.

ಮಕ್ಕಳಂತೆ ನೋಡಿ ಕೊಳ್ಳುತ್ತಿದ್ದಾರೆ.

ರಾಜೇಶ್ವರಿ ಭಟ್ ಅವರ ಈ ಸಾಧನೆಗೆ ಮಾವ,ಪತಿ ರಾಮಚಂದ್ರ ಭಟ್ ಪ್ರೋತ್ಸಾಹ ಮಾಡುತ್ತಾರೆ.ಹಾಗೂ ಮಕ್ಕಳು ಸಹಕರಿಸುತ್ತಾರೆ.

ಹೂವಿನ ಸಸ್ಯಗಳನ್ನು ಹೇಗೆ ಸಂಗ್ರಹ ಮಾಡೋದು :

ಹೂವಿನ ಸಸ್ಯಗಳನ್ನು, ಅದರ ಬೀಜಗಳನ್ನು ಸುಲಭ ಉಪಾಯ ಎಂದರೆ ಸ್ನೇಹಿತರ ಮನೆಗೆ ಹೋದಾಗ ನಮ್ಮಲ್ಲಿ ಇಲ್ಲದ ಸಸಿಗಳನ್ನು ಪಡೆದುಕೊಂಡು, ಅವರಲ್ಲಿ ಇಲ್ಲದ ಸಸಿಗಳನ್ನು ನಾವು ಕೊಟ್ಟು ಈ ರೀತಿಯಾಗಿ ಮಾಡಬಹುದು ಇಲ್ಲದೆ ಹೋದಲ್ಲಿ ನರ್ಸರಿಗಳಿಂದ ತಂದು ನಾಟಿ ಮಾಡಬೇಕು.

ನನಗು ತುಂಬಾ ಜನ ಸ್ನೇಹಿತೆಯರು ಹೂವಿನ ಗಿಡಗಳನ್ನು ನೀಡುತ್ತಾರೆ ಆ ರೀತಿಯಾಗಿ ಹೂವಿನ ಗಿಡಗಳನ್ನು ಹೆಚ್ಚು ಮಾಡಲು ನನಗೆ ಅನುಕೂಲ ಆಗಿದೆ.

ಸಸಿಗಳು ನನ್ನ ಬಳಿ ಯಾರಾದರೂ ಬೇಕು ಎಂದು ಕೇಳಿದರೆ ಅವರಿಗೂ ನಾನು ಕೊಡುತ್ತೇನೆ.

ಸಸಿಗಳಿಗೆ ಗೊಬ್ಬರ ಬಳಕೆ :

ಸಸಿಗಳನ್ನು ತಂದ ಕೂಡಲೇ ನೆಲದ ಮೇಲೆ ನಾಟಿ ಮಾಡೋದಿಲ್ಲ. ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ನಾಟಿ ಮಾಡಿ ಸರಿಯಾಗಿ ಜೀವ ಬಂದ ಮೇಲೆ ನಾಟಿ ಮಾಡುತ್ತೇನೆ.

ಕೋಕೋ ಪಿಟ್, ಹಟ್ಟಿ ಗೊಬ್ಬರ, ಸ್ವಲ್ಪ ಮಟ್ಟಿಗೆ ರಾಸಾಯನಿಕ ಗೊಬ್ಬರ ಬಳಸುತ್ತೇನೆ.ಹೂವಿನ ತೋಟ ಮಾಡುವುದರಿಂದ ನಮಗೆ ಬೇಕಾದಷ್ಟು ವ್ಯಾಯಾಮ ಸಿಗುತ್ತದೆ, ದೇವರಿಗೆ ನಮ್ಮದೇ ಹೂವು ಹಾಕಿದ ಸಂತೋಷ ಸಿಗುತ್ತದೆ.ನಾವು ಹೂವಿನ ಸಸಿಗಳನ್ನು ಬೆಳೆಸುವುದರಿಂದ ನಮಗೆ ಶುದ್ಧ ಆಮ್ಲಜನಕ ಸಿಗುತ್ತದೆ ಮನಸ್ಸಿಗೆ ನೆಮ್ಮದಿಸುತ್ತದೆ ನೋಡುವವರೆಗೂ ಮನಸ್ಸಿಗೆ ಆಹ್ಲಾದ ಸಿಗುತ್ತದೆ.

ಗಿಡಗಳನ್ನು ಬೆಳೆಸಿ ಪ್ರಕೃತಿ ಉಳಿಸಿ ಎಂಬ ಸಂದೇಶವನ್ನು ಮಾಧ್ಯಮದ ಮೂಲಕ ಜನಸಾಮಾನ್ಯರಿಗೆ ನೀಡಿದ್ದಾರೆ.

0 ಕಾಮೆಂಟ್‌ಗಳು