ನೆಲ್ಯಾಡಿ. ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸ. 23 ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗುರುಪ್ರಸಾದ್ ಕೆ ಅವರು ವರದಿ ವರ್ಷದಲ್ಲಿ 19 ಸದಸ್ಯರು ಸೇರ್ಪಡೆಗೊಂಡು ಪ್ರಸ್ತುತ 287 ಸದಸ್ಯರನ್ನು ಸಂಘ ಹೊಂದಿದ್ದು 57,900 ಪಾಲು ಬಂಡವಾಳ ಹೊಂದಿದೆ. ದಿನವಹಿ ಸರಾಸರಿ 1100ಲೀ ಹಾಲು ಸಂಗ್ರಹವಾಗುತ್ತಿದ್ದು, ವರದಿ ಸಾಲಿನಲ್ಲಿ 4.31ಲಕ್ಷ ಲೀ ಹಾಲು ಸಂಗ್ರಹಿಸಲಾಗಿದೆ. ಹಾಲು, ಪಶು ಆಹಾರ ಮಾರಾಟ ಮತ್ತು ಇತರ ಆದಾಯಗಳಿಂದ 21.48 ಲಕ್ಷ ಆದಾಯ ಬಂದಿದ್ದು ಖರ್ಚು ವೆಚ್ಚ ಗಳು ಕಳೆದು 3.45ಲಕ್ಷ ಲಾಭಾಂಶ ಬಂದಿರುತ್ತದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ12% ಡಿವಿಡೆಂಟ್ ಹಾಗೂ ಪ್ರತಿ ಲೀ ಹಾಲಿಗೆ 36ಪೈಸೆ ಬೋನಸ್ ನೀಡಲಾಗುವುದು ಎಂದರು.
ಸಂಘದಿಂದ ಕಾಲು ಬಾಯಿ ನಿವಾರಣಾ ಲಸಿಕಾ ಶಿಬಿರ, ಜಾನುವಾರುಗಳ ಕೃತಕ ಗರ್ಭಧಾರಣಾ ಸೌಲಭ್ಯ, ಜಂತು ಹುಳ ನಿವಾರಣಾ ಮಾತ್ರೆ ಸಹಾಯ ಧನ ರೂಪದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಂಘದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಮಾತನಾಡಿ ಪ್ರಸ್ತುತ ಸಂಘವು ಹಾಲಿನ ಕೊರತೆಯನ್ನು ಎದುರಿಸುತ್ತಿರಲು ಕಾರಣ ಯುವಜನತೆ ಹೈನುಗಾರಿಕೆಯಿಂದ ಹಿಂದೆ ಸರಿಯುತ್ತಿರುವುದು,ಹಿರಿಯರು ಕೂಡ ಮಕ್ಕಳನ್ನು ಹೈನುಗಾರಿಕೆಯಿಂದ ದೂರವಿಡುತ್ತಿರುವುದು ಮುಖ್ಯ ಕಾರಣವಾಗಿದೆ,ಜೊತೆಗೆ ಹಾಲಿನ ದರ ಕಡಿಮೆ, ಉತ್ಪಾದನಾ ವೆಚ್ಚ ಜಾಸ್ತಿಯಾಗುತ್ತಿರುವುದು ಕಾರಣಗಳಾಗಿವೆ,ರೈತರು ದನ ಕರುಗಳನ್ನು ಮಾರುವ ಸ್ಥಿತಿ ಬಂದಿದೆ. ಸರಕಾರ ಹಾಲು ಉತ್ಪಾದಕರ ಸಂಘ ದ ಮೂಲಕ ನೀಡುವ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ ಒಂದಷ್ಟು ಪರಿಣಾಮಕಾರಿ ಯಾಗಿ ಹೈನುಗಾರಿಕೆಯನ್ನು ಮಾಡಬಹುದೆಂದು ಮಾಹಿತಿ ನೀಡಿದರು.

ವೇದಿಕೆಯಲ್ಲಿ ನಿರ್ದೇಶಕರಾದ ವೆಂಕಪ್ಪ ನಾಯ್ಕ, ಕಾಂತಪ್ಪ ಗೌಡ, ಜಯರಾಮ್ ಬಿ, ದಯಾನಂದ ಎಚ್, ಉಮೇಶ್ ಪಿ, ಸೇಸಮ್ಮ, ವಾರಿಜ, ಗಿರಿಜ, ಹೇಮಾವತಿ, ಪ್ರೇಮಾವತಿ ಉಪಸ್ಥಿತರಿದ್ದರು,
ಸಂಘದ ಸದಸ್ಯರಾದ ಕೆ. ವಿ. ವ್ಯಾಸ, ಜಯರಾಮ್ ಶೆಟ್ಟಿಗೌರಿಜಾಲ್,ಬಾಲಕೃಷ್ಣ ಬಾಣಜಾಲ್, ಪ್ರಶಾಂತ್, ರವಿಚಂದ್ರ ಹೊಸವಕ್ಳು, ಜಯಾನಂದ ಬಂಟ್ರಿಯಾಲ್ ಮೊದಲಾದವರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಹೇಮಂತ್ ಕುಮಾರ್ ಸ್ವಾಗತಿಸಿ, ನಳಿನಾಕ್ಷಿ ಪ್ರಾರ್ಥಿಸಿ,ಕಾರ್ಯದರ್ಶಿ ಅನುರಾಧ ಹೊಸವಕ್ಳು ವರದಿ ನೀಡಿದರು ಮಹಾಬಲ ಶೆಟ್ಟಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.
ಸಿಬ್ಬಂದಿಗಳಾದ ಪರಮೇಶ್ವರ, ಗಿರಿಜ, ಜಯರಾಮ್, ವಿಜಯ್, ಜಯಂತಿ ಸಹಕರಿಸಿದರು.ವಿದ್ಯಾರ್ಥಿಗಳಿಗೆ ವಿದ್ಯಾನಿಧಿ, ಡೈರಿಗೆ ಹೆಚ್ಚು ಹಾಲು ಹಾಕಿದ ಸದಸ್ಯರನ್ನು ಸನ್ಮಾನಿಸಲಾಯಿತು.
0 ಕಾಮೆಂಟ್‌ಗಳು