ಕುಕ್ಕೆ ಸುಬ್ರಹ್ಮಣ್ಯ:ಜು,15,ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಅಭಿವೃದ್ದಿ ಪ್ರಾಧಿಕಾರ ಆದರೇ ಆಗುವ ಸಮಸ್ಯೆಗಳ ಬಗ್ಗೆ ತಿಳಿಸುವ ದೃಷ್ಟಿಯಿಂದ ಕರ್ನಾಟಕ ಸರಕಾರದ ಸಂಬಂಧ ಪಟ್ಟಇಲಾಖೆ ಮಂತ್ರಿಗಳಿಗೆ ಮನವಿಸಲ್ಲಿಸಲು ಬೆಂಗಳೂರಿಗೆ ತೆರಳಿದ ಸುಬ್ರಹ್ಮಣ್ಯ ಕಾಂಗ್ರೆಸ್ ನಿಯೋಗ.ಅಭಿವೃದ್ಧಿ ಪ್ರಾಧಿಕಾರ ಬಗ್ಗೆ ಮಾತುಕಥೆ ನಡಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಅಭಿವೃದ್ಧಿ ಪ್ರಾಧಿಕಾರ ವಿಚಾರ ಕೈಬಿಟ್ಟು ಶೀಘ್ರ ವಾಗಿ ಆಡಳಿತ ವ್ಯವಸ್ಥಾಪನ ಸಮಿತಿ ರಚನೆ ಮಾಡುತ್ತೇವೆ ಎಂದು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರು ಭರವಸೆ ನೀಡಿದ್ದಾರೆ ಎಂದು ಸುಬ್ರಹ್ಮಣ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಇಂದು ಸುಬ್ರಮಣ್ಯ ಕಾಂಗ್ರೆಸ್ ನಿಯೋಗವು ರಾಮಲಿಂಗಾರೆಡ್ಡಿ,ಖಾದರ್, ಮಂಜುನಾಥ ಭಂಡಾರಿ ಭೇಟಿಮಾಡಿ ಮನವಿ ಸಲ್ಲಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
0 ಕಾಮೆಂಟ್‌ಗಳು