ಕಡಬ: ಶ್ರೀ ಉಳ್ಳಾಲ್ತಿ ಹಗ್ಗಜಗ್ಗಾಟ ತಂಡ ಮತ್ತು ವೀರ ಸಾವರ್ಕರ್ ಅಟ್ಟಿ ಮಡಿಕೆ ತಂಡ ಕಲ್ಲುಗುಡ್ಡೆ ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇವರುಗಳ ಜಂಟಿ ಆಶ್ರಯದಲ್ಲಿ ಜು.6ರಂದು ಬೆಳಗ್ಗೆ ಗಂಟೆ 10ರಿಂದ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಶಾಲಾ ವಠಾರದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ನೂಜಿಬಾಳ್ತಿಲ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಾಯಿರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ . ಡಾ|ಸಿ.ಕೆ.ಶಾಸ್ತ್ರಿ ಕಾರ್ಯಕ್ರಮ ಉದ್ಘಾಟಿಸುವರು. ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್, ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷ ಚಂದ್ರಶೇಖರ ಹಳೆನೂಜಿ, ಮುಖ್ಯಶಿಕ್ಷಕಿ ಸುಂದರಿ, ಸಿಆರ್‌ಪಿ ಗಣೇಶ್ ಎನ್.ಗಣ್ಯರ ಉಪಸ್ಥಿಯಲ್ಲಿ ಶಿಬಿರ ನಡೆಯಲಿದೆ.
0 ಕಾಮೆಂಟ್‌ಗಳು